ಕಿಚ್ಚನ ಅಳಿಯ ಸಂಚಿತ್ ನಟನೆಯ “ಮ್ಯಾಂಗೋ ಪಚ್ಚ” ಜೂನ್ 5ಕ್ಕೆ ಬಿಡುಗಡೆ
ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅಭಿನಯದ ಬಹುನಿರೀಕ್ಷೆಯ ‘ಮ್ಯಾಂಗೋ ಪಚ್ಚ’ ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟವಾಗಿದೆ. “ಮ್ಯಾಂಗೋ ಪಚ್ಚ “ ಸಿನಿಮಾ ಜೂನ್ 5ಕ್ಕೆ ತೆರೆಗೆ ಬರುತ್ತಿದೆ
ಈಗಾಗಲೇ ಟೀಸರ್ ಮತ್ತು ರೆಟ್ರೋ ಲುಕ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಸಂಚಿತ್ನನ್ನು ದೊಡ್ಡ ಪರದೆ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದರು. ಕೊನೆಗೂ ದಿನ ಬಹಿಂಗವಾಗಿದ್ದು ಸಂಚಿತ್ ಮೊದಲ ಬಾರಿಗೆ ತೆರೆಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಮೂಲಕ ಸಂಚಿತ್ ಸಿನಿಮಾರಂಗದಲ್ಲಿ ಮಾವನ ಲೆಗೆಸಿಯನ್ನು ಮುಂದುವರೆಸಲಿದ್ದಾರೆ.
ಮ್ಯಾಂಗೋ ಪಚ್ಚ ವಿವೇಕ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಮೈಸೂರು ಮೂಲದ ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ವಿಶೇಷ ಸಂಪೂರ್ಣ ಸಿನಿಮಾ ಕರ್ನಾಟಕದಲ್ಲೇ ಚಿತ್ರೀಕರಣವಾಗಿದೆ. ಅದರಲ್ಲೂ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ.
ಮ್ಯಾಂಗೋ ಪಚ್ಚ ಚಿತ್ರಕ್ಕೆ ಕೆಆರ್ಜಿ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪೆÇ್ರಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ. ಯುವ ನಾಯಕರಿಗೆ ಕೆಆರ್ಜಿ ಬರವಸೆಯ ನಿರ್ಮಾಣ ಸಂಸ್ಥೆಯಾಗಿದೆ ಎಂದರೆ ತಪ್ಪಾಗಲ್ಲ. ಯಾಕೆಂದರೆ ಯುವರಾಜ್ ಕುಮಾರ್, ಸಂಚಿತ್ ಅಂತಹ ಸ್ಯಾಂಡಲ್ವುಡ್ನ ಭವಿಷ್ಯದ ಸ್ಟಾರ್ಗಳಿಗೆ ಕೆಆರ್ಜಿ ಭದ್ರ ಬುನಾದಿ ಹಾಕುತ್ತಿದೆ.
ಇನ್ನೂ ಕೆಆರ್ಜಿ ಸಂಸ್ಥೆ ಸಿನಿಮಾಗಳ ಆಯ್ಕೆ ವಿಚಾರದಲ್ಲೂ ತುಂಬಾ ಸೆಲೆಕ್ಟಿವ್. ಉತ್ತಮ ಸಿನಿಮಾಗಳನ್ನು ಅಭಿಮಾನಿಗಳಿಗೆ ನೀಡುತ್ತಿದೆ. ಹಾಗಾಗಿ ಕೆಆರ್ಜಿ ನಿರ್ಮಾಣ ಸಂಸ್ಥೆ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮತ್ತು ಉತ್ತಮ ಸಿನಿಮಾಗಳನ್ನು ನೀಡುತ್ತೆ ಎನ್ನುವ ಭರವಸೆ ಇದೆ.
ಸಂಚಿ ಮೊದಲ ಸಿನಿಮಾಗೆ ನಾಯಕಿಯಾಗಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಮಯೂರ್ ಪಟೇಲ್, ಭಾವನಾ, ಹರಿಣಿ ಶ್ರೀಕಾಂತ್, ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್ ಸೇರಿದಂತೆ ಅನೇಕರಿದ್ದಾರೆ. ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಸಿನಿಮಾಗಿದ್ದು ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.

