ಪೌರಕಾರ್ಮಿಕರ ಕುರಿತ “ರಾಮ ಅಂಡ್ ರಾಮು” ಚಿತ್ರದ ಟೀಸರ್ ಬಿಡುಗಡೆ - CineNewsKannada.com

ಪೌರಕಾರ್ಮಿಕರ ಕುರಿತ “ರಾಮ ಅಂಡ್ ರಾಮು” ಚಿತ್ರದ ಟೀಸರ್ ಬಿಡುಗಡೆ

ಯೂ ಟರ್ನ್-2, ಕರಿಮಣಿ ಮಾಲೀಕ ಚಿತ್ರಗಳ ಖ್ಯಾತಿಯ ನಿರ್ದೇಶಕ ಚಂದ್ರು ಓಬಯ್ಯ ಇದೀಗ ಸಾಮಾಜಿಕ ಕಳಕಳಿ ಚಿತ್ರ “ರಾಮ ಅಂಡ್ ರಾಮು” ಚಿತ್ರವನ್ನು ಸದ್ದು ಗದ್ದಲವಿದೆ ಚಿತ್ರೀಕಣರ ಪೂರ್ಣಗೊಳಿಸಿದ್ದು ಚಿತ್ರ ಪೌರಕಾರ್ಮಿಕರ ಕುರಿತಾಗಿದೆ

ನಟ, ನಿರ್ಮಾಪಕ, ನಿರ್ದೇಶಕ ಚಂದ್ರು ಓಬಯ್ಯ ಮಾತನಾಡಿ ಚಿತ್ರವನ್ನು ವರ್ಷದ ಹಿಂದೆ ಆರಂಭಿಸಿದ್ದೆ. ಒಮ್ಮೆ ಫೇಸ್ ಬುಕ್ ನಲ್ಲಿ ನೋಡಿದ ವಿಡಿಯೋ ಈ ಸಿನಿಮಾವಾಗಲು ಪ್ರೇರಣೆ. ಪರಿಸರ, ರಸ್ತೆಯನ್ನು ಸ್ವಚ್ಚಗೊಳಿಸುವ ಪೌರಕಾರ್ಮಿಕ ಮಹಿಳೆಯೊಬ್ಬಳು ಮನೆಯ ಮುಂದೆ ನಿಂತು ನೀರು ಕೇಳಿದಾಗ ಆ ಮನೆಯವರು ನಡೆದುಕೊಂಡ ರೀತಿ ಕಂಡು ನನ್ನ ಮನಸಿಗೆ ತುಂಬಾ ಬೇಸರವಾಯಿತು. ಅದೇ ಘಟನೆ ಇಟ್ಟುಕೊಂಡು ಒಂದು ಕಾದಂಬರಿ ಬರೆದೆ. ನಂತರ ಅದನ್ನೇ ಈ ಸಿನಿಮಾ ಮಾಡಿದ್ದೇನೆ. ಪರಿಸರವನ್ನು ಸ್ವಚ್ಚ ಮಾಡುವವರನ್ನು ನಾವೇ ಗೌರವಿಸದಿದ್ದರೆ ಹೇಗೆ ಒಂದು ಟೀಮ್ ಕಟ್ಟಿಕೊಂಡು ಈ ಸಿನಿಮಾ ಮಾಡಿದೆ. ಹುಟ್ಟಿದಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ಮೆಸೇಜ್ ಕೊಡುವ ಈ ಚಿತ್ರ ನಿರ್ಮಿಸಿದ್ದೇನೆ ಎಂದರು

ಈಗಾಗಲೇ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದು , ಸೆನ್ಸಾರ್ ನಿಂದ ಯು/ಎ ಪ್ರಮಾಣಪತ್ರ ಪಡೆದಿದೆ. ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದರು.

ವೇದಿಕೆಯಲ್ಲಿ ಚಿತ್ರದ ನಾಯಕಿ ಬೆಳಗಾವಿ ಮೂಲದ ಸೌಮ್ಯ, ಪೆÇಲೀಸ್ ಪಾತ್ರ ಮಾಡಿರುವ ನಾಗೇಂದ್ರ ಅರಸ್, ನಟರಾದಮೂಗು ಸುರೇಶ್ , ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ ಸೇರಿದಂತೆ ಅನೇಕರು ಹಾಜರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin