Simple Suni movie gets U/A certificate for 'cloudy weather'
ಸಿಂಪಲ್ ಸುನಿ ಸಿನಿಮಾ ‘ಮೋಡ ಕವಿದ ವಾತಾವರಣಕ್ಕೆ ಯು/ಎ ಪ್ರಮಾಣಪತ್ರ
ಸಿಂಪಲ್ ಸುನಿ ಸಾರಥ್ಯದಲ್ಲಿ ಮೂಡಿ ಬಂದಿರುವ ಮೋಡ ಕವಿದ ವಾತಾವರಣ ಸಿನಿಮಾ ಟೈಟಲ್ ಹಾಗೂ ತನ್ನ ಕಂಟೆಂಟ್ ನಿಂದ ಗಾಂಧಿನಗರದಲ್ಲಿ ನಿರೀಕ್ಷೆ ಹೆಚ್ಚು ಮಾಡಿದೆ. ಜೂನ್ ತಿಂಗಳ 26 ರಂದು ಈ ಚಿತ್ರ ತೆರೆಗೆ ಬರುತ್ತಿದೆ.

ಇದೀಗ ಸಿನಿಮಾ ಸೆನ್ಸಾರ್ ಪಾಸಾಗಿದೆ. ಮೋಡ ಕವಿದ ವಾತಾವರಣ ಚಿತ್ರಕ್ಕೆ ಸೆನ್ಸಾರ್ ಮಂಡಲಿ ಯು/ಎ ಪ್ರಮಾಣ ಪತ್ರ ಕೊಟ್ಟಿದೆ. ಯಾವುದೇ ಕಟ್ ಇಲ್ವೆ ಮ್ಯೂಟ್ ಇಲ್ಲದೇ ಕ್ಲಿಯರ್ ಆದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.
ಮೋಡ ಕವಿದ ವಾತಾವರಣದಲ್ಲಿ ಸಿಂಪಲ್ ಸುನಿ ತಮ್ಮ ಶಿಷ್ಯನಿಗಾಗಿ ಆಕ್ಷನ್ ಕಟ್ ಹೇಳಿದ್ದಾರೆ. ಸುನಿ ಅವರ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆ ಶೀಲಮ್ ಈ ಸಿನಿಮಾ ನಾಯಕ.
ಶೀಲಮ್ ಅವರು ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಮೋಡ ಕವಿದ ವಾತಾವರಣದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.


