"Rayara Darshana": A gathering of over 25 stars including Rajinikanth, Shivanna

“ರಾಯರ ದರ್ಶನ”: ರಜನಿಕಾಂತ್, ಶಿವಣ್ಣ ಸೇರಿ 25ಕ್ಕೂ ಹೆಚ್ಚು ತಾರೆಯರ ಸಂಗಮ - CineNewsKannada.com

“ರಾಯರ ದರ್ಶನ”: ರಜನಿಕಾಂತ್, ಶಿವಣ್ಣ ಸೇರಿ 25ಕ್ಕೂ ಹೆಚ್ಚು ತಾರೆಯರ ಸಂಗಮ

ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದು ಖ್ಯಾತರಾದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಕೋಟ್ಯಂತರ ಭಕ್ತರಿಗೆ ಇದೊಂದು ಅದ್ಭುತವಾದ ಸಿಹಿ ಸುದ್ದಿ. ರಾಯರ ದಿವ್ಯ ಚರಿತ್ರೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ದೃಶ್ಯೀಕರಿಸುವ “ರಾಯರ ದರ್ಶನ” ಆಲ್ಬಂ ಸಾಂಗ್ ಸದ್ದಿಲ್ಲದೆ ಸಿದ್ಧವಾಗುತ್ತಿದೆ

ಆಲ್ಬಂ ಕೇವಲ ಒಂದು ಭಕ್ತಿಗೀತೆಯಾಗಿ ಉಳಿಯದೆ, ದಕ್ಷಿಣ ಭಾರತದ ಖ್ಯಾತ ನಟರ ಸಮಾಗಮಕ್ಕೆ ಸಾಕ್ಷಿಯಾಗುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್, ನೆನಪಿರಲಿ ಪ್ರೇಮ್ ಸೇರಿದಂತೆ ಚಿತ್ರರಂಗದ 25ಕ್ಕೂ ಹೆಚ್ಚು ಜನಪ್ರಿಯ ತಾರೆಯರು ಕಾಣಿಸಿಕೊಳ್ಳುತ್ತಿದ್ದಾರೆ.ಈ ಆಲ್ಬಂ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದ್ದು, ಜಾಗತಿಕ ಮಟ್ಟದ ಭಕ್ತರನ್ನು ತಲುಪುವ ಗುರಿ ಹೊಂದಿದೆ.

ಮಂತ್ರಾಲಯದ ಗುರು ಸಾರ್ವಭೌಮರ ಕುರಿತು ಈವರೆಗೆ ಯಾರು ಹೇಳದ ಮತ್ತು ತೋರಿಸದ ರಾಯರ ಬದುಕಿನ ಕೆಲವು ಅಪರೂಪದ ವಿಷಯಗಳನ್ನು ಈ ಆಲ್ಬಂನಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದದೊಂದಿಗೆ ಅದ್ಧೂರಿಯಾಗಿ ಮೂಡಿಬರುತ್ತಿದೆ.

ಆಲ್ಬಂನ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ನಡೆದಿದೆ. ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿ ಮೂಡಿಬರುತ್ತಿರುವ ಆಲ್ಬಂನ ಎರಡನೇ ಹಂತದ ಚಿತ್ರೀಕರಣವು ಫೆಬ್ರವರಿ 24ರಂದು ಪ್ರಾರಂಭವಾಗಲಿದೆ ಎಂದು ತಂಡ ಮಾಹಿತಿ ನೀಡಿದೆ.

ದೃಶ್ಯ ವೈಭವವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರಲು ಚಿತ್ರರಂಗದ ಹೆಸರಾಂತ ತಾಂತ್ರಿಕ ವರ್ಗ ಶ್ರಮಿಸುತ್ತಿದೆ.
ಸುಗುಣ ರಘು ಭಟ್ ನಿರ್ಮಾಣದಲ್ಲಿ ರಘು ಭಟ್ ನಿರ್ದೇಶನವಿದೆ.

ಸಿ.ಆರ್. ಬಾಬಿ ಹಾಗೂ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು ನಾಗಾರ್ಜುನ ಶರ್ಮ ಸಾಹಿತ್ಯವಿದೆ.
ನಾಗೇಶ್ ವಿ ಆಚಾರ್ಯ ಕ್ಯಾಮರಾ ಆಲ್ಬಂ ಗೀತೆಗೆ ಇದೆ
ರಾಯರ ಭಕ್ತರ ಮನಸ್ಸಿಗೆ ಹತ್ತಿರವಾಗುವಂತೆ ಮತ್ತು ದೃಶ್ಯ ರೂಪದಲ್ಲಿ ಹೊಸ ಅನುಭವ ನೀಡುವ ಸಲುವಾಗಿ “ರಾಯರ ದರ್ಶನ” ಹಾಡು ಭಕ್ತರ ಕಣ್ಮುಂದೆ ಬರಲು ಸಜ್ಜಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin