Actor Rajavardhan promoted to producer: “Java” launch as first step

ನಿರ್ಮಾಪಕರಾಗಿ ಬಡ್ತಿ ಪಡೆದ ನಟ ರಾಜವರ್ದನ್: ಮೊದಲ ಹೆಜ್ಜೆಯಾಗಿ “ಜಾವಾ” ಆರಂಭ - CineNewsKannada.com

ನಿರ್ಮಾಪಕರಾಗಿ ಬಡ್ತಿ ಪಡೆದ ನಟ ರಾಜವರ್ದನ್: ಮೊದಲ ಹೆಜ್ಜೆಯಾಗಿ “ಜಾವಾ” ಆರಂಭ

ಕನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ನಟ ರಾಜವರ್ಧನ್ ಈಗ ನಿರ್ಮಾಪಕರಾಗಿದ್ದಾರೆ. ಮೊದಲ ಹೆಜ್ಜೆಯಾಗಿBarn Swallow company ಪ್ರೊಡಕ್ಷನ್ಸ್ ಹೌಸ್ ನಲ್ಲಿ “ಜಾವಾ” ಸಿನಿಮಾ ನಿರ್ಮಾಣ ಮಾಡುತ್ತಿದ್ದು ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ.

ಬಿರುಗಾಳಿಯಿಂದ ತಪ್ಪಿಸಿಕೊಂಡು ಓಡಿ ಬರುತ್ತಿರುವ ಹುಡುಗನೊಬ್ಬನ ಜಾವಾ ಪೋಸ್ಟರ್ ಬಹಳಷ್ಟು ಕುತೂಹಲ ಹುಟ್ಟುಹಾಕಿದ್ದು, ಜುಲೈನಲ್ಲಿ ಚಿತ್ರೀಕರಣ ಆರಂಭಿಸುವ ಯೋಜನೆ ಇದೆ. ಚಿತ್ರಕ್ಕೆ ಪತ್ರಕರ್ತ ದೇವಾ ಚಕ್ರವರ್ತಿ ನಿರ್ದೇಶನ ಮಾಡುತ್ತಿದ್ದು ರಾಗಿಣಿ ನಾಯಕಿಯಾಗಿ ಕಾಣಸಿಕೊಳ್ಳುತ್ತಿದ್ದಾರೆ

ನಟ ಹಾಗೂ ನಿರ್ಮಾಪಕ ರಾಜವರ್ಧನ್ ಮಾತನಾಡಿ ನಮ್ಮದು ಚಿತ್ರೋದ್ಯಮದ ಕುಟುಂಬ, ತಂದೆ ಡಿಂಗ್ರಿ ನಾಗರಾಜ್ 40 ವರ್ಷಗಳಿಂದ ಚಿತ್ರಗಳಲ್ಲಿ ನಟಿಸಿ , ಸೀರಿಯಲ್ , ಸಿನಿಮಾಗಳನ್ನ ನಿರ್ಮಿಸಿ , ನಿರ್ದೇಶಿಸಿ ಪ್ರೇಕ್ಷಕರನ್ನ ರಂಜಿಸುತ್ತ ಮನ ಗೆದ್ದಿದ್ದಾರೆ. ನಾನು ಕೂಡ ಚಿತ್ರರಂಗದಲ್ಲಿ ನಟನಾಗಿ ಬಿಚ್ಚುಗತ್ತಿ , ಪ್ರಣಯಂ , ಹಿರಣ್ಯ , ಗಜರಾಮ ಸೇರಿದಂತೆ ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸುತ್ತ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ ಸಾಗಿದ್ದೇನೆ. ಸುಮಾರು ಎರಡು ವರ್ಷಗಳ ಹಿಂದೆ ಪೂರ್ವ ತಯಾರಿ ಮಾಡಿಕೊಂಡು ನನ್ನದೇ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇನೆ ಎಲ್ಲರ ಸಹಕಾರ ಬೆಂಬಲ ಇರಲಿ ಎಂದು ಕೇಳಿಕೊಂಡರು.

ಚಿತ್ರದ ಕಥೆ ಕುತೂಹಲಕಾರಿಯಾಗಿದ್ದು, 80ರ ಕಾಲಘಟ್ಟದಲ್ಲಿ ಚಿತ್ರರಂಗದಲ್ಲಿ ನಡೆದ ಘಟನೆ . ಚಿತ್ರೋದ್ಯಮದ ಮಂದಿಗೆ ಹೆಚ್ಚು ಈ ವಿಚಾರ ಗೊತ್ತಿಲ್ಲ, ಇಂತಹ ಇಂಟರೆಸ್ಟಿಂಗ್ ಕಥೆಯನ್ನು ಪೂರ್ವ ತಯಾರಿ ಮಾಡಿಕೊಂಡು ಚಿತ್ರ ಆರಂಭಿಸಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಈಗಾಗಲೇ ನಾಲ್ಕು ಕಥೆಗಳಿದೆ ಬೇರೆ ಬೇರೆ ಕಲಾವಿದರಿಗೂ ಅವಕಾಶ ನೀಡುವ ಆಲೋಚನೆ ಇದೆ. ನಮ್ಮ ನೂತನ ಸಂಸ್ಥೆಗೆ ನಿಮ್ಮೆಲ್ಲರ ಪ್ರೀತಿ , ಸಹಕಾರ ಪೆÇ್ರೀತ್ಸಾಹ ಇರಲಿ ಎಂದು ಕೇಳಿಕೊಂಡರು.

ನಾಯಕಿ ರಾಗಿಣಿ ದ್ವಿವೇದಿ ಮಾತನಾಡಿ ಸವಾಲಿನಿಂದ ಕೂಡಿರುವ ಪಾತ್ರ. ಸಿನಿಮಾ ನಟಿಯ ಬದುಕಿನ ಸುತ್ತ ಸಾಗುವ ಕಥೆ ಇದಾಗಿದೆ. ಹಾಗೆಯೇ ನಟ ರಾಜವರ್ಧನ್ ಆತ್ಮೀಯ ಗೆಳೆಯ, ಅವರ ನಿರ್ಮಾಣದ ಸಂಸ್ಥೆಯ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಖುಷಿ ಇದೆ. ಚಿತ್ರತಂಡಕ್ಕೆ ನಿಮ್ಮೆಲ್ಲರ ಪೆÇ್ರೀತ್ಸಾಹ ಸಹಕಾರ ಇರಲಿ ಎಂದು ಹೇಳಿದರು.

ನಿರ್ದೇಶಕ ದೇವ ಚಕ್ರವರ್ತಿ ಮಾತನಾಡಿ ನೈಜ ಘಟನೆಗಳ ಆಧಾರದ ಚಿತ್ರ ನಿರ್ದೇಶನ ಮಾಡಲು ಮುಂದಾಗಿದ್ದೇನೆ. ಜಾವಾದ ಮೂಲಕ. ಒಂದು ಸ್ಟ್ರಾಂಗ್ ಕಂಟೆಂಟ್ ಅನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇನೆ. ಕಥಾಂದರ ಅಷ್ಟೇ ಕುತೂಹಲಕಾರಿಯಾಗಿ ಸಾಗಲಿದ್ದು , 80ರ ಕಾಲಘಟ್ಟದಲ್ಲಿ ಚಿತ್ರರಂಗದಲ್ಲಿ ನಡೆದ ನೈಜ ಘಟನೆ ಆಧಾರಿತವಾಗಿದೆ. ನಟಿಯ ಬದುಕಿನ ಸುತ್ತ ಸಾಗುವ ಈ ಕಥಾ ಎಳೆ ಹಲವು ಘಟನೆಗಳಿಗೆ ಸಾಕ್ಷಿಯಾಗುವಂತಿದೆ. ಸರಿಸುಮಾರು ಎರಡು ವರ್ಷಗಳ ಕಾಲ ಕಥೆಯ ಪೂರ್ವ ತಯಾರಿ ಮಾಡಿಕೊಂಡು ಜಾವಾ ಎನ್ನುವ ಶೀರ್ಷಿಕೆ ಇಟ್ಟುಕೊಂಡು ಚಿತ್ರೀಕರಣಕ್ಕೆ ಹೊರಡಲು ಸಿದ್ದರಾಗಿದ್ದೇವೆ ಎಂದರು,

80ರ ದಶಕದ ಕಥೆ ಇದ್ದರೂ ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತ ವಾಗುವಂತೆ ಚಿತ್ರಕಥೆ ಮಾಡಿದ್ದೇನೆ. ನಟ ರಾಜವರ್ಧನ್ ಪಾತ್ರ ಎಷ್ಟು ವಿಶೇಷವೋ , ಅಷ್ಟೇ ಕುತೂಹಲಕಾರಿ ಪಾತ್ರದಲ್ಲಿ ನಟಿ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಬಹಳಷ್ಟು ಪಾತ್ರಗಳು ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಪೂರ್ಣಚಂದ್ರ ತೇಜಸ್ವಿ ಸಂಗೀತ,, ಕೆ.ಎಂ. ಪ್ರಕಾಶ್ ಸಂಕಲನವಿದ್ದು, ಛಾಯಾಗ್ರಾಹಕರ ಆಯ್ಕೆ ಆಗಬೇಕಿದೆ ಎಂದು ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin