ಜೀ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್
ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದರಲ್ಲಿ ಜೀ ಕನ್ನಡ ಸದಾ ಮುಂದು. ಈಗ ಕಿರುತೆರೆಗೆ ಪ್ರಭಾವಶಾಲಿ ಮತ್ತು ಅರ್ಥಪೂರ್ಣವಾದ ಕಥೆಗಳನ್ನು ಒದಗಿಸುವ ಜೀ ಕನ್ನಡ ಈಗ ಯುವಕಥೆಗಾರರಿಗೆ ಒಂದು ಅದ್ಭುತ ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ.
ಜೊತೆಗೆ ಡ್ಯಾನ್ಸರ್‍ಗಳು ಹಾಗು ಕಾಮಿಡಿಯನ್‍ಗಳಿಗೂ ಇಲ್ಲಿದೆ ಸುವವಕಾಶ. ಜೀ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ಸ್ ಸೆಪ್ಟೆಂಬರ್ 7 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಜೀû ರೈಟರ್ಸ್ ರೂಮ್ ನಲ್ಲಿ ಭಾಗವಹಿಸುವವರು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಮತ್ತು ಆಯ್ಕೆ ಆದ ಯುವಪ್ರತಿಭೆಗಳು ಮುಂದಿನ ಸುತ್ತಿಗೆ ಹೋಗುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳು ಜೀ ರೈಟರ್ಸ್ ರೂಮ್ ಗೆ ಸೇರಲು ಅವಕಾಶ ಹೊಂದಿರುತ್ತಾರೆ, ಇಂಡಸ್ಟ್ರಿಯ ವೃತ್ತಿಪರರಿಂದ ಮಾರ್ಗದರ್ಶನ ಪಡೆಯುತ್ತಾರೆ ಹಾಗೂ ಜೀû ನ ಮುಂಬರುವ ಯೋಜನೆಗಳಿಗೆ ಕೆಲಸ ಮಾಡುವ ಸುವವಕಾಶ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ ನಲ್ಲಿ ಉತ್ತೀರ್ಣರಾದವರು ಮುಂದಿನ ಸುತ್ತಿದೆ ಆಯ್ಕೆ ಆಗುತ್ತಾರೆ.
ಜೀ ರೈಟರ್ಸ್ ರೂಮ್ ಆಡಿಷನ್ಸ್:
ಸ್ಥಳ: ಸಂತ ಸೋಫಿಯಾ ಕಾನ್ವೆಂಟ್ ಸ್ಕೂಲ್, #6, 10ನೇ ಬ್ಲಾಕ್, 2ನೆ ಹಂತ, ನಾಗರಬಾವಿ, ಬೆಂಗಳೂರು
ಸೆಪ್ಟಂಬರ್ 7 ಬೆಳಗ್ಗೆ 9 ರಿಂದ ಮದ್ಯಾಹ್ನ 2 ಗಂಟೆ ತನಕ, ದೂರವಾಣಿ ಸಂಖ್ಯೆ: 9900207711 ಸಂಪರ್ಕಿಸಬಹುದು
ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ಸ್:
ಸ್ಥಳ: ಹೈಯರ್ ಸೆಕೆಂಡರಿ ಸ್ಕೂಲ್, ಆರ್ ವಿ ರೋಡ್, ಬಸವನಗುಡಿ, ಬೆಂಗಳೂರು
ಸೆಪ್ಟಂಬರ್ 7 ಬೆಳಗ್ಗೆ 9 ರಿಂದ ಸಂಜೆ 6ರ ತನಕ ,ದೂರವಾಣಿ ಸಂಖ್ಯೆ: 9513134434 ಸಂಪರ್ಕಿಸಬಹುದಾಗಿದೆ

