“ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ” ಚಿತ್ರದ ಆಡಿಯೋ ಬಿಡುಗಡೆ - CineNewsKannada.com

“ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ” ಚಿತ್ರದ ಆಡಿಯೋ ಬಿಡುಗಡೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಾಹುಲಿ ಚಿತ್ರಕ್ಕೆ ಸಹಾಯಕನಾಗಿ ಕೆಲಸ ಮಾಡಿದ್ದ ಹೊನ್ನರಾಜ್, ಈಗ ನಾಯಕ ಕಮ್ ನಿರ್ದೇಶಕನಾಗಿದ್ದಾರೆ. ಕಥೆ, ಚಿತ್ರಕಥೆ ಬರೆದು ಮೊದಲಬಾರಿಗೆ ಆಕ್ಷನ್ ಕಟ್ ಹೇಳಿರುವ ‘ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ’ ಚಿತ್ರದ ಆಡಿಯೋ ಬಿಡುಗಡೆ ಆಗಿದೆ

ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಲವ್ಲಿಸ್ಟಾರ್ ಪ್ರೇಮ್ ಹಾಡು ಬಿಡುಗಡೆ ಮಾಡಿದರು
ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ನಿರ್ಮಾಪಕ ಸಾರಾ.ಗೋವಿಂದು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ನಾಯಕ ಹೊನ್ನರಾಜ್ ಚಿತ್ರದಲ್ಲಿ ನಟನೆ, ನಿರ್ದೇಶನದ ಜತೆ, ಚಿತ್ರ ನಿರ್ಮಾಣ ಸಹ ಮಾಡಿದ್ದಾರೆ. ಸಿನಿಮಾ ಚೆನ್ನಾಗಿ ಪ್ರದರ್ಶನಗೊಂಡು ಹಾಕಿದ ಹಣದ 4ರಷ್ಟು ವಾಪಸ್ ಬರಲಿ ಎಂದು ಶುಭ ಹಾರೈಸಿದರು.

ನಟ ಪ್ರೇಮ್ ಮಾತನಾಡಿ ಹೊನ್ನರಾಜ್ ನನಗೆ ಜೂನಿಯರ್, ಆಗ ಚಾಮರಾಜ್ ಮಾಸ್ಟರ್ ನಮಗೆಲ್ಲ ಗುರುಗಳು, ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರಿಗೆ ಒಳ್ಳೆ ಫಲ ಸಿಗಲಿ ಎಂದರು

ಸಾರಾ ಗೋವಿಂದು ಮಾತನಾಡಿ ಸಿರಿವಂತ ರಾಜಕಾರಣಿ ಕೈಲಿ ಸಾಂಗ್ ಲಾಂಚ್ ಮಾಡಿಸಿದ್ದೀರಿ, ಸಚಿವರ ಕೈಗುಣ ಚೆನ್ನಾಗಿದೆ. ನಾವೆಲ್ಲ ನಿಮ್ಮ ಬೆನ್ನೆಲುಬಾಗಿರುತ್ತೇವೆ, ರಿಲೀಸ್ ಸಮಯದಲ್ಲಿ ನಿಮ್ಮ ಜತೆ ಇರುತ್ತೇವೆ ಎಂದು ಹೇಳಿದರು

ನಾಯಕ, ನಿರ್ದೇಶಕ ಹೊನ್ನರಾಜ್ ಮಾತನಾಡಿ ಇದೊಂದು ಹಳ್ಳಿ ಸೊಗಡಿನ ಚಿತ್ರ. ಯಶ್ ಅಭಿಮಾನಿಯಾದ ನಾಯಕ ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು, ಸಮಾಜಸೇವೆ ಅಂತ ಹಳ್ಳಿಗೆ ಒಳ್ಳೆಯದನ್ನು ಮಾಡಲು ಹೋಗಿ ಆತ ಏನೆಲ್ಲ ತೊಂದರೆ ಅನುಭವಿಸುತ್ತಾನೆ ಎಂಬುದನ್ನು ಫ್ಯಾಮಿಲಿ ಎಂಟರ್ ಟೈನರ್ ಕಥೆಯೊಂದಿಗೆ ಹೇಳಲು ಪ್ರಯತ್ನಿಸಿದ್ದೇನೆ. ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ 65 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ ಎಂದು ಹೇಳಿದರು

ಚಿತ್ರದ ನಾಯಕಿ ಶೃತಿ ಬಬಿತ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತಂಗಿ ಪಾತ್ರವನ್ನು ರೂಪ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ನಿಂದ ಯು/ಎ ಸಿಕ್ಕಿದ್ದು ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡೋ ಯೋಜನೆಯಿದೆ ಎಂದರು

ಈ ಚಿತ್ರ ನಿರ್ಮಾಣದಲ್ಲಿ ಅಂಧರಾದ ತಮ್ಮ, ತಂಗಿ ಹಾಗೂ ಚಿಕ್ಕಮ್ಮ, ಸ್ನೇಹಿತರು ಸೇರಿದಂತೆ ಹಲವಾರು ಜನ ಕೈಜೋಡಿಸಿದ್ದಾರೆ ಎಂದು ಹೇಳಿ ಅವರಿಗೆ ವೇದಿಕೆಯಲ್ಲಿ ಗೌರವಿಸಿದರು.

ಹೊನ್ನುರಾಜ್ ನಿರ್ಮಾಣ ಸಹ ಮಾಡಿದ್ದಾರೆ. ಈ ಚಿತ್ರದ 4 ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದಾರೆ. ಶಿವಪುತ್ರ ಛಾಯಾಗ್ರಹಣ, ಗಿರೀಶ್ ನೃತ್ಯ ನಿರ್ದೇಶನವಿದೆ. ಮೈಸೂರು ಮಂಜುಳ , ರೇಖಾದಾಸ್, ಮಂಜಣ್ಣ, ಗಿರೀಶ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin