ತಂದೆ-ಮಗನ ಹೃದಯಸ್ಪರ್ಶಿ ಕಥೆ `ಬೆಲ್ ಬಟನ್’ ಚಿತ್ರ ನವೆಂಬರ್ 27ಕ್ಕೆ ತೆರೆಗೆ

ಮಧ್ಯಮವರ್ಗದ ತಂದೆಯೊಬ್ಬನಿಗೆ ತನ್ನ ಮಗ ಪ್ರೇಮವಿವಾಹವಾಗಬೇಕು ಎಂಬ ಬಹುದಿನಗಳ ಆಸೆ. ಮಗ ಚಿರು ಪ್ರೀತಿಯಲ್ಲಿ ಬಿದ್ದಿದ್ದಾನೆ ಎಂಬ ವಿಷಯ ತಿಳಿದಾಗ ತಂದೆಗೆ ಎಲ್ಲಿಲ್ಲದ ಸಂತೋಷ. ಆದರೆ ಆತ ಪ್ರೀತಿಸಿದ ಹುಡುಗಿ ಪ್ರೀತಿಯನ್ನು ನಿರಾಕರಿಸಿದಾಗ ಕಥೆ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಪ್ರೀತಿಯ ವೈಫಲ್ಯವನ್ನು ತಂದೆಯಿಂದ ಮುಚ್ಚಿಡುವ ಚಿರು ಮುಂದೆ ಏನು ಮಾಡುತ್ತಾನೆ ತಂದೆಯ ಕನಸನ್ನು ನನಸು ಮಾಡುತ್ತಾನೆಯೇ ಎಂಬ ಕುತೂಹಲವೇ ಚಿತ್ರದ ಕಥೆಯ ಹೂರಣ.

ಚಿತ್ರಕ್ಕೆ ಲಕ್ಷ್ಮಿ ನರಸಿಂಹ ಎಂ. ನಿರ್ದೇಶನ ಮಾಡಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ.

ಚಿತ್ರದಲ್ಲಿಸಚಿನ್ ಜೈ, ಲಕ್ಷ್ಮಿ ನರಸಿಂಹ, ನಿಸರ್ಗ ಅಪ್ಪಣ್ಣ, ಚೈತ್ರ ಗೌಡ, ಪ್ರಮೀಳಾ ಸುಬ್ರಹ್ಮಣ್ಯ, ನೊಣವಿನಕೆರೆ ರಾಮಕೃಷ್ಣಯ್ಯ, ಭಾನು ಪ್ರಕಾಶ್, ನಿಖಿತಾ ಶೆಟ್ಟಿ, ಅಭಿಗುರು, ವೇಣು, ಪವನ್ ರಿಚ್ಚಿ, ತರುಣ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಲಕ್ಕಿ ಛಾಯಾಗ್ರಹಣ, ಆಕಾಶ್ ಮಹೇಂದ್ರಕರ್ ಸಂಕಲನ, ವಿಶಾಲ್ ಆಲಾಪ್ ಸಂಗೀತ, ಮದನ್ ಮ್ಯಾಡಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ದೇವು ಪೆÇ್ರಡಕ್ಷನ್ ಡಿಸೈನರ್ ಆಗಿ, ಸುಪ್ರೀಮ್ ಸುಬ್ಬು ಸಾಹಸ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ವೀರೇಶ್ ಮೇಕಪ್ ಹಾಗೂ ಜೇಕಬ್ ಮ್ಯಾಥ್ಯೂ ಬಣ್ಣದ ಸಂಯೋಜನೆ ಮಾಡಿದ್ದಾರೆ. ನಿರ್ದೇಶನ ತಂಡದಲ್ಲಿ ದುಷ್ಯಂತ್, ಲಕ್ಷ್ಮೀಶ್, ದೀಪಕ್, ತರುಣ್, ಪ್ರದೀಪ್, ಪವನ್, ಸಿದ್ಧಾರ್ಥ್ ಹಾಗೂ ಅಣ್ಣೇಗೌಡ ಇದ್ದಾರೆ. ಸುಧೀಂದ್ರ ವೆಂಕಟೇಶ್ ಚಿತ್ರದ ಪಿ.ಆರ್.ಒ ಆಗಿದ್ದಾರೆ.

Related Posts

ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ಗಾ ಗರಗ’ ಹಾಡು ಬಿಡುಗಡೆ

ನಟ ನಿರೂಪ್ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ಗಾ ಗರಗ’ ಭಾವನಾತ್ಮಕ ಹಾಗೂ ಅರ್ಥಪೂರ್ಣ ಗೀತೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡಿಗೆ ಬಾಲಿವುಡ್‍ನ ಜನಪ್ರಿಯ ಗಾಯಕ…

57ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಭಾರತೀಯ ಪನೋರಮಾಗೆ ತುಳು ಚಿತ್ರ `ಪಿಲಿ ಚನ್ನೆ’ ಆಯ್ಕೆ

`ನಡುಬೆಟ್ಟು ಅಪ್ಪಣ್ಣ’ ನಂತರ ಅನುಪಮ ಶರಧಿ ನಿರ್ದೇಶನದ ಎರಡನೇ ಚಿತ್ರಕ್ಕೆ ರಾಷ್ಟ್ರಮಟ್ಟದ ಗೌರವ ಒಂದೇ ಚಿತ್ರದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ಬಹುಮುಖ ಪ್ರತಿಭೆ ಎನ್ನುವ ಹಿರಿಮೆಗೆ ಪಾತ್ರರಾಗಿದ್ಧಾರೆ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾದ 57ನೇ ಭಾರತೀಯ ಅಂತರಾಷ್ಟ್ರೀಯ ಚಿತ್ರೀತ್ಸೋತ್ಸ ಗೋವಾದಲ್ಲಿ…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581