Aaramba" film trailer released

ಆರಂಭ” ಚಿತ್ರದ ಟ್ರೈಲರ್ ಬಿಡುಗಡೆ - CineNewsKannada.com

ಆರಂಭ” ಚಿತ್ರದ ಟ್ರೈಲರ್ ಬಿಡುಗಡೆ

ಮಂಜುನಾಥ್ ಬಡಿಗೇರ್ ಚೊಚ್ಚಲ ಬಾರಿಗೆ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಚಿತ್ರ’ ಆರಂಭ ‘ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹಿರಿಯ ಕಲಾವಿದ ಗಣೇಶ್ ರಾವ್ ಕೇಸರ್‍ಕರ್ ಸೇರಿದಂತೆ ಹಿರಿಯ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿ ನಟಿಸಿದ್ದು ಚಿತ್ರ ಮುಂದಿನ ತಿಂಗಳು ಬಿಡುಗಡೆಗೆ ಸಜ್ಜಾಗಿದೆ.

ಶ್ರೀ ಕಾಳಿಕಾ ದೇವಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಾಂಭಯ್ಯ ಆಚಾರ್ಯ ನಿರ್ಮಾಣದ ಆರಂಭ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ವೇಳೆ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು

ನಿರ್ದೇಶಕ ಮಂಜುನಾಥ್ ಬಡಿಗೇರ್ ಮಾತನಾಡಿ ಕೆಲವು ಸಿನಿಮಾಗಳಲ್ಲಿ ನಿರ್ದೇಶನ ಛಾಯಾಗ್ರಾಹಣ ತಂಡದಲ್ಲಿ ಕೆಲಸ ಮಾಡಿ ಕಿರುಚಿತ್ರ ನಿರ್ದೇಶಿಸಿದ್ದೇನೆ. ಇದು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆ, ಪಕ್ಷಿಗಳ ರಕ್ಷಣೆಗಾಗಿ ಹೋರಾಡುತಿದ್ದ ಯುವತಿಯ ಮೇಲೆ ಅತ್ಯಾಚಾರ ಹಾಗೂ ಕೊಲೆಯಾಗುತ್ತದೆ. ಆ ಕೊಲೆಯ ಪ್ರತಿಕಾರಕ್ಕೆ ಇಬ್ಬರು ಯುವಕರು ಮುಂದಾಗುತ್ತಾರೆ. ಅವರ ಹೋರಾಟಕ್ಕೆ ಜಯ ಸಿಗುತ್ತಾ ಎಂಬುದರ ಸುತ್ತ ಚಿತ್ರದ ಕಥೆ ಸಾಗುತ್ತದೆ ಎಂದರು

ಈ ಚಿತ್ರದಲ್ಲಿ ನಾಯಕಿಯಾಗಿ ನಿಶ್ಚಿತಾ ಶೆಟ್ಟಿ ನಟಿಸಿದ್ದು, ಜಗನ್ನಾಥ ದಾಸರು ಬಳಿಕ ನಟಿಸುತ್ತಿರುವ ಎರಡನೇ ಚಿತ್ರವಿದು. ಎರಡನೇ ನಾಯಕನಾಗಿ ಪೃಥ್ವಿರಾಜ್ ಅಭಿನಯಿಸಿದ್ದಾರೆ.

ಕುಮಾರ್ ಬೋರಕನವರ್, ರಜತಾದ್ರಿ ಪ್ರಶಾಂತಂ, ಪ್ರಿಯಾಂಕಾ, ಕಾಳಚಾರಿ, ಪ್ರಭು ಹಿರೇಮಠ್ ಪ್ರಮುಖ ತಾರಾಗಣದಲ್ಲಿದ್ದಾರೆ. ಈ ಚಿತ್ರದಲ್ಲಿ ಛಾಯಾಗ್ರಾಹಣ ಮುಂಜಾನೆ ಮಂಜು, ಸಂಗೀತ ಅಲೆಕ್ಸ್ ಮಾಡಿದ್ದು, ಸಂಕಲನ ಆಚಾರ್ಯ ಗುರು ಮಾಡಿದ್ದು ಚಿತ್ರವನ್ನು ಜೂಲೈ ನಲ್ಲಿ ಬಿಡುಗಡೆ ಮಾಡಲು ಸಕಲ ಸಿದ್ಧತೆ ಚಿತ್ರ ತಂಡ ಮಾಡಿಕೊಳ್ಳುತ್ತಿದೆ.

310 ಚಿತ್ರಗಳಲ್ಲಿ ನಟನೆ

ಹಿರಿಯ ಕಲಾವಿದ ಗಣೇಶ್ ರಾವ್ ಕೇಸರ್‍ಕರ್ ಆರಂಭ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು ಇದುವರೆಗೆ 310 ಸಿನಿಮಾಗಳಲ್ಲಿ ನಟಿಸಿದ್ದೇನೆ ಅವುಗಳಲ್ಲಿ 150ಕ್ಕೂ ಅಧಿಕ ಚಿತ್ರಗಳಲ್ಲಿ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು.
ಈ ಚಿತ್ರದಲ್ಲಿ ಮೊದಲು ನೆಗಿಟಿವ್ ಶೇಡ್‍ನಲ್ಲಿ ಕಾಣಿಸಿಕೊಂಡ್ಡು ನಂತರ ನಾಯಕರಿಗೆ ಸಹಾಯ ಮಾಡುವ ಪಾತ್ರ ನನ್ನದು. ಇದುವರೆಗೂ ಸಿಕ್ಕಿರುವ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ ಎಂದು ಹೇಳಿಕೊಂಡರು.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin