"Daiva" movie trailer released; movie to release on February 12th

“ದೈವ” ಚಿತ್ರದ ಟ್ರೇಲರ್ ಬಿಡುಗಡೆ ; ಫೆಬ್ರವರಿ 12ಕ್ಕೆ ಸಿನಿಮಾ‌ ಬಿಡುಗಡೆ - CineNewsKannada.com

“ದೈವ” ಚಿತ್ರದ ಟ್ರೇಲರ್ ಬಿಡುಗಡೆ ; ಫೆಬ್ರವರಿ 12ಕ್ಕೆ ಸಿನಿಮಾ‌ ಬಿಡುಗಡೆ

ವಿಭಿನ್ನ ಕಥಾಹಂದರ ಹೊಂದಿರುವ “ದೈವ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.ಜಯಮ್ಮ ಪದ್ಮರಾಜ್ ನಿರ್ಮಿಸಿ ರಾಮಪ್ಪ ಸೋಮಪ್ಪ ಮೇಗಲಮನಿ, ಸೋಮಶೇಖರ್ ಜಿ ಪಟ್ಟಣಶೆಟ್ಟಿ ಸಹ ನಿರ್ಮಾಣವಿರುವ ಹಾಗೂ ಜಯರಾಜ್ ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿದ್ದಾರೆ

ನಿರ್ಮಾಪಕಿ ಜಯಮ್ಮ ಪದ್ಮರಾಜ್ ಟ್ರೇಲರ್ ಬಿಡುಗಡೆ ಮಾಡಿ, ಮಗ ಜಯರಾಜ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸಿರುವ “ದೈವ” ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.

ನಾಯಕ ನಿರ್ದೇಶಕ ಜಯರಾಜ್ ಮಾತನಾಡಿ ಇಂಜಿನಿಯರ್ ಕಾಲೇಜಿನ ಸಹಾಯಕ ಪ್ರಾದ್ಯಾಪಕನಾಗಿದ್ದೆ. ಕೆಲವು ದಿನಗಳ ನಂತರ ಕೆಲಸಕ್ಕೆ ರಾಜಿನಾಮೆ ನೀಡಿ ನಿರ್ದೇಶಕ ರವಿ ಶ್ರೀವತ್ಸ ಬಳಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಲು ಆರಂಭ ಮಾಡಿದೆ. ನಂತರ ಸಿನಿಮಾ ಬಗ್ಗೆ ತಿಳಿದುಕೊಂಡು ಈ ಚಿತ್ರ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದೇನೆ ಎಂದರು

ತಾಯಿ ನಿರ್ಮಾಣ ಮಾಡಿದ್ದಾರೆ‌. “ದೈವ” ಎಂದರೆ ಹೆಚ್ಚಾಗಿ ನೆನಪಾಗುವುದು ರಿಷಭ್ ಶೆಟ್ಟಿ “ಕಾಂತಾರ” ಸಿನಿಮಾ. ಅದರಲ್ಲಿ ದಕ್ಷಿಣ ಕನ್ನಡದ ದೈವಗಳ ಬಗ್ಗೆ ಹೇಳಿದ್ದಾರೆ. ಈ ಚಿತ್ರದಲ್ಲಿ ಮಂಡ್ಯ ಜಿಲ್ಲೆಯ ಜೋಗಿಗಳ ಬಗ್ಗೆ ಹೇಳಿದ್ದೇನೆ. ಇದೊಂದು ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ ಕೂಡ‌. ಯಾವುದೇ ಸೆಟ್ ಹಾಕದೆ, ಶಿರಸಿ ಬಳಿಯ ಹಳ್ಳಿಯೊಂದರಲ್ಲಿ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಮಾಡಿದ್ದೇನೆ ಎಂದು ಹೇಳಿದರು.

ಎರಡು ಶೇಡ್ ಗಳಲ್ಲಿ ಪಾತ್ರವಿರುತ್ತದೆ. ಈಗಾಗಲೇ ಟೀಸರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೇಲರ್ ಗೂ ಮೆಚ್ಚುಗೆ ದೊರಕಿದೆ. ಚಿತ್ರತಂಡದ ಸಹಕಾರದಿಂದ ಉತ್ತಮವಾಗಿ ಮೂಡಿಬಂದಿರುವ ನಮ್ಮ ಚಿತ್ರ ಫೆಬ್ರವರಿ 12 ರಂದು ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು

ಪತ್ರಕರ್ತ, ನಟ, ಮಂಜುರಾಜ್ ಸೂರ್ಯ (ವಿಸಿಎನ್ ಮಂಜು ) ಮಾತನಾಡಿ ಗ್ರಾಮೀಣ ಸೊಗಡಿನ ಚಿತ್ರದಲ್ಲಿ ನನ್ನದು ಎನ್ ಜಿಒ ಮೂಲಕ ಹಳ್ಳಿಯ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಶಿಕ್ಷಕನ ಪಾತ್ರ ಮಾಡಿದ್ದಾರೆ ಹಾಗೂ ಚಿತ್ರದ ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ನಾಯಕಿಯರಾದ ನೀತು ರಾಯ್, ಸುರಭಿ ರೆಡ್ಡಿ, ನಟ ಅರುಣ್ ಬಚ್ಚನ್ ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹಾಗೂ ಛಾಯಾಗ್ರಾಹಕ ಸಿದಾರ್ಥ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು‌ಕುರಿತು ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin