“ಆಲ್ಫಾ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಟ ಶ್ರೀಮುರುಳಿ
ವಿಜಯ್ ನಿರ್ದೇಶನದಲ್ಲಿ ಹೇಮಂತ್ ಕುಮಾರ್ ನಾಯಕನಾಗಿ ನಟಿಸಿರುವ ಆಲ್ಫಾ #MEN LOVE VENGEANCE ಚಿತ್ರದ ಟ್ರೇಲರ್ ಅನ್ನು ನಟ ಶ್ರೀಮರುಳಿ ಬಿಡುಗಡೆ ಮಾಡಿ ಶುಭ ಹಾರೈಸಿದರು

ಆನಂದ್ ಕುಮಾರ್ ನಿರ್ಮಾಣದ, ವಿಜಯ್ ನಿರ್ದೇಶನದ ಹಾಗೂ ಹೇಮಂತ್ ಕುಮಾರ್ ಎಂಬ ನೂತನ ಪ್ರತಿಭೆ ನಾಯಕನಾಗಿ ನಟಿಸಿರುವ “ಆಲ್ಫಾ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಇದೇ ಫೆಬ್ರವರಿ 20 ರಂದು ತೆರೆಗೆ ಬರಲಿದೆ.
ಟ್ರೇಲರ್ ಬಿಡುಗಡೆ ಮಾತನಾಡಿದ ನಟ ಶ್ರೀಮುರಳಿ, “ಆಲ್ಫಾ” ಹೇಮಂತ್ ಕುಮಾರ್ ಅಲಅಭಿನಯದ ಮೊದಲ ಚಿತ್ರ. ಟ್ರೇಲರ್ ನೋಡಿದಾಗ ಹೇಮಂತ್ ಅವರು ಚೊಚ್ಚಲ ಚಿತ್ರಕ್ಕೆ ಅಗಿರುವ ತಯಾರಿ ಕಂಡು ಸಂತೋಷವಾಯಿತು ಮತ್ತು ಇಡೀ ತಂಡದ ಶ್ರಮ ಟ್ರೇಲರ್ ನಲ್ಲಿ ಕಾಣುತ್ತಿದೆ. ಸಿನಿಮಾ ಕೂಡ ಚೆನ್ನಾಗಿ ಮೂಡಿಬಂದಿರುವ ಭರವಸೆ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
ನಾಯಕ ನಟ ಹೇಮಂತ್ ಕುಮಾರ್ ಮಾತನಾಡಿ
ನಾಯಕನಾಗಬೇಕೆಂಬುದು ನನಗೆ ಮೊದಲಿನಿಂದಲೂ ಆಸೆ. ಈಡೇರಿದೆ. ನಾಯಕನಾಗಿ ನಟಿಸಲು ಬೇಕಾದ ಪೂರ್ವ ತಯಾರಿಗಳನ್ನೆಲ್ಲಾ ಮಾಡಿಕೊಂಡೆ ಅಭಿನಯಿಸಲು ಆರಂಭ ಮಾಡಿದ್ದು. ನಿರ್ದೇಶಕ ವಿಜಯ್ ಸೇರಿ ಚಿತ್ರತಂಡದ ಸಹಕಾರ ಅಪಾರ. ಅಚ್ಯುತಕುಮಾರ್, ಅವಿನಾಶ್ ಅವರಂತಹ ಹಿರಿಯ ನಟರ ಜೊತೆಗೆ ನಟಿಸಿದ್ದು ಸಂತಸವಾಗಿದೆ. ಅನೂಪ್ ಸೀಳಿನ್ ಸಂಗೀತದಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳು ಚೆನ್ನಾಗಿದೆ. ಚಿತ್ರ ಫೆಬ್ರವರಿ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.

ನಿರ್ದೇಶಕ ವಿಜಯ್ ಮಾತನಾಡಿ ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನರನ್ನು ತಲುಪಿದೆ. ಫೆಬ್ರವರಿ 20 ರಂದು ತೆರೆಗೆ ಬರುತ್ತಿದೆ. ಎಲ್ಲರು ನಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದರು.
ಕಾರ್ತಿಕ್ ಮಹೇಶ್ ಮಾತನಾಡಿ ವಿಜಯ್ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ಈವರೆಗೂ ಮಾಡಿರದ ಪಾತ್ರದಲ್ಲಿ ನಟಿಸಿದ್ದೇನೆ ಎಂದರು
ನಾಯಕಿಯರಾದ ಆಯನಾ, ಗೋಪಿಕ ಸುರೇಶ್, ಕಲಾವಿದರಾದ ಅವಿನಾಶ್, ಅಚ್ಯುತಕುಮಾರ್, ವಿನಯ್ ಬಿದ್ದಪ್ಪ, ಗಿರಿರಾಜ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಗಾಯಕ ವ್ಯಾಸರಾಜ್ ಸೋಸಲೆ, ನೃತ್ಯ ನಿರ್ದೇಶಕ ಭೂಷಣ್, ಕಲಾ ನಿರ್ದೇಶಕ ಅಮರ್ ಹಾಗೂ ಸಂಭಾಷಣೆ ಬರೆದಿರುವ ಮಾಸ್ತಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.


