Actor-director Aniruddha Jatakara is now an author: Book "Between the Lines" released

ನಟ,ನಿರ್ದೇಶಕ ಅನಿರುದ್ಧ ಜತಕರ ಈಗ ಲೇಖಕ: “ಸಾಲುಗಳ ನಡುವೆ” ಪುಸ್ತಕ ಬಿಡುಗಡೆ - CineNewsKannada.com

ನಟ,ನಿರ್ದೇಶಕ ಅನಿರುದ್ಧ ಜತಕರ ಈಗ ಲೇಖಕ: “ಸಾಲುಗಳ ನಡುವೆ” ಪುಸ್ತಕ ಬಿಡುಗಡೆ

ನಟನಾಗಿ ಕನ್ನಡಿಗರ ಮನ ಗೆದ್ದಿರುವ ಅನಿರುದ್ಧ ಜತಕರ ಉತ್ತಮ ಲೇಖಕರು ಹೌದು. ಇತ್ತೀಚೆಗೆ ಅನಿರುದ್ಧ ಬರೆದಿರುವ `ಸಾಲುಗಳ ನಡುವೆ’ ಎಂಬ ಪುಸ್ತಕದ ಅನಾವರಣವಾಗಿದೆ.

ಹಿರಿಯ ಕಲಾವಿದೆ ಪದ್ಮಶ್ರೀ ಪುರಸ್ಕೃತರಾದ ಡಾ ಭಾರತಿ ವಿಷ್ಣುವರ್ಧನ್, `ಸಾಲುಗಳ ನಡುವೆ’ ಪುಸ್ತಕ ಅನಾವರಣ ಮಾಡಿದರು. ಪತ್ರಕರ್ತ ಜೋಗಿ ಹಾಗೂ ಪ್ರಕಾಶಕ ಜಮೀಲ್ ಸಾವಣ್ಣ ಉಪಸ್ಥಿತರಿದ್ದರು.

ಈ ವೇಳೆ ಮಾತಿಗಿಳಿದ ನಟ, ನಿರ್ದೇಶಕ ಹಾಗು ಲೇಖಕ ಅನಿರುದ್ದ್ ಜಟಕರ, ‘ಸಾಲುಗಳ ನಡುವೆ’ ಪುಸ್ತಕವನ್ನು ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅವರಿಗೆ ಅರ್ಪಿಸುತ್ತೇನೆ 2008 ರಲ್ಲಿ ಬರವಣಿಗೆ ಆರಂಭಿಸಿದ್ದೆ ಹಿರಿಯ ನಿರ್ದೇಶಕ ಎಂ.ಎಸ್ ಸತ್ಯು ಅವರ `ಇಜ್ಜೋಡು’ ಚಿತ್ರದಲ್ಲಿ ನಟಿಸುವಾಗ ಚಿತ್ರದ ಸಂಭಾಷಣೆ ನನಗೆ ರೀತಿ ಹೇಳಿದರೆ ಚೆನ್ನಾಗಿರುತ್ತದೆ ಎನಿಸಿತು. ಅದನ್ನು ಸತ್ಯು ಅವರ ಬಳಿ ಹೇಳಿದೆ. ತುಂಬಾ ಚೆನ್ನಾಗಿದೆ ಅಂತ ಹೇಳಿ ನನ್ನ ಸಂಭಾಷಣೆಯನ್ನೇ ಓಕೆ ಮಾಡಿದರು. ಆನಂತರ 6 ಕಿರುಚಿತ್ರ ಬರೆದು ನಿರ್ದೇಶಿಸಿದ್ದೇನೆ ಎಂದರು

ಭಾರತಿ ಅಮ್ಮ ಕುರಿತು ಮಾಡಿದ ಸಾಕ್ಷ್ಯಚಿತ್ರಕ್ಕೂ ಬರೆದಿದ್ದೇನೆ. ಚಿತ್ರಕ್ಕೆ ನನಗೆ ರಾಷ್ಟ್ರಪ್ರಶಸ್ತಿ ಕೂಡ ಬಂದಿದೆ. ಆನಂತರ ಕನ್ನಡದ ಹಾಗೂ ಆಂಗ್ಲ ಭಾಷೆಯ ಪ್ರಮುಖ ದಿನಪತ್ರಿಕೆಗಳಿಗೆ ಲೇಖನ ಬರೆದಿದ್ದೇನೆ. ಇದನ್ನೆಲ್ಲಾ ಗಮನಿಸಿದ ತಾಯಿ ಲೇಖನಗಳನ್ನು ಪುಸ್ತಕ ರೂಪದಲ್ಲಿ ತರಲು ಹೇಳಿದರು. ಲೇಖನಗಳ ಜೊತೆಗೆ ಕೆಲವು ಹೊಸ ಲೇಖನಗಳು ಸೇರಿಸಿದ್ದೇನೆ. `ಸಾಲುಗಳ ನಡುವೆ’ ಪುಸ್ತಕ.ನಲವತ್ತು ಪ್ರಬಂಧಗಳ ಸಂಕಲನ. ಪುಸ್ತಕವನ್ನು ಬಿಡುಗಡೆ ಮಾಡಿಕೊಟ್ಟ ಭಾರತಿ ಅಮ್ಮ, ಜೋಗಿ, ಪ್ರಕಾಶಕರಾದ ಜಮೀಲ್ ಸಾವಣ್ಣ ಹಾಗು ವಿಶೇಷವಾಗಿ ತಂದೆ ತಾಯಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು

ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್ ಮಾತನಾಡಿ ಅನಿರುದ್ಧ ಅವರಿಗೆ ಬರವಣಿಗೆ ಅವರ ಕುಟುಂಬದಿಂದ ಬಂದಿದೆ. ಅವರ ತಂದೆ, ತಾಯಿ ಎಲ್ಲರೂ ಒಳ್ಳೆಯ ಬರಹಗಾರರು. ಅನಿರುದ್ದ ಬರೆದಿರುವ `ಸಾಲುಗಳ ನಡುವೆ’ ಪುಸ್ತಕ ಬಿಡುಗಡೆಯಾಗಿದೆ. ಯಜಮಾನರು ವಿಷ್ಣುವರ್ಧನ್ ನೋಡಿದ್ದರೆ ಬಹಳ ಖುಷಿ ಪಡುತ್ತಿದ್ದರು. ಈಗಲೂ ಎಲ್ಲಿಂದಲೊ ಆಶೀರ್ವಾದಿಸಿರುತ್ತಾರೆ ಎಂದು ಹೇಳಿದರು

ಜೋಗಿ ಮಾತನಾಡಿ ಸಿನಿಮಾ ಪತ್ರಕರ್ತನಾಗಿ ಅನೇಕ ಬಾರಿ ವಿಷ್ಣುವರ್ಧನ್ ಅವರ ಸಂದರ್ಶನಕ್ಕೆ ಈ ಮನೆಗೆ ಬಂದಿದ್ದೇನೆ. ಅವರ ಜೊತೆಗೆ ಹಲವಾರು ಗಂಟೆಗಳನ್ನು ಕಳೆದಿದ್ದೇನೆ. ಅದೆಲ್ಲಾ ನೆನಪಾಯಿತು. ಇನ್ನೂ, ಅನಿರುದ್ಧ ಜತಕರ ಅವರನ್ನು ಇಪ್ಪತ್ತೈದು ವರ್ಷಗಳಿಂದ ಬಲ್ಲೆ. ಅನಿರುದ್ಧ ಹಾಗೂ ಅವರ ಸಹೋದರಿ ಅರುಂಧತಿ ಇಬ್ಬರು ಅನೇಕ ನಾಟಕ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. ಕೆಲವು ಪ್ರಬಂಧಗಳು ಮನಸ್ಸಿಗೆ ಬಹಳ ಹತ್ತಿರವಾಗಿವೆ ಎಂದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin