A confluence of 6 love stories: "Nenapugala Maatu Madhura

6 ಪ್ರೇಮ ಕಥೆಗಳ ಸಂಗಮ : “ನೆನಪುಗಳ ಮಾತು ಮಧುರ” ಹಾಡು ಬಿಡುಗಡೆ - CineNewsKannada.com

6 ಪ್ರೇಮ ಕಥೆಗಳ ಸಂಗಮ : “ನೆನಪುಗಳ ಮಾತು ಮಧುರ” ಹಾಡು ಬಿಡುಗಡೆ

ಆರು ಪ್ರೇಮ‌ ಕಥೆಗಳ ಸಂಗಮವಿರುವ “ನೆನಪುಗಳ ಮಾತು ಮಧುರ” ಚಿತ್ರದ ಟೀಸರ್ ಹಾಗೂ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಗಿದೆ

ಅಫ್ಜಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನೃತ್ಯ ನಿರ್ದೇಶನದ ಜೊತೆಗೆ ನಿರ್ದೇಶನ ಮಾಡಿರುವ ಹಾಗೂ ರೆಡ್ ಅಂಡ್ ವೂಟ್ ಸೆವೆನ್ ರಾಜ್ ನಟಿಸಿ, ನಿರ್ಮಿಸಿರುವ ಚಿತ್ರದ ಟೀಸರ್ ಅನ್ನು ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ ನರಸಿಂಹಲು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಿರ್ದೇಶಕ ಅಫ್ಜಲ್ ಮಾತನಾಡಿ “ನೆನಪುಗಳ ಮಾತು ಮಧುರ” ಚಿತ್ರದಲ್ಲಿ ಆರು ಕಥೆಗಳ ಸಂಗಮವಿದೆ. ಹಾಗೆ ಆರು ಜೋಡಿಗಳ ಪ್ರೇಮಕಥೆಯೂ‌ ಇದೆ. ಸದ್ಯದಲ್ಲೇ ಎದುರುಸುತ್ತಿರುವ ಹಾಗೂ ಕಣ್ಣಮುಂದೆ ನೋಡುತ್ತಿರುವ ಕೆಲವು ವಿಷಯಗಳೆ ಈ ಚಿತ್ರದ ಕಥೆಗೆ ಸ್ಪೂರ್ತಿ. ಪ್ರಸ್ತುತ ಚಿತ್ರದ ಚಿತ್ರೀಕರಣ ಹಾಗೂ ಉಳಿದ ಕೆಲಸಗಳು ಮುಕ್ತಾಯವಾಗಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದರು.

ನಿರ್ಮಾಪಕ ಸೆವೆನ್ ರಾಜ್ ಮಾತನಾಡಿ ಚಿತ್ರದ ಕಥೆ ಇಷ್ಟವಾಯಿತು. ನಿರ್ಮಾಣದ ಜೊತೆಗೆ ನಟನೆ ಕೂಡ ಮಾಡಿದ್ದೇನೆ.‌ ಮಾರ್ಚ್ ನಲ್ಲಿ ಚಿತ್ರ ತೆರೆಗೆ ತರುವ ಸಿದ್ದತೆ ನಡೆಸುತ್ತಿದ್ದೇನೆ. ಏಳು ಭಾಷೆಗಳ ಚಿತ್ರಗಳಲ್ಲಿ ನಟಿಸುವ ಆಸೆಯಿದೆ. ಈಗಾಗಲೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದೇನೆ. ಸದ್ಯದಲ್ಲೇ ಹಿಂದೆ ಚಿತ್ರದಲ್ಲೂ ಅಭಿನಯಿಸಲಿದ್ದೇನೆ ಎಂದರು.

ಹಾಡುಗಳ ಕುರಿತು ರಾಜು ಎಮ್ಮಿಗಾನೂರು ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ವಸಿಷ್ಠ ಬಂಟನೂರು, ರಣವೀರ್, ರಾಜ್ ಪ್ರಭು, ಅಂಜಲಿ, ರೇಖಾ ರಮೇಶ್, ವಾದ್ಯ, ರನ್ವಿತ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಆಡಿಯೋ ಸಂಸ್ಥೆಯ ರಮೇಶ್ ಭಂಡಾರಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಚಿತ್ರದ ಉಳಿದ ತಾರಾಗಣದಲ್ಲಿ ವಿನಯ್ ಕುಮಾರ್ , ನಾಗರಾಜ್ ಗುಬ್ಬಚ್ಚಿ, ನಾಗೇಂದ್ರ ಅರಸ್ , ಹುಸೇನ್, ಅರವಿಂದ್ ಇದ್ದಾರೆ.
.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin