October 18 and 19 is the mid-season finale of "Bigg Boss" Kannada Season 12

ಅಕ್ಟೋಬರ್ 18 ಮತ್ತು 19 “ಬಿಗ್ ಬಾಸ್” ಕನ್ನಡ ಸೀಸನ್ 12ರ ಮಿಡ್ ಸೀಸನ್ ಫಿನಾಲೆ - CineNewsKannada.com

ಅಕ್ಟೋಬರ್ 18 ಮತ್ತು 19 “ಬಿಗ್ ಬಾಸ್” ಕನ್ನಡ ಸೀಸನ್ 12ರ ಮಿಡ್ ಸೀಸನ್ ಫಿನಾಲೆ

ಬಿಗ್ ಬಾಸ್ ಕನ್ನಡ ರಿಯಾಲಟಿ ಶೋ ಇತಿಹಾಸದಲ್ಲಿ
ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಬಿಗ್ ಬಾಸ್ ಸೀಸನ್ 12ರ ಮಿಡ್ ಸೀಸನ್ ಫಿನಾಲೆ ಅಕ್ಟೋಬರ್ 18 ಮತ್ತು 19 ರಂದು ಕಲರ್ಸ್ ಕನ್ನಡದಲ್ಲಿ ರಾತ್ರಿ 8 ರಿಂದ 11 ಗಂಟೆಗಳವರೆಗೆ ನಡೆಯಲಿದೆ

ಬಿಗ್ ಬಾಸ್ ಕನ್ನಡ ಸೀಸನ್ 12, . ಈಗ ಇನ್ನೊಂದು ಅನಿರೀಕ್ಷಿತ ತಿರುವು ಕೊಡಲಿದೆ ಬಿಗ್ ಬಾಸ್ ಅದುವೇ ಮಿಡ್ ಸೀಸನ್ ಫಿನಾಲೆ. ಹೌದು, ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯಲಿದೆ. ಇದು ನಿರೀಕ್ಷೆಗೂ ಮೀರಿದ, ಕುತೂಹಲಕರ ತಿರುವುಗಳನ್ನು ತರಲಿದೆ.

ಈ ಫಿನಾಲೆಯಲ್ಲಿ ಭಾರೀ ಎಲಿಮಿನೇಷನ್  ನಡೆಯಲಿದ್ದು, ಜೊತೆಗೆ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಲ್ಲಿ ಕಾಲಿಡುತ್ತಿದ್ದಾರೆ. ಇವರ ಆಗಮನದಿಂದ ಈಗಾಗಲೇ ಇರುವ ಸ್ಪರ್ಧಿಗಳ ಆಟಕ್ಕೆ ಹೊಸ ಉತ್ಸಾಹ ಮತ್ತು ತಿರುವು ಸಿಗಲಿದೆ.

ಇದಲ್ಲದೆ, ಈ ಬಾರಿ ಮಿಡ್ ಸೀಸನ್ ವಿನ್ನರ್ ಯಾರೆಂದು ಘೋಷಿಸಲಾಗುವುದು ಮತ್ತು ಅವರಿಗೆ ಬಹುಮಾನ ಕೂಡಾ ನೀಡಲಾಗುತ್ತದೆ.

ಈ ವಾರಾಂತ್ಯ ಪ್ರೇಕ್ಷಕರಿಗೆ ನೃತ್ಯ ಪ್ರದರ್ಶನ, ಹಾಸ್ಯಭರಿತ ಮಾತುಕತೆ ಹಾಗೂ ಅನಿರೀಕ್ಷಿತ ಸೆಲೆಬ್ರಿಟಿಗಳು ಕೂಡಾ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಅವರು ಮನೆಯಲ್ಲಿ
ಆಟಗಳನ್ನು ಆಡುವುದಲ್ಲದೆ , ಸ್ಪರ್ಧಿಗಳೊಂದಿಗೆ ಬೆರೆಯುತ್ತಾ ಮರೆಯಲಾಗದ ಮನರಂಜನೆಯನ್ನು ನೀಡಲಿದ್ದಾರೆ.
ಒಟ್ಟು 6 ಗಂಟೆಗಳ ಮನರಂಜನಾ ಸಂಭ್ರಮ ಇದು.

ಫಿನಾಲ್ ತಲುಪಿದ ಜೋಡಿ

ಈ‌ ನಡುವೆ ನಿನ್ನೆ ನಡೆದ ಸಂಚಿಕೆಯಲಿ ಮಾಳು ನಿಪ್ಪನಾಳ್ ಮತ್ತು ಸ್ಪಂದನ ಸೋಮಣ್ಣ ಜೋಡಿ ಫೈನಲ್ ತಲುಪಿದೆ. ಈ ಮೂಲಕ. ಕಾಕ್ರೋಚ್ ಸುಧಿ ಬಳಿಕ ಪೈನಲ್ ತಲುಪಿದ ಜೋಡಿ ಇದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin