Actor Prabhas starrer 'The Rajasaab' trailer released

ನಟ ಪ್ರಭಾಸ್ ಅಭಿನಯದ ‘ದಿ ರಾಜಾಸಾಬ್’ ಟ್ರೈಲರ್ ಬಿಡುಗಡೆ - CineNewsKannada.com

ನಟ ಪ್ರಭಾಸ್ ಅಭಿನಯದ ‘ದಿ ರಾಜಾಸಾಬ್’ ಟ್ರೈಲರ್ ಬಿಡುಗಡೆ

ಬಹುನಿರೀಕ್ಷಿತ ರೆಬೆಲ್ ಸ್ಟಾರ್ ಪ್ರಭಾಸ್ ನಟನೆ ಪ್ಯಾನ್-ಇಂಡಿಯಾ ಚಿತ್ರ ‘ದಿ ರಾಜಾಸಾಬ್’ ಟ್ರೈಲರ್ ಬಿಡುಗಡೆಯಾಗಿದೆ. ಅಭಿಮಾನಿಗಳಿಗೆ ಥ್ರಿಲ್ ನೀಡುವುದರ ಜತೆಗೆ ಅಚ್ಚರಿಗೆ ದೂಡಿದೆ.

ಹಿಂದೆಂದೂ ಕಾಣದ ರೀತಿಯಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಹಾರರ್ ಕಾಮಿಡಿ ಶೈಲಿಯ ಸಿನಿಮಾದಲ್ಲಿ, ಹೃದಯಸ್ಪರ್ಶಿ ಭಾವನೆ ಬೆರೆಸಿದ್ದಾರೆ ನಿರ್ದೇಶಕ ಮಾರುತಿ.

ದೇಶದ ಅತಿದೊಡ್ಡ ಹಾರರ್ ಫ್ಯಾಂಟಸಿ ಡ್ರಾಮಾ ಎಂದು ಬಿಂಬಿಸಲಾಗಿರುವ ‘ದಿ ರಾಜಾಸಾಬ್’, ಮೇಕಿಂಗ್, ದೊಡ್ಡ ಕ್ಯಾನ್ವಾಸ್ ಮೂಲಕವೇ ಎಲ್ಲರನ್ನು ನಿಬ್ಬೆರಗಾಗಿಸಿದೆ.ಇದುವರೆಗೆ ಕಾಣದ ಅತಿದೊಡ್ಡ ಹಾರರ್ ಸೆಟ್ ಹೊಂದಿದೆ. ನೋಡುಗರನ್ನು ಭಯಕ್ಕೆ ಕೆಡವುದರ ಜತೆಗೆ ದೃಶ್ಯ ವೈಭವ ಮೀರಿ, ಪ್ರೀತಿ, ಕುಟುಂಬ ಮತ್ತು ಪೂರ್ವಜರ ಪರಂಪರೆಯ ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳಿದ್ದಾರೆ ನಿರ್ದೇಶಕರು.

ಬ್ಲಾಕ್ಬಸ್ಟರ್ ಸಿನಿಮಾ ‘ಕಲ್ಕಿ 2898 ಎಡಿ’ ನಂತರ ಮತ್ತೆ ದೊಡ್ಡ ಪರದೆಗೆ ಮರಳುತ್ತಿದ್ದಾರೆ ಪ್ರಭಾಸ್ ನಟನಾ ಮೋಡಿ, ಮೈನವಿರೇಳಿಸುವ ಆಕ್ಷನ್ ಮಿಶ್ರಣ, ಹೊಸ ಪ್ರಭಾಸ್ ಎದುರಾಗುವ ಸೂಚನೆ ನೀಡಿದಂತಿದೆ. ಟ್ರೈಲರ್ ಅನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ 105 ಚಿತ್ರಮಂದಿರಗಳಲ್ಲಿ ಸಾಮೂಹಿಕ ಪ್ರದರ್ಶನ ಮಾಡಲಾಗಿದೆ.

‘ ನಿರ್ದೇಶಕ ಮಾರುತಿ ಮಾತನಾಡಿ “ದಿ ರಾಜಾಸಾಬ್” ಚಿತ್ರದೊಂದಿಗೆ, ಭಾವನಾತ್ಮಕವಾದ ಮತ್ತು ಮನರಂಜನೆಯ ಪ್ರಪಂಚ ಸೃಷ್ಟಿಸಲು ಬಯಸಿದ್ದೇವೆ. ಟ್ರೈಲರ್ ಕೇವಲ ಸಣ್ಣ ಝಲಕ್ ಮಾತ್ರ. ಪ್ರಭಾಸ್ ಪಾತ್ರಕ್ಕೆ ಸಾಟಿಯಿಲ್ಲದ ಶಕ್ತಿಯಾಗಿದ್ದಾರೆ ಎಂದಿದ್ದಾರೆ.

ಟಿಜಿ ವಿಶ್ವ ಪ್ರಸಾದ್ ಮಾತನಾಡಿ, “ಭಾರತದ ಅತಿದೊಡ್ಡ ಹಾರರ್ ಸೆಟ್ ನಿರ್ಮಿಸುವುದರಿಂದ ಹಿಡಿದು ರೆಬೆಲ್ ಸ್ಟಾರ್ ಪ್ರಭಾಸ್ ಹೊಸ ಅವತಾರ ಸೃಷ್ಟಿಸುವುದು ನಿಜಕ್ಕೂ ಒಂದು ಸ್ಮರಣೀಯ ಅನುಭವ. ಪ್ಯಾನ್-ಇಂಡಿಯಾ ವೈಭವವನ್ನು ನೋಡುಗ ಪ್ರತಿಯೊಬ್ಬರಿಗೂ ಉಣಬಡಿಸುವುದು ನಮ್ಮ ಗುರಿಯಾಗಿದೆ. ಎಂದಿದ್ದಾರೆ.

ರೆಬೆಲ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಸಂಜಯ್ ದತ್, ಬೋಮನ್ ಇರಾನಿ, ಜರೀನಾ ವಹಾಬ್, ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿಧಿ ಕುಮಾರ್ ನಟಿಸಿದ್ದಾರೆ ಜನವರಿ 9,ರಂದು ವಿಶ್ವಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin