ಶರಣ್ ,ಮೇಘನಾ, ಅದಿತಿ ಅಭಿನಯದ”ಛೂಮಂತರ್”ಗೆ 25ದಿನಗಳ ಸಂಭ್ರಮ
ನಟ ಶರಣ್, ನಟಿಯರಾದ ಮೇಘನಾ ಗಾಂವಕರ್ ಮತ್ತು ಅದಿತಿ ಪ್ರಭುದೇವ ಅವರ ಅದ್ಬುತ ನಟನೆಯ ಚಿತ್ರ ” ಛೂಮಂತರ್ ” 25 ದಿನಗಳನ್ನು ಪೂರ್ಣಗೊಳಿಸಿದೆ

“ಛೂ ಮಂತರ್” ಚಿತ್ರ ಯಶಸ್ವಿ 25 ದಿನಗಳ ಪ್ರದರ್ಶನ ಕಂಡು, 50 ದಿನಗಳತ್ತ ಮುನ್ನುಗುತ್ತಿದೆ. ಈ ಸಂಭ್ರಮವನ್ನು ಸಂಭ್ರಮಿಸಲು ಚಿತ್ರತಂಡ ಸಮಾರಂಭ ಆಯೋಜಿಸಿತ್ತು. ಇದೇ ವೇಳೆ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ವೇಳೆ ಮಾತನಾಡಿದ ಶ್ರೀಮುರಳಿ ಕನ್ನಡ ಚಿತ್ರ ಇಪ್ಪತ್ತೈದು ದಿನಗಳನ್ನು ಪೂರೈಸಿರುವುದು ಖುಷಿಯ ವಿಚಾರ. ಶರಣ್ ಅವರೊಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದೇನೆ. ತರುಣ್ ಕೂಡ ಬಹು ದಿನಗಳ ಗೆಳೆಯ ಚಿತ್ರ ನೂರು ದಿನಗಳ ಪ್ರದರ್ಶನ ಕಾಣಲಿ ಎಂದು ಹಾರೈಸಿದರು.
ನಾಯಕ ಶರಣ್ ಮಾತನಾಡಿ ಚಿತ್ರದ ಗೆಲುವಿನಲ್ಲಿ ತೆರೆಯ ಹಿಂದೆ ಕೆಲಸ ಮಾಡಿದ ಮಂದಿಯ ಶ್ರಮವೂ ಹೆಚ್ಚಿರುತ್ತದೆ. ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಅಂದರೆ ಅದಕ್ಕೆ ಕಾರಣ ಜನರು ನಮ್ಮ ಚಿತ್ರಕ್ಕೆ ನೀಡುತ್ತಿರುವ ಮೌತ್ ಪಬ್ಲಿಸಿಟಿ ಎಂದರು
ಚಿತ್ರದ ಯಶಸ್ಸಿಗೆ ಕಾರಣರಾದ ಚಿತ್ರತಂಡಕ್ಕೆ ನಿರ್ಮಾಪಕರಾದ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ಧನ್ಯವಾದ ತಿಳಿಸಿದರು.
ಈ ಗೆಲುವು ನನ್ನ ಚಿತ್ರತಂಡದು ಹಾಗೂ ಅಭಿಮಾನಿಗಳದು ಎಂದರು ನಿರ್ದೇಶಕ ನವನೀತ್.

ನಟಿಯರಾದ ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ “ಛೂ ಮಂತರ್” ಚಿತ್ರದ ಯಶಸ್ಸಿನ ಖುಷಿಯನ್ನು ಮಾತುಗಳ ಮೂಲಕ ಹಂಚಿಕೊಂಡರು. . .

