ಶಿವಣ್ಣ- ಕೆವಿಎನ್- ಪವನ್ ಒಡೆಯೆರ್ ಕಾಂಬಿನೇಷನ್ ಚಿತ್ರ ಆರಂಭ
ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಇದೇ ಮೊದಲ ಭಾರಿಗೆ ನಟ ಶಿವರಾಜ್ ಕುಮಾರ್ ಅವರಿಗೆ ಸಿನಿಮಾ ನಿರ್ಮಾಣ ಮಾಡುತ್ತಿದೆ, ಈ ಚಿತ್ರವನ್ನು ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ನಿರ್ದೇಶಕ ಪವನ್ ಒಡೆಯರ್ ಪುನೀತ್ ರಾಜ್ಕುಮಾರ್ಗೆ ಎರಡು ಸಿನಿಮಾಗಳನ್ನು ಮಾಡಿದ್ದಾರೆ. ಮೊದಲ ಬಾರಿಗೆ ಶಿವರಾಜ್ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹು ನಿರೀಕ್ಷಿತ ಚಿತ್ರ ಸೆಪ್ಟಂಬರ್ 3ರಿಂದ ಚಿತ್ರೀರಕಣ ಆರಂಭವಾಗಲಿದೆ. ಈ ಮೂರು ಮಂದಿಯ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಚಿತ್ರ ಕುತೂಹಲ ಹೆಚ್ಚು ಮಾಡಿದೆ
ಟಾಕ್ಸಿಕ್’, ಕೆಡಿ',ಜನ ನಾಯಗನ್’ ಮುಂತಾದ ಬಹುನಿರೀಕ್ಷಿತ ಸಿನಿಮಾಗಳು ಸಂಸ್ಥೆಯಿಂದ ಮೂಡಿಬರುತ್ತಿವೆ. ಆ ಮೂಲಕ ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ `ಕೆವಿಎನ್ ಪೆÇ್ರಡಕ್ಷನ್ಸ್’ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದೆ. ಇದೀಗ ಈ ಸಂಸ್ಥೆಯ ಶಿವಣ್ಣ ಜೊತೆ ಕೈ ಜೋಡಿಸಿದೆ.
ದಕ್ಷಿಣ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಾಗಿದೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಸಾರಥಿ. ಸ್ಯಾಂಡಲ್ವುಡ್ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ
ಶಿವಣ್ಣ ಪವನ್ ಕಾಂಬಿನೇಷನ್ ಸಿನಿಮಾದ ಚಿತ್ರೀಕರಣ ದೇಶದ ನಾನಾ ಭಾಗಗಳಲ್ಲಿ ನಡೆಯಲಿದೆ. ಸೆಪ್ಟೆಂಬರ್ ಮೂರರಿಂದ ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಆರಂಭವಾಗಲಿದೆ. ಆ ಬಳಿಕ ಮಂಡ್ಯ , ಹಿಮಾಚಲ ಪ್ರದೇಶ, ಮುಂಬೈ ಹಾಗೂ ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಶಿವವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ. ತಾರಾ ಬಳಗದಲ್ಲಿ ಜಯರಾಮ್, ಸಾಯಿ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿಯಂತಹ ದಿಗ್ಗಜರ ಜೊತೆ ಸಂಜನಾ ಆನಂದ್ ಹಾಗೂ ದೀಕ್ಷಿತ್ ಶೆಟ್ಟಿಯಂತ ಪ್ರತಿಭಾನ್ವಿತ ಕಲಾದಂಡು ಚಿತ್ರದಲ್ಲಿ ಇರಲಿದೆ.
ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಕಥಾಹಂದರ ಹೊಂದಿರುವ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ, ಶಶಾಂಕ್ ನಾರಾಯಣ್ ಸಂಕಲನ ಒದಗಿಸಲಿದ್ದಾರೆ. ಶಿವಣ್ಣ , ಪವನ್ ಒಡೆಯರ್ ಹಾಗೂ ಕೆವಿಎನ್ ಮೊದಲ ಬಾರಿಗೆ ಒಂದಾಗುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ.

