Achyut Kumar-Gopalkrishna Deshpande of 'Anthammana'

‘ಅಣ್ತಮ್ಮನಾ’ದ ಅಚ್ಯುತ್ ಕುಮಾರ್-ಗೋಪಾಲಕೃಷ್ಣ ದೇಶಪಾಂಡೆ - CineNewsKannada.com

‘ಅಣ್ತಮ್ಮನಾ’ದ ಅಚ್ಯುತ್ ಕುಮಾರ್-ಗೋಪಾಲಕೃಷ್ಣ ದೇಶಪಾಂಡೆ

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಗಳಾದ ಅಚ್ಯುತ್ ಕುಮಾರ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ತಮಗೆ ಸಿಕ್ಕ ಯಾವುದೇ ಪಾತ್ರವಾಗಿದ್ದರೂ ನೀರು ಕುಡಿದಷ್ಟು ಸಲೀಲಾಗಿ ಪಾತ್ರ ಮಾಡಿಬಿಡಬಲ್ಲರು,. ಇಂತಹ ಎರಡು ದೈತ್ಯ ಕಲಾವಿದರು ಇದೀಗ “ಅಣ್ತಮ್ಮನ’ ರಾಗಿದ್ದಾರೆ

ಪೇಟಾ’ಸ್ ಸಿನಿ ಕೆಫೆ ಮತ್ತು ಫಿಲ್ಮಿ ಮಾಂಕ್ ಸಹಯೋಗದೊಂದಿಗೆ ಕಿರಾತಕ ಪ್ರದೀಪ್ ರಾಜ್, ಪಿ ಸಿ ಶೇಖರ್, ಪ್ರಶಾಂತ್ ರಾಜಪ್ಪ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಅನುಭವ ಇರುವ ವಿಶ್ವ ನಿರ್ದೇಶನದ ಚೊಚ್ಚಲ ಚಿತ್ರ ‘ಅಣ್ತಮ್ತನ’ ಘೋಷಣೆ ಆಗಿದೆ.

ಈ ಚಿತ್ರದಲ್ಲಿ ಬಹುಭಾಷಾ ನಟ ಅಚ್ಯುತ್ ಕುಮಾರ್ ಮತ್ತು ಬಹುಬೇಡಿಕೆಯ ನಟ ಗೋಪಾಲಕೃಷ್ಣ ದೇಶಪಾಂಡೆ ಅಣ್ಣ ತಮ್ಮಂದಿರಾಗಿ ಮುಖ್ಯಭೂಮಿಕೆಯಲ್ಲಿ ಮತ್ತು ಒಂದ್ ಕಥೆ ಹೇಳ್ಲಾ ಹಾಗೂ ಶಾಲಿವಾಹನ ಶಕೆ ಖ್ಯಾತಿಯ ಗಿರೀಶ್ ಜಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವಿಶ್ವಜಿತ್ ರಾವ್ ಛಾಯಾಗ್ರಹಣ ಪೂರ್ಣಚಂದ್ರ ತೇಜಸ್ವಿ ಎಸ್ ವಿ ಅವರ ಸಂಗೀತ, ಶೈಲೇಶ್ ಕುಮಾರ್ ಸಂಭಾಷಣೆ, ಹರಿ ಪರಾಕ್ ಸಾಹಿತ್ಯ ಇರುವ ಚಿತ್ರ ಅಣ್ತಮ್ತನ.

ಚಿತ್ರ ಅಣ್ಣ ತಮ್ಮ ಸಂಬಂಧ, ನಮ್ಮ ಮಣ್ಣಿನ ಆಚರಣೆ, ಹಳೆ ಮೈಸೂರು ಸಂಸ್ಕೃತಿ, ನಂಬಿಕೆ ಮೂಢನಂಬಿಕೆಗಳ ಸುತ್ತ ಹೆಣೆದಿರುವ ಕಥೆ ಹೊಂದಿದೆ. ಆದಿಚುಂಚನಗಿರಿ, ನಾಗಮಂಗಲ, ಮದ್ದೂರು, ಮಂಡ್ಯ ಸುತ್ತ-ಮುತ್ತ ಚಿತ್ರೀಕರಣ ನಡೆಯಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin