ಪ್ರತಿಭಾನ್ವಿತರಿಗೆ ಅವಕಾಶಗಳ ಬಾಗಿಲು ತೆರೆದ ಗಾಯಕ ವಿಜಯ್ ಪ್ರಕಾಶ್ ದಂಪತಿ
ಸಿನಿಮಾ, ರಿಯಾಲಿಟಿ ಶೋ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಖ್ಯಾತ ವಿಜಯ್ ಪ್ರಕಾಶ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಅನುಭವ, ಶ್ರಮ ಮತ್ತು ಹಣ ಧಾರೆ ಎರೆದು ವಿಜಯ್ ಪ್ರಕಾಶ್ ಕಲ್ಚರಲ್ ಕ್ಲಬ್ ಹಾಗು ದ್ವಾರ್ ಸ್ಟುಡಿಯೋಸ್ ಮತ್ತು ದ್ವಾರ್ ಮ್ಯೂಸಿಕ್ ಎಂಬ ಸಂಸ್ಥೆ ಪ್ರಾರಂಭಿಸಿದ್ದಾರೆ. ಈ ಪ್ರಯತ್ನಕ್ಕೆ ಅವ ಪತ್ನಿ ಮಹತಿ ಪ್ರಕಾಶ್ ಸಾತ್ ನೀಡಿದ್ದಾರೆ

ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಸಪ್ತಗಿರಿ ಲೇಔಟ್ನಲ್ಲಿ ವಿಜಯ್ ಪ್ರಕಾಶ್ ಕಲ್ಚರಲ್ ಕ್ಲಬ್ ಮತ್ತು ದ್ವಾರ್ ಸ್ಟುಡಿಯೋಸ್ ನಿರ್ಮಾಣವಾಗಿದ್ದು, ಹೊಸ ಸಾಹಸಗಳ ಕುರಿತು ಮಾಹಿತಿ ಹಂಚಿಕೊಂಡರು
ಗಾಯಕ ವಿಜಯ್ ಪ್ರಕಾಶ್ ಮಾತನಾಡಿ ದೇಶದಲ್ಲಿ ಬೃಹತ್ ಸಂಗೀತ ಶಾಲೆ ಪ್ರಾರಂಭಿಸಬೇಕು ಎಂಬ ಆಸೆ ಇತ್ತು. ಅದು ಯಾವತ್ತು ಈಡೇರುತ್ತದೋ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಒಂದು ಸಣ್ಣ ಹೆಜ್ಜೆ ವಿಜಯ್ ಪ್ರಕಾಶ್ ಕ್ಲಚ್ಚರಲ್ ಕ್ಲಬ್ ಆರಂಭವಾಗಿದೆ.
ಆಸಕ್ತರಿಗೆ ಸಂಗೀತ ಪಾಠ ಹೇಳಿಕೊಡುವುದರ ಜೊತೆಗೆ, ಹಾಡು ನಿರ್ಮಾಣ ಮಾಡುವುದಕ್ಕೆ ಸ್ಟುಡಿಯೋ ಮತ್ತು ಅದನ್ನು ಹೊರತರವ ನಿಟ್ಟಿನಲ್ಲಿ ದ್ವಾರ್ ಮ್ಯೂಸಿಕ್ ಎಂಬ ಯೂಟ್ಯೂಬ್ ಚಾನಲ್ ಪ್ರಾರಂಭಿಸಿದ್ದೇವೆ. ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಈ ಕನಸು, ಈಗ ನನಸಾಗಿದೆ’ ಎಂದರು.

ಮಹತಿ ವಿಜಯ್ ಪ್ರಕಾಶ್ ಮಾತನಾಡಿ ಕಲಾವಿದರು, ಕಲಾಪೆÇೀಷಕರು ಮತ್ತು ಕಲಾರಸಿಕರು ಒಂದೇ ಜಾಗದಲ್ಲಿ ಸೇರಬೇಕು ಎಂಬ ಉದ್ದೇಶದಿಂದ ನಮ್ಮ ಪ್ರಯತ್ನ ನಡೆಸಿದ್ದೇವೆ. ಚಿಕ್ಕ ವಯಸ್ಸಿನಲ್ಲಿ ಹಾಡು, ನೃತ್ಯದ ಬಗ್ಗೆ ಅತಿವ ಆಸಕ್ತಿ ಇರುತ್ತದೆ. ಜವಾಬ್ದಾರಿಗಳು, ಒತ್ತಡಗಳಿಂದ ಅದನ್ನು ಮುಂದುವರೆಸುವುದಕ್ಕೆ ಆಗುವುದಿಲ್ಲ. ಅದರಿಂದ ಹವ್ಯಾಸಗಳನ್ನು ಬಿಟ್ಟುಬಿಡುತ್ತೇವೆ. ಹಾಗೆ ತಮ್ಮ ಹವ್ಯಾಸ ಮುಂದುವರೆಸುವ ಆಸಕ್ತಿ ಉಳ್ಳುವರು ಕಲಾಪ್ರಪಂಚಕ್ಕೆ ಪುನಃ ಬರಲಿ, ಹೊಸದಾಗಿ ಕಲಿತು ಬೆಳೆಯಲಿ ಎಂಬ ಕಾರಣಕ್ಕೆ ಈ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು
ವೈದ್ಯರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯ ಉದ್ಯೋಗಿಗಳು, ಗೃಹಿಣಿಯರು, ಮಕ್ಕಳು, ಹಿರಿಯ ನಾಗರಿಕರಿದ್ದಾರೆ. ನಾಲ್ಕು ವರ್ಷದವರಿಂದ 82 ವರ್ಷದ ವಯೋಮಾನದವರಿದ್ದಾರೆ. ಅವರಿಗೆ ರಂಗಗೀತೆಗಳು, ಜಾನಪದ, ಭಾವಗೀತೆ, ಭಕ್ತಿಗೀತೆ, ಸಿನಿಮಾ ಗೀತೆ ಸೇರಿದಂತೆ ಹಲವು ಪ್ರಕಾರದ ಸಂಗೀತವನ್ನು ಹೇಳಿಕೊಡಲಾಗುತ್ತದೆ’ ಎಂದು ಮಾಹಿತಿ ನೀಡಿದರು
ಯೂಟ್ಯೂಬ್ನಲ್ಲಿ ದ್ವಾರ್ ಮ್ಯೂಸಿಕ್ ಎಂಬ ಚಾನಲ್ ಪ್ರಾರಂಭಿಸಲಾಗಿದೆ. ಈಗಾಗಲೇ ಈ ಚಾನಲ್ನಲ್ಲಿ ಬೆರೆತು',ಬಾನ ಸರದಾರ’, ಅಹಂ ಸತ್' ಮುಂತಾದ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ.ನವರಾತ್ರಿ ಗೀತಮಾಲಾ’ ಎಂಬ ಹೆಸರಿನಡಿ ದುರ್ಗೆಯ ಒಂಬತ್ತು ರೂಪಗಳನ್ನು ಹಾಡುಗಳ ಮೂಲಕ ಕಟ್ಟಿಕೊಡಲಾಗಿದೆ.
ಈ ಹಾಡುಗಳನ್ನು ವಿಜಯಪ್ರಕಾಶ್ ಅಲ್ಲದೆ, ಶಂಕರ್ ಮಹಾದೇವನ್, ಅನುರಾಧಾ ಭಟ್, ರಾಜೇಶ್ ಕೃಷ್ಣನ್, ಲಕ್ಷ್ಮೀ ನಾಗರಾಜ್, ಕೀರ್ತನ್ ಹೊಳ್ಳ, ಪ್ರಿಯಾಂಕಾ ಭಾರ್ವೆ, ಅನಿರುದ್ಧ್ ಐತಾಳ್ ಮತ್ತು ಶಿವಶ್ರೀ ಸ್ಕಂದಪ್ರಸಾದ್ ಹಾಡಿದ್ದಾರೆ.

ಮೋಹ ಹಾಡು ಬಿಡುಗಡೆ:
ತನುಷಾ ಕೆ.ಎಂ ಹಾಡಿರುವ ಮತ್ತು ಕೀರ್ತನ್ ಹೊಳ್ಳ ಸಂಗೀತ ಸಂಯೋಜಿಸಿರುವ `ಮೋಹ’ ಎಂಬ ಹೊಸ ಹಾಡು ಬಿಡುಗಡೆ ಮಾಡಲಾಯಿತು. ಈ ಹಾಡಿಗೆ ರಾಘವೇಂದ್ರ ಕಾಮತ್ ಸಾಹಿತ್ಯ ರಚಿಸಿದ್ದಾರೆ.
ಹಾಡು ಕುರಿತು ತನುಷಾ ಹಾಗು ಕೀರ್ತನ್ ಹೊಳ್ಳ ಮಾಹಿತಿ ಹಂಚಿಕೊಂಡರು.

