ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರಿಷಬ್ ಶೆಟ್ಟಿ ಗೆ ಅತ್ಯುತ್ತಮ ನಟ ,ಕೆಜಿಎಫ್ -2 ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ
70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಲಾಗಿದ್ದು ” ಕಾಂತಾರ” ಚಿತ್ರದ ಅತ್ಯುತ್ತಮ ನಟನೆಗಾಗಿ ನಟ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಕೆಜಿಎಫ್ – 2 ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆ ಬಾಜನವಾಗಿದೆ.
ನಾನು ಅವನಲ್ಲ ಅವಳು ಚಿತ್ರದ ನಟನೆಗಾಗಿ ಸಂಚಾರಿ ವಿಜಯ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿತ್ತು ಆದಾದ ನಂತರ ಕಾಂತಾ ರ ಚಿತ್ರದ ನಟನೆಗೆ ರಿಷಬ್ ಶೆಟ್ಟಿ ಅವರಿಗೆ ಸಿಕ್ಕಿರುವುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿ
ಅತ್ಯುತ್ತಮ ನಟಿ ಪ್ರಶಸ್ತಿ ‘ತಿರುಚಿತ್ರಾಂಬಲಂ’ಗಾಗಿ ನಿತ್ಯಾ ಮೆನೆನ್ ಮತ್ತು ‘ಕಚ್ ಎಕ್ಸ್‌ಪ್ರೆಸ್’ಗಾಗಿ ಮಾನಸಿ ಪರೇಖ್ ಅವರ ಜಂಟಿಯಾಗಿ ಪ್ರಶಸ್ತಿಯನ್ನು ಹಂಚಿಕೊಂಡಿದ್ಸಾರೆ
ಕೆಜಿಎಫ್ – 2 ಕನ್ನಡದ ಅತ್ಯುತ್ತಮ ಚಿತ್ರ ಎನ್ನುವ ಪ್ರಶಸ್ತಿ ಗೆ ಬಾಜಬಾಗಿದೆ. ಕಾಂತಾರ ಮತ್ತು ಕೆಜಿಎಪ್ -2 ಚಿತ್ರಗಳನ್ನು ಹೊಂಬಾಳೆ ಪಿಲ್ಮ್ನ. ವಿಜಯ್ ಕಿರಂಗದೂರು ನಿರ್ಮಾಣ ಮಾಡಿದ್ದು ಡಬ್ಬಲ್ ಧಮಾಕ ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂಧನೆ
ಕಾಂತಾರ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಿಶಬ್ ಶೆಟ್ಟಿ ಹಾಗು ಕೆಜಿಎಫ್ – 2 ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಗೆ ಭಾಜನವಾಗಿದೆ. ಇದೆ ವೇಳೆ ಮದ್ಯಂತರ ಚಿತ್ರದ ಸಂಕಲನಕ್ಕಾಗಿ ಸುರೇಶ್ ಅರಸ್ ಅವರಿಗೆ ಪ್ರಶಸ್ತಿ ಬಂದಿದ್ದು ಎಲ್ಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂಧಿಸಿದ್ದಾರೆ
ಶರ್ಮಿಳಾ ಟ್ಯಾಗೋರ್ ಮತ್ತು ಮನೋಜ್ ಬಾಜಪೇಯಿ ಅಭಿನಯದ ‘ಗುಲ್ಮೊಹರ್’ ಅತ್ಯುತ್ತಮ ಹಿಂದಿ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.
ಮಳೆಯಾಲಂ ನ ಅಟ್ಟಂ ಅತ್ಯುತ್ತಮ ಚನಲಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಕನ್ನಡದ ಕಾಂತಾರ ಚಿತ್ರಕ್ಕೆ ಸಂಪೂರ್ಣ ಮನರಂಜನೆಯ ಅತ್ಯುತ್ತಮ ಪ್ರಶಸ್ತಿ ಇದೇ ಚಿತ್ರದಲ್ಲಿ ನಟನೆಗಾಗಿ ರಿಷಬ್ ಈ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.
ಉಂಚೊ ಹಿಂದಿ ಚಿತ್ರದ ನಿರ್ದೇಶನಕ್ಕಾಗಿ ಸೂರಜ್ ಆರ್. ಬಾರ್ಜಾತ್ಯ ಅವರಿಗೆ ಅತ್ಯತ್ತಮ ನಿರ್ದೇಶಕ ಪ್ರಶಸ್ತಿ, ನಿತ್ಯಾಮೆನನ್ ಮತ್ತು ಮಾನ್ಸಿ ಪಾರೆಕ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರತಿದೆ ಎಂದರು.
ಭ್ರಂಹಾತ್ರ ಚಿತ್ರದಲ್ಲಿ ಗಾಯನಕ್ಕಾಗಿ ಅರ್ಜಿತ್ ಸಿಂಗ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ, ಇದೇ ಚಿತ್ರಕ್ಕೆ ನಿರ್ದೇಸಿದ ಪ್ರೀತಂ ಅವರಿಗೆ ಅತ್ಯತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ಪೊನಿಯನ್ ಸೈಲಂನ್ -2 ಚಿತ್ರಕ್ಕಾಗಿ ಎ.ಆರ್.ರೆಹಮಾನ್ ಆ ಅತ್ಯತ್ತಮ ಹಿನ್ನೆಲೆ ಸಂಗೀತನಿರ್ದೇಶಕ ಪ್ರಶಸ್ತಿ ದೊರೆತಿದೆ.
ಕನ್ನಡದ ಜನರಿಗೆ ಪ್ರಶಸ್ತಿ
ಕಾಂತಾರ ಚಿತ್ರದ ನಟನೆಯಗೆ ರಿಷಬ್ ಶೆಟ್ಟಿ ಮತ್ತು ಕೆಜಿಎಫ್ – 2 ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಬಂದಿರುವುದು ಸಂತಸದ ಸಂಗತಿ ಎಂದು ನಿರ್ಮಾಪಕ ವಿಜಯ್ ಕಿರಂಗದೂರು ಹೇಳಿದ್ದಾರೆ
ಎರಡೂ ಚಿತ್ರಗಳಿಗೆ ಬಂದಿರುವ ಪ್ರಶಸ್ತಿಯನ್ನು ಕನ್ನಡದ ಜನರಿಗೆ ಅರ್ಪಣೆ ಮಾಡುತ್ತೇವೆ. ಜೊತೆಗೆ ತಂಡಕ್ಕೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ
ಯಾರಿಗೆಲ್ಲಾ ಪ್ರಶಸ್ತಿ
- ಅತ್ಯುತ್ತಮ ನಟ – ರಿಷಬ್ ಶೆಟ್ಟಿ – ಕಾಂತಾರ
- ಅತ್ಯುತ್ತಮ ನಟಿ ನಿತ್ಯಾ ಮೆನನ್ – ತಿರುಚಿತ್ರಂಬಾಲಮ್ ಮತ್ತು ಮಾನಸಿ ಪರೇಖ್ – ಕಚ್ ಎಕ್ಸ್ ಪ್ರೆಸ್
- ಅತ್ಯುತ್ತಮ ಚಿತ್ರ : ಗುಲ್ ಮೊಹರ್
- ಅತ್ಯುತ್ತಮ ನಿರ್ದೇಶಕ : ಸೂರಜ್ ಬರ್ಜಾತ್ಯ
- ಅತ್ಯುತ್ತಮ ಪೋಷಕ ನಟಿ : ನೀನಾ ಗುಪ್ತ
- ಅತ್ಯುತ್ತಮ ಮಲೆಯಾಳಂ ಚಿತ್ರ – ಅಟ್ಟಂ
- ಅತ್ಯುತ್ತಮ ಕನ್ನಡ ಚಿತ್ರ : ಕೆಜೆಎಫ್ -2
- ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್
- ಅತ್ಯುತ್ತಮ ಸಂಗೀತ ನಿರ್ದೇಶಕ : ಎ.ಆರ್ ರೆಹಮಾನ್