“ಬಿಳಿಚುಕ್ಕಿ ಹಳ್ಳಿಹಕ್ಕಿ” ಚಿತ್ರಕ್ಕೆ ಸಾಥ್ ನೀಡಿದ ನಟ ಶ್ರೀಮುರುಳಿ
ಮಹೇಶ್ ಗೌಡ ನಿರ್ದೇಶಿಸಿ, ನಿರ್ಮಿಸಿ ನಾಯಕನಾಗಿ ಅಭಿನಯಿಸಿರುವ `ಬಿಳಿಚುಕ್ಕಿ ಹಳ್ಳಿಹಕ್ಕಿ’. ಈಗಾಗಲೇ ಚಿತ್ರದ ಕಥಾವಸ್ತುವಿನಿಂದ ಗಮನ ಸೆಳೆದಿದೆ, ಚಿತ್ರದ ಕಂಟೆಂಟು ಮೆಚ್ಚುಕೊಂಡು ನಟ ಶ್ರೀಮುರುಳಿ ಸಾಥ್ ನೀಡಿರುವುದು ಚಿತ್ರಕ್ಕೆ ಆನಬಲಬಂದಿದೆ.

ತೊನ್ನಿನ ಸಮಸ್ಯೆ ಆಧರಿಸಿ ಸ್ವತಃ ಆ ಸಮಸ್ಯೆಯಿಂದ ಬಳಲುತ್ತಿರುವ ನಾಯಕ, ನಿರ್ದೇಶಕ ಮಹೇಶ್ ಗೌಡ ನಿರ್ಮಾಣದ ಈ ಚಿತ್ರ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಇದೇ ತಿಂಗಳ 24 ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ತೊನ್ನು ಅಥವಾ ವಿಟಿಲಿಗೋ ಎಂಬ ಸಮಸ್ಯೆಯ ಸುತ್ತ ರೂಪುಗೊಂಡಿರುವ ಸಿನಿಮಾದ ಕೆಲ ತುಣುಕುಗಳನ್ನು ಕಂಡು ಥ್ರಿಲ್ ಆಗಿರುವ ರೋರಿಂಗ್ ಸ್ಟಾರ್ ಶ್ರೀಮುರುಳಿ, ಈಸಿನಿಮಾವನ್ನು ತಾವೇ ಅರ್ಪಿಸುವ ನಿರ್ಧಾರ ಪ್ರಕಟಿಸಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರುಳಿಯವರ ಬೆಂಬಲದಿಂದಾಗಿ ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದೆ.
ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರದ ಬಿಡುಗಡೆಯ ತಯಾರಿ ಈಗ ಜೋರಾಗಿ ನಡೆಯುತ್ತಿದೆ. ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇನಡುವಲ್ಲಿಯೇ ಶ್ರೀಮುರುಳಿ ಅವರ ಕಡೆಯಿಂದ ಇಂಥಾದ್ದೊಂದು ಸಿಹಿ ಸುದ್ದಿ ಸಿಕ್ಕಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಶ್ರೀಮುರುಳಿ ಒಂದು ಸಿನಿಮಾವನ್ನು ಪ್ರೆಸೆಂಟ್ ಮಾಡಿ ಬೆಂಬಲಿಸಲು ಮುಂದಾಗಿದ್ದಾರೆ.

ಮಹೇಶ್ ಗೌಡ ಸೇರಿದಂತೆ ಒಂದಿಡೀ ಚಿತ್ರತಂಡ ಅಭಿನಂದಿಸಿರುವ ಶ್ರೀಮುರುಳಿ ಭಾರತೀಯ ಚಿತ್ರರಂಗದಲ್ಲಿಯೇ ಪ್ರಥಮ ಎನ್ನುವ ಇಂಥ ಕಥಾ ವಸ್ತುವನ್ನು ಕನ್ನಡ ಚಿತ್ರದ ಮೂಲಕ ಮುಟ್ಟಿರುವುದಕ್ಕೆ, ಸ್ವತಃ ವಿಟಿಲಿಗೋ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರೇ ನಾಯಕನಾಗಿ ನಟಿಸಿರುವುದಕ್ಕೆ ಅಭಿನಂದಿಸಿದ್ದಾರೆ.

