ಕಾಂತಾರ ಚಿತ್ರ ಬರುತ್ತಿದೆ ನಮಗೇನು ಭಯವಿಲ್ಲ ಎಂದ “ಕುಂಟೆಬಿಲ್ಲೆ” ಚಿತ್ರ ನಿರ್ದೇಶಕ
ಮತ್ತೊಂದು ಗ್ರಾಮೀಣ ಸೊಗಡಿನ ಕಥೆಯನ್ನು ತೆರೆ ಮೇಲೆ ತರಲು ‘ದಕ್ಷಯಜ್ಞ’, ‘ತರ್ಲೆ ವಿಲೇಜ್’ ಖ್ಯಾತಿಯ ನಿರ್ದೇಶಕ ಜಿಬಿಎಸ್ ಸಿದ್ದೇಗೌಡ “ಕುಂಟೆ ಬಿಲ್ಲೆ” ತೆರೆಗೆ ತರಲು ಸಜ್ಜಾಗಿದ್ದಾರೆ

ಯುವ ನಟ ಯದು ಮೊದಲ ಬಾರಿಗೆ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಮೇಘಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪೋಷಕ ಪಾತ್ರಗಳಲ್ಲಿ ,ಸುಚೇಂದ್ರ ಪ್ರಸಾದ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಕಾವ್ಯ ಮೊದಲಾದವರು ಅಭಿನಯಿಸಿದ್ದು ಚಿತ್ರ ಸೆಪ್ಟೆಂಬರ್ 26ಕ್ಕೆ ತೆರೆಗೆ ಬರಲಿದೆ
ಸಿದ್ದೇಗೌಡ ಮಾತನಾಡಿ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ಕುಂಟೆಬಿಲ್ಲೆ. ಅದೇ ಟೈಟಲ್ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಕಟ್ಟಿಕೊಡಲಿದ್ದೇವೆ ಹಳ್ಳಿಯ ಸೊಗಡಿನ ಕಥೆ. ಲವ್, ಸಸ್ಪೆನ್ಸ್ ಅಂಶಗಳಿರುವ ಚಿತ್ರ. ಮಾಡಿದ್ದೇವೆ.ಚಿತ್ರ ತೆರೆಗೆ ಬಂದ ಒಂದು ವಾರದಲ್ಲಿಯೇ “ಕಾಂತಾರ” ಬರುತ್ತಿದೆ. ಆದರೆ ಅದರಿಂದ ನಮಗೇನೂ ಭಯವಿಲ್ಲ. ಪ್ರೇಕ್ಷಕರು ನಮ್ಮ ಚಿತ್ರ ಇಷ್ಟ ಪಟ್ಟು ನೋಡುತ್ತಾರೆ ಎಂದರು

ನಿರ್ಮಾಪಕರೂ ಆದ ನಾಯಕ ನಟನ ತಂದೆ ಕುಮಾರ್ ಗೌಡ ಮಾತನಾಡಿ, ಮಗನೊಬ್ಬ ಉತ್ತಮ ನಟನಾಗಬೇಕೆನ್ನುವುದು ನನ್ನ ಬಯಕೆ. 30 ವರ್ಷದ ಹಿಂದೆ ನಾನೊಬ್ಬ ಕಲಾವಿದ ಆಗಬೇಕು ಎಂದು ಬೆಂಗಳೂರಿಗೆ ಬಂದಿದ್ದೆ. ಸಹಕಾರ ಬೆಂಬಲ ಕೇಳುತ್ತೇನೆ ಎಂದರು.
ನಾಯಕ ಯದು ಮಾತನಾಡಿ ತಂದೆಯವರ ಆಸೆ ಈಡೇರಿಸುವ ಸಲುವಾಗಿ ಈ ಕ್ಷೇತ್ರಕ್ಕೆ ಬಂದಿದ್ದು ಚಿತ್ರದಲ್ಲಿ ಒಬ್ಬ ಕೋಳಿ ಫಾರಂನಲ್ಲಿ ಕೆಲಸ ಮಾಡುವ ಯುವಕನಾಗಿ ಕಾಣಿಸಿಕೊಳ್ಳುತ್ತಿದ್ದು ಪ್ರೀತಿಯನ್ನು ಉಳಿಸಿಕೊಳ್ಳಲು ಅವನೇನು ಮಾಡುತ್ತಾನೆ ಎನ್ನುವುದು ಚಿತ್ರದ ಕಥಾ ಸಾರಾಂಶ ಎಂದರು.
ಸುಧಾ ಬೆಳವಾಡಿ ಕನ್ನಡ ಚಿತ್ರರಂಗ ಸ್ವಲ್ಪ ಕಷ್ಟದಲ್ಲಿದೆ ಹಾಗಾಗಿ ಮಾದ್ಯಮದವರು ಚಿತ್ರಕ್ಕೆ ಬೆಂಬಲ ಕೊಡಬೇಕು. ಯಾವುದೇ ದೊಡ್ದ ಸ್ಟಾರ್ ನಟರಾದರೂ ಅಭಿನಯಿಸಿದ ಚಿತ್ರಗಳ ಪ್ರಮೋಷನ್ ಗೆ ಬರಬೇಕು, ಬೆಂಬಲಿಸಬೇಕು” ಎಂದು ಹೇಳಿದರು.

ನಾಯಕ ನಟಿ ಮೇಘಶ್ರೀ ಮಾತನಾಡಿ “ನನ್ನ ಪಾತ್ರ ಬಹಳ ಬೋಲ್ಡ್ ಆಗಿದೆ. ಇಂತ ಪಾತ್ರ ಮಾಡುವುದು ಸುಲಭವಲ್ಲ. ಇದು ವಿಶೇಷ ಕಥೆ ಹಾಗೂ ಪಾತ್ರವಾಗಿರುವುದರಿಂದಲೇ ನಾನು ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ಯಾಕೆಂದರೆ ಇಡೀ ಕಥೆಯೇ ನನ್ನ ಮೇಲೆ ನಡೆಯುತ್ತದೆ. ನನ್ನ ಪಾತ್ರಕ್ಕೆ ವಿಶೇಷ ಮಹತ್ವವಿದೆ. ಅದೊಂದು ವಿಶೇಷ ದೃಶ್ಯವಿದೆ, ಅದನ್ನು ನೋಡಿದರೆ ನೀವೆಲ್ಲಾ ಬೆಚ್ಚಿ ಬೀಳುತ್ತೀರಿ. ಅಂತಹಾ ವಿಶೇಷ ಕಥೆ ಇರುವ ಸಿನಿಮಾ ಇದು. ನಾನು ಈ ಚಿತ್ರದಲ್ಲಿ ಕುಂಟೆಬಿಲ್ಲೆ, ವಾಲಿಬಾಲ್ ಸೇರಿ ವಿವುಧ ಆಟಗಳನ್ನು ಆಡಿದ್ದೇನೆ.” ಎಂದು ಹೇಳಿದರು.
ಎಸ್ ಬಿ ಶಿವ, ಕುಮಾರ ಗೌಡ ಜಿ ನಿರ್ಮಾಣ ಮಾಡಿದ್ದು ಚಿತ್ರಕ್ಕೆ ಬಿಎ ಮಧು ಸಂಭಾಷಣೆಯಿದೆ. ಹರಿಕಾವ್ಯ ಸಂಗೀತದಲ್ಲಿ ಮೂರು ಹಾಡಿದ್ದು ಮುಂಜಾನೆ ಮಂಜು ಛಾಯಾಗ್ರಹಣವಿದೆ. ಯದು, ಮೇಘಶ್ರೀ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಸುಧಾಬೆಳವಾಡಿ, ಶಂಕರ ಅಶ್ವಥ್, ಬಾಲರಾಜವಾಡಿ, ಭವಾನಿ ಮತ್ತಿತರ ಕಲಾವಿದರಿದ್ದಾರೆ

