Teaser release of the film “Balaramana Dindigul”: Curiosity increases

“ಬಲರಾಮನ ದಿನಗಳು” ಚಿತ್ರದ ಟೀಸರ್ ಬಿಡುಗಡೆ: ಕುತೂಹಲ ಹೆಚ್ಚಳ - CineNewsKannada.com

“ಬಲರಾಮನ ದಿನಗಳು” ಚಿತ್ರದ ಟೀಸರ್ ಬಿಡುಗಡೆ: ಕುತೂಹಲ ಹೆಚ್ಚಳ

“ಆ ದಿನಗಳು” ಚಿತ್ರ ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನ ಹಾಗು ನಟ ವಿನೋದ್ ಪ್ರಭಾಕರ್, ಪ್ರಿಯಾ ಆನಂದ್ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿರುವ “ಬಲರಾಮನ ದಿನಗಳು” ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ

ನಟ ವಿನೋದ್ ಪ್ರಭಾಕರ್, “ಮಾದೇಶ ಚಿತ್ರದ ಬಳಿಕ ಹೊಸ ಇಮೇಜ್ ಪಡೆದುಕೊಂಡಿದ್ದಾರೆ. ಆಕ್ಷನ್ ಚಿತ್ರಗಳಿಗೆ ಮಾತ್ರ ಸೀಮಿತವಾಗಿದ್ದ ವಿನೋದ್, ಪ್ರಯೋಗಾತ್ಮಕ ವಸ್ತುಗಳಲ್ಲಿಯೂ ಕಮರ್ಷಿಯಲ್ ಚಿತ್ರಗಳಿಗೆ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ “ಬಲರಾಮನ ದಿನಗಳು” ಚಿತ್ರದ ಟೀಸರ್‍ನಲ್ಲಿ ವಿನೋದ್ ಪ್ರಭಾಕರ್ ಲುಕ್ ಮತ್ತು ಡಾನ್ಸ್ ಎಲ್ಲರ ಮೆಚ್ಚುಗೆ ಪಡೆದಿದೆ

ಚಿತ್ರದ ನಿರ್ಮಾಪಕಿ ಪದ್ಮಾವತಿ ಟೀಸರ್ ಬಿಡುಗಡೆಗೊಳಿಸಿದರು. ಚಿತ್ರದಲ್ಲಿ ತೊಡಗಿಕೊಳ್ಳಲು ತಮ್ಮ ಮಕ್ಕಳು ನೀಡಿದ ಸಹಕಾರದ ಬಗ್ಗೆ ಖುಷಿಯಿಂದ ಹೇಳಿಕೊಂಡರು. ಪುತ್ರ ಶ್ರೇಯಸ್ ಮತ್ತು ಸೊಸೆ ಹಾಗು ನಟಿ ಲೇಖಾ ಚಂದ್ರ ಬಗ್ಗೆ ಮೆಚ್ಚುಗೆ ಮಾತನಾಡಿದರು

ನಟ ವಿನೋದ್ ಪ್ರಭಾಕರ್ ಮಾತನಾಡಿ ಸಿನಿಮಾದ ಮೂಲಕ ಪಡೆಯುವುದು ಅನುಭವವೇ ಅಲ್ಲ. ತಂದೆ ಪ್ರಭಾಕರ್ ನೂರಾರು ಸಿನಿಮಾಗಳಲ್ಲಿ ನಟಿಸಿ ನಿರ್ಮಿಸಿ, ನಿರ್ದೇಶನ ಮಾಡಿದವರು. ಆದರು ಕೂಡ ಸಿನಿಮಾ ಏನು ಎಂದು ಅರ್ಥವಾಗಿಲ್ಲ ಎಂದೇ ಹೇಳುತ್ತಿದ್ದರು. ಹೀಗಾಗಿ ಚಿತ್ರದಲ್ಲಿ ಸಿಕ್ಕ ಅನುಭವವೇ ಅಂತಿಮ ಎಂದು ಹೇಳಲಾಗದು ಎಂದು ನಿರ್ಮಾಪಕನ ಪುತ್ರನಿಗೆ ಕಿವಿಮಾತು ಹೇಳಿ, ನಾವೆಲ್ಲರೂ ಸಿನಿಮಾ ವಿದ್ಯಾರ್ಥಿಗಳು. “ಮಾದೇವ” ಚಿತ್ರಕ್ಕೆ ಸಿಕ್ಕ ಯಶಸ್ಸು ಕಂಡ ಬಳಿಕ ಈ ಚಿತ್ರ ಅದರ ಎರಡು ಪಟ್ಟು ಗೆಲುವು ಕಾಣುವ ನಿರೀಕ್ಷೆ ಮೂಡಿಸಿದೆ ಎಂದರು.

ಬಲರಾಮನ ದಿನಗಳು ಚಿತ್ರ ಎಂಬತ್ತರ ದಶಕದ ಕತೆಯನ್ನು ಹೇಳುವ ಚಿತ್ರವಾಗಿದ್ದು ಟೀಸರ್ ಗಮನಿಸಿದಾಗ ಆ ದಿನಗಳು ಸಿನಿಮಾದೊಂದಿಗೆ ಸಂಬಂಧ ಇರುವುದು ಗೋಚರಿಸುತ್ತದೆ. ಎಂದು ಮಾಹಿತಿ ನೀಡಿದರು

ನಿರ್ದೇಶಕ ಕೆ.ಎಮ್ ಚೈತನ್ಯ ತಮ್ಮೊಂದಿಗೆ ಕೈ ಜೋಡಿಸಿದ ಸಹಾಯಕ ನಿರ್ದೇಶಕರ ತಂಡವನ್ನು ವೇದಿಕೆಗೆ ಕರೆದು ಪರಿಚಯಿಸಿದರು. ಚಿತ್ರಕ್ಕಾಗಿ ತಂಡ ಸಮರ್ಪಣಾಭಾವದಿಂದ ಕೆಲಸ ಮಾಡಿರುವುದನ್ನು ಖುಷಿಯಿಂದ ಹೇಳಿಕೊಂಡರು.

ನಟ ರಮೇಶ್ ಇಂದಿರಾ ಮಾತನಾಡಿ ನಿರ್ದೇಶಕ ಚೈತನ್ಯರನ್ನು ‘ಸ್ವೀಟ್’ ಎಂದು ಕರೆದರು. ಚಿತ್ರದಲ್ಲಿ ಮೋನಪ್ಪ ರೈ ಎನ್ನುವ ಪಾತ್ರ ಮಾಡುತ್ತಿದ್ದು ತುಳು ಮಾತನಾಡಿದ್ದೇನೆ ಎಂದರು.

ನಟ ವಿನಯ್ ಗೌಡ ತಮ್ಮದು ಚಿತ್ರದಲ್ಲಿ ‘ಕತ್ತಿ’ ಹೆಸರಿನ ರೌಡಿಯ ಪಾತ್ರ ಎಂದರು. ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿ ರಜತ್ ಕೂಡ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಚಿಕ್ಕ ಪಾತ್ರವಾದರೂ ಸಾಹಸ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು

ನಟ ಡ್ರ್ಯಾಗನ್ ಮಂಜು ಹೇಳಿದರು. ತಮಗೆ ಸಾಹಸ ದೃಶ್ಯಗಳಲ್ಲಿ ಡ್ಯೂಪ್ ನೀಡಿದ್ದಕ್ಕಾಗಿ ನಿರ್ದೇಶಕರಿಗೆ ತ್ಯಾಂಕ್ಸ್ ಹೇಳಿದರು.

ಚಿತ್ರಕ್ಕೆ ಹಾಡುಗಳನ್ನು ಬರೆದಿರುವ ಕವಿರಾಜ್, ನಾಗಾರ್ಜುನ ಶರ್ಮ ಮತ್ತು ಪ್ರಮೋದ್ ಮರವಂತೆ ಅನುಭವಗಳ ಬಗ್ಗೆ ಮಾತನಾಡಿದರು.

ಪೋಲಿಸ್ ಪಾತ್ರಗಳನ್ನು ಮಾಡಿರುವ ಪ್ರತಾಪ್ ನಾರಾಯಣ್ ಮತ್ತು ಅಶ್ವಿನ್ ಹಾಸನ್ ಇದು ಈ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಎಂದರು.

ಚಿತ್ರದಲ್ಲಿ ‘ಸಿಂಗ್ಲಿ ಗ್ಯಾಂಗ್’ ಮೂಲಕ ನಿರ್ಮಾಪಕರ ಪುತ್ರ ತೇಜಸ್ ಕೂಡ ನಟಿಸಿದ್ದಾರೆ. ಸಿಂಗ್ಲಿ ಪಾತ್ರಧಾರಿ ಆದಿತ್ಯ ಕೂಡ ತಮ್ಮ ಪಾತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ಮೊದಲಾದವರ ನಟನೆ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin