ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ ಹೊಸಬರ ಸಿನಿಮಾಗಳು ಸದ್ದು ಮಾಡುತ್ತಿದ್ದು, ಆ ಸಾಲಿಗೆ ಇದೀಗ
ಬಾರ್ಡರ್ ಡೈರೀಸ್' ಸಿನಿಮಾ ಸೇರ್ಪಡೆಯಾಗಿದೆ. ನೈಜ ಘಟನೆ ಹಾಗೂ ಜೀವಂತ ಪಾತ್ರಗಳ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಈ ಚಿತ್ರದಯಾರೋ ನೀನು ಯಾರೋ ನೀನು’ ಎಂಬ ಸುಮಧುರ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

ಹೊಯ್ಸಳ ಕೊಣನೂರು ಚಿತ್ರ ನಿರ್ಮಿಸಿದ್ದು, ಯುವ ಪ್ರತಿಭೆ ಎಎಸ್ಜಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿರುವ, ಎಎಸ್ಜಿ ಸಾಹಿತ್ಯವಿರುವ ಹಾಡಿಗೆ ಸಿದ್ಧಾರ್ಥ ಬೆಳ್ಮಣ್ಣು ಮತ್ತು ಶ್ರೀಲಕ್ಷ್ಮಿ ಬೆಳ್ಮಣ್ಣು ಧ್ವನಿಯಾಗಿದ್ದಾರೆ.
ನಿರ್ದೇಶಕ ಎಎಸ್ಜಿ ಮಾತನಾಡಿ “ನನ್ನ ಹೆಸರು ಶಶಿಕುಮಾರ್. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಆಲದಹಳ್ಳಿ ಊರು. ಸಿನಿಮಾ ಪಯಣದಲ್ಲಿ `ಎಎಸ್ಜಿ’ ಎಂಬ ಪೆನ್ ನೇಮ್ ಇಟ್ಟುಕೊಂಡಿದ್ದೇನೆ. ಕೇವಲ ಕರ್ನಾಟಕದ ಹುಡುಗ ಮತ್ತು ತಮಿಳುನಾಡಿನ ಹುಡುಗಿಯ ಪ್ರೇಮಕಥೆ ಮಾತ್ರವಲ್ಲ. ಅತ್ತಿಬೆಲೆಯ ಆಚೆಗಿನ ಗಡಿ ಭಾಗದ ಪ್ರದೇಶಗಳಲ್ಲಿ ಕಂಡುಬರುವ ವಿಶಿಷ್ಟ ಜೀವನಶೈಲಿ ಮತ್ತು ಅಲ್ಲಿ ಕಂಡ ನೈಜ ಪಾತ್ರಗಳನ್ನು ಆಧರಿಸಿ ಕಥೆ ಹೆಣೆದಿದ್ದೇನೆ. ಹತ್ತು ವರ್ಷಗಳ ಹಿಂದೆ ಓಡಾಡುತ್ತಿದ್ದ ಜಾಗದ ನೆನಪುಗಳು ಕಥೆಯನ್ನು ಬರೆಯಲು ಪ್ರೇರಣೆ ನೀಡಿತು. ಕಥಾನಾಯಕಿ ಜಾಗಕ್ಕೆ ಬಂದ ನಂತರ ಅಲ್ಲಿನ ಪ್ರಪಂಚ ಹೇಗೆ ತೆರೆದುಕೊಳ್ಳುತ್ತದೆ ಎಂಬುದೇ ಚಿತ್ರದ ಮೂಲ ತಿರುಳು. ಮೇಲ್ನೋಟಕ್ಕೆ ಇದೊಂದು ಪ್ರೇಮಕಥೆಯಂತೆ ಕಂಡರೂ, ಒಳಗೆ ತೀವ್ರವಾದ ಡ್ರಾಮಾ, ಕ್ರೈಮ್ ಮತ್ತು ಸಾಮಾಜಿಕ ವಾಸ್ತವತೆಗಳ ಸಂಕೀರ್ಣತೆಯಿದೆ” ಎಂದು ತಿಳಿಸಿದರು.

“ಸಿನಿಮಾದ ಬಹುತೇಕ ಭಾಗ ಹೊಸೂರು ಮತ್ತು ತಮಿಳುನಾಡಿನ ಗಡಿ ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ಉಳಿದ ಭಾಗಗಳನ್ನು ಚನ್ನಪಟ್ಟಣ, ಮಾಗಡಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರೀಕರಣ, ಪೆÇೀಸ್ಟ್ ಪೆÇ್ರಡಕ್ಷನ್ ಮತ್ತು ಸೆನ್ಸಾರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ನಿರ್ಮಾಪಕರಿಗೆ ಪೂರ್ಣ ಸಿನಿಮಾ ತೋರಿಸಲಾಗಿದ್ದು, ಅವರು ಅತ್ಯಂತ ಸಂತಸ ವ್ಯಕ್ತಪಡಿಸಿರುವುದು ತಂಡದ ಹುಮ್ಮಸ್ಸನ್ನು ಹೆಚ್ಚಿಸಿದೆ” ಎಂದರು.
ಹಾಡು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದ ಖ್ಯಾತ ಗೀತರಚನೆಕಾರ ಕವಿರಾಜ್, “ಕನ್ನಡ ಚಿತ್ರರಂಗದಲ್ಲಿ ಸಾವಿರಾರು ಕೋಟಿ ಬಜೆಟ್ನ ಕಮರ್ಷಿಯಲ್ ಸಿನಿಮಾಗಳ ಜೊತೆಗೆ, ಹೊಸ ಕನಸುಗಳನ್ನು ಹೊತ್ತು ಬರುವ ಪ್ರತಿಭಾವಂತರ ಇಂತಹ ಕಡಿಮೆ ಬಜೆಟ್ನ ಕಂಟೆಂಟ್ ಆಧಾರಿತ ಸಿನಿಮಾಗಳೂ ಗೆಲ್ಲಬೇಕು. ಪೆÇೀಸ್ಟರ್ ನೋಡಿದಾಗಲೇ ಗಡಿ ಭಾಗದ ಸೂಕ್ಷ್ಮ ಕಥೆ ಹೇಳುವಂತೆ ಭರವಸೆ ಮೂಡಿಸುತ್ತದೆ. ಚಿತ್ರರಂಗದ ಬೆಳವಣಿಗೆಗೆ ಪರಸ್ಪರ ಕಾಲೆಳೆಯುವುದನ್ನು ಬಿಟ್ಟು ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಹಾರೈಸಿದರು.

ಚಿತ್ರದಲ್ಲಿ ಅಂಜನ್ ನಾಗೇಂದ್ರ, ಅಶ್ವಿತಾ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ವೀಣಾ ಸುಂದರ್, ಗೋಪಾಲಕೃಷ್ಣ ದೇಶಪಾಂಡೆ, ಶಿವರಾಜ್ , ಕೆ.ಆರ್. ಪೇಟೆ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಚ್ಯುತ್ ಬಿ.ಎಸ್. ಛಾಯಾಗ್ರಹಣ ಮತ್ತು ಆಕಾಶ್ ಹಿರೇಮಠ ಅವರ ಸಂಕಲನ ಚಿತ್ರಕ್ಕಿದೆ.








