ಹೆಜ್ಜಾರು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ: ಹಿರಿತೆರೆಗೆ ಬಂದ ಕಿರುತೆರೆಗೆ ಸ್ಟಾರ್ ಮೇಕರ್ ರಾಮ್ ಜಿ

ಕನ್ನಡದ ಮೊದಲ ಪ್ಯಾರಲಲ್ ಸಿನಿಮಾ ಹೆಜ್ಜಾರು ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಮೂಲಕ ಕಿರುತೆರೆಯ ಸ್ಟಾರ್ ಮೇಕರ್ ರಾಮ್ ಜಿ ಹಿರಿತೆರೆಯಲ್ಲಿಯೂ ಕಮಾಲ್ ಮಾಡಲು ಮುಂದಾದ್ದಾರೆ.

ಹೆಜ್ಜಾರು ಕಿರುತೆರೆಯ ಖ್ಯಾತ ನಿರ್ಮಾಣ ಸಂಸ್ಥೆ ರಾಮ್ ಜೀ ಟಾಕೀಸ್ ಮತ್ತು ಗಗನ ಎಂಟರ್ ಪ್ರೈಸಸ್ ಚೊಚ್ಚಲ ನಿರ್ಮಾಣದ ಹೆಜ್ಜಾರು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಕನ್ನಡ ಚಿತ್ರರಂಗದ ಮೊದಲ ಪ್ಯಾರಲಲ್ ಸಿನಿಮಾ ಅನ್ನೋ ಅಡಿ ಬರಹದೊಂದಿಗೆ. ಕುತೂಹಲ ಕೆರಳಿಸುವಂತಹ ಹಲವು ಆಯಾಮಗಳಿರೋ ಪೋಸ್ಟರ್ ನ ಚಿತ್ರತಂಡ ರಿಲೀಸ್ ಮಾಡಿದೆ. ಪೇಯಿಂಟಿಂಗ್ ಮೂಲಕ ಚಿತ್ರದ ಒಟ್ಟು ಆಶಯವನ್ನ ಈ ಮೋಷನ್ ಪೋಸ್ಟರ್ ಮೂಲಕ ಬಣ್ಣಿಸಲಾಗಿರೋದು ವಿಶೇಷ.

ಹರ್ಷ ಪ್ರಿಯ ನಿರ್ದೇಶನ, ರಾಮ್ ಜೀ ನಿರ್ಮಾಣದ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ಅಮರ್ ಛಾಯಾಗ್ರಹಣವಿದೆ. ಭಗತ್ ಅನ್ನೋ ನವ ನಾಯಕ ನಟ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸ್ತಿದ್ದು, ಖಾಸಗಿ ಪುಟಗಳು ಖ್ಯಾತಿಯ ಶ್ವೇತಾ ಡಿಸೋಜಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಗೋಪಾಲ ದೇಶಪಾಂಡೆ, ನವೀನ್ ಕೃಷ್ಣ, ಮುನಿ, ಅರುಣ ಬಾಲರಾಜ್ ಸೇರಿದಂತೆ ಪ್ರತಿಭಾವಂತ ತಾರಾಬಳಗ ಚಿತ್ರದಲ್ಲಿದೆ.

ಹೆಜ್ಜಾರು ವಿಭಿನ್ನ ಪ್ರಯೋಗದ ಜೊತೆಗೆ ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಟ್ರೀಟ್ ಕೊಡುವಂತಹ ಸಿನಿಮಾ ಆಗಲಿದೆ ಅನ್ನೋ ಮಾತುಗಳನ್ನಾಡಿದ ಚಿತ್ರತಂಡ. ಹಲುವು ವಿಶೇಷತೆಗಳಿಂದ ಕೂಡಿರೋ ಈ ಚಿತ್ರತಂಡ ಇಲ್ಲಿಂದ ಪ್ರಚಾರ ಕಾರ್ಯವನ್ನ ಆರಂಭಿಸಿದೆ. ಅಂದ್ಹಾಗೆ ಚಿತ್ರದ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಗಳು ಭರದಿಂದ ಸಾಗ್ತಿದ್ದು, ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಚಿತ್ರವನ್ನ ಬಿಡುಗಡೆ ಮಾಡೋ ಸನ್ನಾಹದಲ್ಲಿದೆ ಚಿತ್ರತಂಡ.
ಹೆಜ್ಜಾರು ಸಾರಾಂಶ ಏನು:
ಸಮಾನಾಂತರ ಬದುಕು ಎಂಬ ಪರಿಕಲ್ಪನೆಯಡಿಯಲ್ಲಿ ಮನುಷ್ಯನ ಬಗೆಹರಿಯದ ಭಾವನೆಗಳ ವಿವಿಧ ಮಜಲುಗಳನ್ನು ಹೇಳಲು ಹೊರಟಿರುವ ಅನೂಹ್ಯ ಕಥಾಹಂದರವನ್ನು ಹೊಂದಿರುವ ಚಿತ್ರವೇ ಹೆಜ್ಜಾರು. ಸಮಾನಾಂತರ ಬದುಕು ಎಂದರೆ ಎರಡು ಬೇರೆಬೇರೆ ಕಾಲಘಟ್ಟದಲ್ಲಿ ಹುಟ್ಟಿದ, ಇಬ್ಬರ ಜೀವನದಲ್ಲಿ ಒಂದೇಥರದ ಘಟನೆಗಳು ನಡೆಯುವುದಾಗಿರುತ್ತದೆ.
1965 ರ ಕಾಲಘಟದಲ್ಲಿ ಹುಟ್ಟುವ ರಾಜಾರಾಮ ದೊಡ್ಡವನಾದ ಮೇಲೆ ಬದುಕಿನಲ್ಲಿ ಅಮೂಲ್ಯವಾದದ್ದನ್ನು ಕಳೆದುಕೊಳ್ಳುತ್ತಾನೆ. ತನ್ನ ನೆಮ್ಮದಿಯನ್ನು ಕಸೆದುಕೊಂಡವರನ್ನು ಏಕಾಂಗಿಯಾಗಿ ಹುಡುಕುವ ರಾಜಾರಾಮನಿಗೆ, 2995 ರಲ್ಲಿ ಹುಟ್ಟುವ ಭಗತ್ ಜೀವನದಲ್ಲಿ ಕೂಡಾ, ತನ್ನ ಬದುಕಿನಲ್ಲಿ ನಡೆದ ಘಟನೆಗಳೇ ನಡೆಯುತ್ತಿವೆಯೆಂದು ಅರ್ಥವಾಗುತ್ತದೆ.
ಭಗತ್ ನನ್ನು ಫಾಲೋ ಮಾಡಿದರೆ ತಾನು ಹುಡುಕುತ್ತಿರುವ ವ್ಯಕ್ತಿ ಸಿಗುತ್ತಾನೆಂದು ನಂಬುವ ರಾಜಾರಾಮ, ಭಗತ್ ನನ್ನು ಹಿಂಬಾಲಿಸತೊಡಗುತ್ತಾನೆ. ಆದರೆ ಮುಂದೆ ಇಬ್ಬರ ಬದುಕಿನಲ್ಲಿಯೂ ನಂಬಲಸಾಧ್ಯವಾದ ಬೆಳವಣಿಗೆಗಳು ನಡೆದು ರಾಜಾರಾಮನ ಪ್ರಶ್ನೆ ಮತ್ತಷ್ಟು ಕಗ್ಗಂಟ್ಟಾಗುತ್ತ ಸಾಗುತ್ತದೆ. ಕಥೆಯ ಕೊನೆಯಲ್ಲಿ ರಾಜಾರಾಮನ ಪ್ರಶ್ನೆಗೆ ಉತ್ತೆರ ಸಿಗುತ್ತದೆಯೇ ಅಥವಾ ಸಿಕ್ಕ ಉತ್ತರವೇ ನಿಜವಾದ ಪ್ರಶ್ನೆಯಾಗಿತ್ತೆ ಎಂಬ ಚಿತ್ರಕಥೆಯ ರೋಚಕ ದ್ವಂದ್ವವನ್ನು ಖುರ್ಚಿಯ ಅಂಚಲ್ಲಿ ಕೂತು ಬೆಳ್ಳಿತೆರೆಯ ಮೇಲೆ ನೋಡಬೇಕು.
ಚಿತ್ರದಲ್ಲಿ ಯಾರಾರು ಇದ್ದಾರೆ. ತಂತ್ರಜ್ಞರು ಯಾರು
ಮುಖ್ಯ ಕಲಾವಿದರು
ನಾಯಕ ನಟ : ಭಗತ್ ಆಳ್ವ
ನಾಯಕಿ : ಲಿಯೋನಿಲ್ಲಾ ಶ್ವೇತಾ ಡಿಸೋಜ
ಗೋಪಾಲ್ ದೇಶ್ಪಾಂಡೆ
ನವೀನ್ ಕೃಷ್ಣ
ಅರುಣಾ ಬಾಲರಾಜ್
ಮುನಿ
ವಿನೋದ್ ಭಾರತಿ
ನಿರ್ಮಾಣ ಸಂಸ್ಥೆ : ಗಗನ ಎಂಟರ್ ಪ್ರೈಸಸ್
ಅರ್ಪಿಸುವ : ಕೆ. ಎಸ್. ರಾಮ್ ಜಿ
ನಿರ್ಮಾಪಕರು : ವಿಮಲ ರಾಮ್ಜಿ. ಎನ್
ಸಹ ನಿರ್ಮಾಪಕರು : ಸುನಿತಾ. ಟಿ. ಆರ್
ನಿರ್ದೇಶಕರು : ಹರ್ಷಪ್ರಿಯ
ಛಾಯಾಗ್ರಹಣ : ಅಮರ್ ಗೌಡ
ಸಂಗೀತ ನಿರ್ದೇಶನ : ಪೂರ್ಣಚಂದ್ರ ತೇಜಸ್ವಿ
ಸಂಭಾಷಣೆ : ಕಾರ್ತಿಕ್ ಭಟ್
ಸಂಕಲನ : ಅಜಿತ್ ಡ್ರ್ಯಾಕುಲಾ
ನೃತ್ಯ ಸಂಯೋಜನೆ : ಭಜರಂಗಿ ಮೋಹನ್
ಸಾಹಸ ನಿರ್ದೇಶನ : ನರಸಿಂಹ
ಕಲೆ ಮತ್ತು ನಿರ್ಮಾಣ ವಿನ್ಯಾಸ : ಗಿರೀಶ್ ಕನಕಪುರ
ಕಲೆ : ಮೋಹನ್ ಪಂಡಿತ್
ಸಹ ನಿರ್ದೇಶನ: ದಯಾನಂದ. ಜಿ
ಮ್ಯಾನೇಜರ್ : ಗೋಪಾಲ್ – ಪ್ರಭುದೇವ