Gaurishankar is a talented actor who became a 'common man' after the movie "Kerebete".

“ಕೆರೆಬೇಟೆ” ಚಿತ್ರದ ಬಳಿಕ ‘ಕಾಮನ್ ಮ್ಯಾನ್’ ಆದ ಪ್ರತಿಭಾನ್ವಿತ ನಟ ಗೌರಿಶಂಕರ್ - CineNewsKannada.com

“ಕೆರೆಬೇಟೆ” ಚಿತ್ರದ ಬಳಿಕ ‘ಕಾಮನ್ ಮ್ಯಾನ್’ ಆದ ಪ್ರತಿಭಾನ್ವಿತ ನಟ ಗೌರಿಶಂಕರ್

‘ಕೆರೆಬೇಟೆ” ಚಿತ್ರದ ಮೂಲಕ ಸಧಬಿರುಚಿತ್ರ ವಿಷಯವನ್ನು ಜನರ ಮುಂದಿಟ್ಟು ಹಲವು ಪ್ರಶಸ್ತಿ ಮತ್ತು ಉತ್ತಮ ಪ್ರತಿಕ್ರಿಯೆ ಪಡೆದ ನಂತರ ಪ್ರತಿಭಾನ್ವಿತ ನಟ ಗೌರಿಶಂಕರ್ ಇದೀಗ “ಕಾಮನ್ ಮ್ಯಾನ್ “ ಆಗಿದ್ದಾರೆ,. ಈ ಬಾರಿ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಕೈಜೋಡಿಸಿರುವುದು ಗೌರಿಶಂಕರ್ ಅವರ ಪ್ರತಿಭೆಗೆ ಕನ್ನಡಿ ಹಿಡಿದಂತಾಗಿದೆ

ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಹೇಗಿರುತ್ತೆ ಎನ್ನುವ ಎಳೆ ಇಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಕಾಮನ್ ಮ್ಯಾನ್, ಎನ್. ನರಸಿಂಹಮೂರ್ತಿ ನಿರ್ಮಾಣ ಮಾಡಿದ್ದಾರೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ನಿರ್ದೇಶನವಿರುವ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿದೆ

ನಿರ್ದೇಶಕ ಓಂ ಸಾಯಿಪ್ರಕಾಶ್ ಮಾತನಾಡಿ ನಿರ್ದೇಶನದ 106ನೇ ಚಿತ. ಒಬ್ಬ ಕಾಮನ್ ಮ್ಯಾನ್ ರಾಜ್ಯದ ಮುಖ್ಯಮಥಿರ ಆದರೆ ಏನು ಮಾಡಬಹುದು ಎನ್ನುವುದನ್ನು ಚಿತ್ರದ ಮೂಲಕ ತೋರಿಸಿದ್ದೇವೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಆಸೆ ಇರುತ್ತೆ. ನಾಯಕ ಒಬ್ಬ ಲಾಯರ್, ಆತ ಅನಿರೀಕ್ಷಿತವಾಗಿ ರಾಜ್ಯದ ಮುಖ್ಯಮಂತ್ರಿ ಆಗ್ತಾನೆ. ನಂತರ ಆತ ಏನೇನು ಮಾಡಬಹುದು, ಸಮಾಜದಲ್ಲಿ ಏನಾದರೂ ಸುಧಾರಣೆ ಮಾಡಲು ಸಾಧ್ಯವಾಯಿತಾ ಎಂಬುದನ್ನು ಕುತೂಹಲಕರವಾಗಿ ಹೇಳೋ ಪ್ರಯತ್ನ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು

ನಾಯಕನ ತಂದೆ ಒಬ್ಬ ಕಲಾವಿದ. ಮಗ ಲಾಯರ್ ಆಗಿ ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ಎನ್ನುವುದು ಆತನ ಆಸೆಯಾಗಿರುತ್ತೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಅವಕಾಶ ಬರುತ್ತೆ. ಅದೇ ರೀತಿ ನಾಯಕನಿಗೂ ಅದು ಬಂದಾಗ ಅದನ್ನು ಆತ ಹೇಗೆ ಬಳಕೆ ಮಾಡಿಕೊಳ್ಳುತ್ತಾನೆ ಎನ್ನುವುದು ಚಿತ್ರದ ತಿರುಳು

ನಾಯಕಿ ಸೋನಾ ಲದ್ವಾ ಕೂಡ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಪಾತ್ರಕ್ಕೆ ಏನು ಬೇಕೋ ಅದಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಬಾಂಬೆ ಮೂಲದ ಮತ್ತೊಬ್ಬ ನಟಿಯೂ ಚಿತ್ರದಲ್ಲಿದ್ದಾರೆ. ಕಂಟೆಂಟ್ ಸಿನಿಮಾ, ಜಾತ್ರೆ ಸಿನಿಮಾ ಅಲ್ಲ, ಶೈಲೇಶ್ ತುಂಬಾ ಉತ್ತಮ ಸಂಭಾಷಣೆ ಬರೆದಿದ್ದಾರೆ ಎಂದು ಹೇಳಿದರು.

ನಾಯಕ ಗೌರಿಶಂಕರ್ ಮಾತನಾಡಿ ರಾಜಹಂಸ, ಕೆರೆಬೇಟೆ ನಂತರ ಅಭಿನಯದ ಮೂರನೇ ಚಿತ್ರವಿದು. ನಿರ್ದೇಶಕರು ಹಾಕಿಕೊಂಡ ಪ್ಲಾನ್ ಪ್ರಕಾರವೇ ಸಿನಿಮಾ ಮಾಡಿ ಮುಗಿಸಿದ್ದಾರೆ. ಕೆರೆಬೇಟೆ ನಂತರ ಒಂದೊಳ್ಳೆ ಕಥೆಗಾಗಿ ಕಾಯ್ತಿದ್ದೆ.ಕಾಲ್ ಬಂದಾಗ ಆಶ್ಚರ್ಯವಾಯ್ತು. ಬಯಸಿದಂಥ ಪಾತ್ರವೇ ಹುಡುಕಿಕೊಂಡು ಬಂದಿತ್ತು. ನಿರ್ದೇಶಕರು ನನ್ನಂಥ ಚಿಕ್ಕ ಕಲಾವಿದನಿಗೆ ಗಂಟೆಯವರೆಗೆ ತಾಳ್ಮೆಯಿಂದ ಕಥೆ ಹೇಳಿದರು. ಪಾತ್ರಗಳು, ದೃಶ್ಯಗಳನ್ನು ಆರಂಭದಿಂದ ಎಂಡ್ ವರೆಗೆ ನೀಟಾಗಿ ತೆಗೆದುಕೊಂಡು ಹೋಗಿದ್ದರು. ತುಂಬಾ ಶಿಸ್ತುಬದ್ದವಾಗಿ ಸಿನಿಮಾ ಮಾಡುತ್ತಾರೆ. ನಮಗೆಲ್ಲ ಅವರು ದೊಡ್ಡ ಪಾಠವಾಗಿದ್ದಾರೆ. ಯಾವ ಸಿನಿಮಾನೂ ಕಥೆಗಿಂತ ದೊಡ್ಡದಲ್ಲ ಎಂಬ ಅವರ ಮಾತು ಖಂಡಿತ ನಿಜ. ನನಗೂ ಅಡ್ವೊಕೇಟ್ ಆಗಬೇಕೆಂಬ ಆಸೆ ಇತ್ತು ಎಂದು ಹೇಳಿದರು.

ನಾಯಕಿ ಸೋನಾ ಲದ್ವಾ ಮಾತನಾಡಿ ನಿರ್ಮಾಪಕರ ಜತೆ 2 ಸಿನಿಮಾ ಮಾಡಿದ್ದೆ. ಮೂರನೇ ಚಿತ್ರ ಎಂದು ಹೇಳಿದರು.

ಛಾಯಾಗ್ರಾಹಕ ಜೆ.ಜಿ.ಕೃಷ್ಣ ಮಾತನಾಡಿ ನನ್ನ ಹಾಗೂ ಥ್ರಿಲ್ಲರ್ ಮಂಜುದು ಹಿಟ್ ಕಾಂಬಿನೇಶನ್ ಅನ್ನೋ ಮಾತಿದೆ. ಮಂಜು ತುಂಬಾ ರಿಸ್ಕ್ ತಗೊಂಡು ಆಕ್ಷನ್ ಕಂಪೋಸ್ ಮಾಡಿದ್ದಾರೆ. ಚಿತ್ರಕ್ಕೆ ನನ್ನಜತೆ ಮಗ ದೀಪಕ್ ಕೂಡ ಕ್ಯಾಮೆರಾ ವರ್ಕ್ ಮಾಡಿದ್ದಾನೆ ಎಂದರು.

ನಿರ್ಮಾಪಕ ಎನ್. ನರಸಿಂಹಮೂರ್ತಿ ಮಾತನಾಡಿ ಚಿಕ್ಕ ವಯಸಿನಿಂದಲೂ ರಂಗಭೂಮಿಯ ನಂಟಿದೆ. ಈ ಹಿಂದೆ 2 ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ, ಅದರಿಂದ ಸಾಕಷ್ಟು ಪಾಠವನ್ನೂ ಕಲಿತೆ. ಇದು 3ನೇ ಚಿತ್ರ. ಇಂಥ ನಿರ್ದೇಶಕರ ಜತೆ ಎಷ್ಟು ಸಿನಿಮಾ ಬೇಕಾದ್ರೂ ಮಾಡಬಹುದು. ಮಾತಿನ ಭಾಗ 40 ದಿನ ಶೂಟಿಂಗ್ ಅಂದಿದ್ದರು. 32 ದಿನಕ್ಕೇ ಮುಗಿಸಿದರು. ಚಿತ್ರದಲ್ಲಿ ಮುಖ್ಯಮಂತ್ರಿಯ ಪಾತ್ರ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಟೀಸರ್ ಆಡಿಯೋ ಟ್ರೈಲರ್ ಲಾಂಚ್ ಮಾಡುವುದಾಗಿ ಹೇಳಿದರು.

ಸಂಗೀತ ನಿರ್ದೇಶಕ ವಿನಯಚಂದ್ರ ಮಾತನಾಡಿ ಕಮರ್ಷಿಯಲಿ ಹಿಟ್ ಆಗುವಂಥ ನಾಲ್ಕು ಹಾಡುಗಳು ಹಾಗೂ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೂಡ ಮಾಡಿದ್ದೇನೆ ಎಂದರು.

ಚಿತ್ರದ ಉಳಿದ ಪಾತ್ರಗಳಲ್ಲಿ ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ನಟಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin