Actor Diganth joins forces with Ramesh Aravind
ರಮೇಶ್ ಅರವಿಂದ್ ಜೊತೆ ಸೇರಿದ ನಟ ದಿಗಂತ್
“ದೈಜಿ” ಚಿತ್ರ ರಮೇಶ್ ಅರವಿಂದ್ ಅವರ 106ನೇ ಚಿತ್ರ. ಶಿವಾಜಿ ಸುರತ್ಕಲ್ ಸರಣಿ ಚಿತ್ರಗಳ ಬಳಿಕ ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತು ರಮೇಶ್ ಅರವಿಂದ್ ಜೊತೆಯಾಗಿ ಕೆಲಸ ಮಾಡುತ್ತಿರುವ ಮೂರನೇ ಚಿತ್ರ.

ಚಿತ್ರದ ತಾರಾಗಣ ಬಳಗದಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ಇತ್ಯಾದಿ ನಟರು ಕಾಣಿಸಿ ಕೊಳ್ಳಲಿದ್ದಾರೆ. ಹೊಸ ವಿಷಯ ಏನೆಂದರೆ ಗಾಳಿಪಟ ಖ್ಯಾತಿಯ ದಿಗಂತ್ ಅವರು ಸೇರ್ಪಡೆ ಆಗಿದ್ಧಾರೆ. ರಮೇಶ್ ಅರವಿಂದ್ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಭಿನ್ನ ರೀತಿಯ ಪಾತ್ರದಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿ ಕೊಳ್ಳಲಿದ್ದಾರೆ.
ರಮೇಶ್ ಅರವಿಂದ್ ಸೂರ್ಯ ಪಾತ್ರದಲ್ಲಿ, ರಾಧಿಕಾ ನಾರಾಯಣ್ ಭೂಮಿ ಪಾತ್ರದಲ್ಲಿ, ದಿಗಂತ್ ಗಗನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಶೇಕಡ 50 ರಷ್ಟು ಚಿತ್ರೀಕರಣ ಮುಕ್ತಾಯ ಗೊಂಡಿದೆ. ಈ ಚಿತ್ರದ ಛಾಯಾಗ್ರಹಣ ಶ್ರೀಶಾ ಕುದುವಳ್ಳಿ ಮಾಡುತ್ತಿದ್ದು, ರವಿ ಕಶ್ಯಪ್ ನಿರ್ಮಾಣ ಮಾಡುತ್ತಿದ್ದಾರೆ


