Actress Aditi Balan enters “Operation Dream Theater 666”

“ಆಪರೇಷನ್ ಡ್ರೀಮ್ ಥಿಯೇಟರ್ 666” ಗೆ ಎಂಟ್ರಿಕೊಟ್ಟ ನಟಿ ಅದಿತಿ ಬಾಲನ್ - CineNewsKannada.com

“ಆಪರೇಷನ್ ಡ್ರೀಮ್ ಥಿಯೇಟರ್ 666” ಗೆ ಎಂಟ್ರಿಕೊಟ್ಟ ನಟಿ ಅದಿತಿ ಬಾಲನ್

“ಆಪರೇಷನ್ ಡ್ರೀಮ್ ಥಿಯೇಟರ್ 666” ಚಿತ್ರ ತಂಡ ಹೊಸ ಪಾತ್ರ ಘೋಷಿಸಿದೆ. ಕರುನಾಡ ಚಕ್ರವರ್ತಿ ಡಾ ಶಿವರಾಜಕುಮಾರ್ ಏಜೆಂಟ್ ಪ್ರಕಾಶ್, ನಟರಾಕ್ಷಸ ಡಾಲಿ ಧನಂಜಯ್ ಅವರನ್ನು ಏಜೆಂಟ್ ಶಂಕರ್ ಬಳಿಕ ಖ್ಯಾತ ನಟಿ, ತಮಿಳಿನ ರಾಜ್ಯ ಪ್ರಶಸ್ತಿ ಪುರಸ್ಕೃತೆ, ಅದಿತಿ ಬಾಲನ್ ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Actress Aditi Balan

ಅದಿತಿ ಬಾಲನ್ “ಅರುವಿ” ಚಿತ್ರದಲ್ಲಿ ಉತ್ತಮ ಅಭಿನಯದಿಂದ ಎಲ್ಲರ ಮನೆಮಾತಾಗಿದ್ದರು. ತದನಂತರ ಕ್ಯಾಪ್ಟನ್ ಮಿಲ್ಲರ್, ಪಡವೆಟ್ಟು ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಆಪರೇಷನ್ ಡ್ರೀಮ್ ಥಿಯೇಟರ್ 666 ನಲ್ಲಿ ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಹೇಮಂತ್ ರಾವ್ ನಿರ್ದೇಶನದ ಚಿತ್ರದ ಈಗಾಗಲೇ ತನ್ನ ಪಾತ್ರಗಳ ಮೂಲಕವೇ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಕರುನಾಡ ಚಕ್ರವರ್ತಿ ಡಾ ಶಿವರಾಜಕುಮಾರ್ ಏಜೆಂಟ್ ಪ್ರಕಾಶ್ ಆಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಹೃದಯ ಗೆದ್ದಿತ್ತು. ಈ ಪಾತ್ರವು ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದಲ್ಲಿ ಡಾ ರಾಜಕುಮಾರ್ ಪಾತ್ರಕ್ಕೆ ಗೌರವ ಸಲ್ಲಿಸುವುದು.

ನಟರಾಕ್ಷಸ ಡಾಲಿ ಧನಂಜಯ್ ಅವರನ್ನು ಏಜೆಂಟ್ ಶಂಕರ್ ಆಗಿ ಪರಿಚಯಿಸಿತು. ಇದೀಗ ನಟಿ ಅದಿತಿ ಬಾಲನ್ ಅವರನ್ನು ಏಜೆಂಟ್ ಕಾವೇರಿಯಾಗಿ ಪರಿಚಯಿಸಿರುವುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರ ಈಗಷ್ಟೇ ಚಿತ್ರೀಕರಣದ ಐದನೇ ಶೆಡ್ಯೂಲನ್ನು ಮುಗಿಸಿದ್ದು, ಇದೀಗ ತನ್ನ ಪೋಸ್ಟ್ ಪ್ರೊಡಕ್ಷನ್ಸ್ ಹಂತಕ್ಕೆ ಕಾಲಿಡುತ್ತಿದೆ.

ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್, ನಟರಾಕ್ಷಸ ಡಾಲಿ ಧನಂಜಯ್, ಪ್ರಿಯಾಂಕಾ ಮೋಹನ್, ಅದಿತಿ ಬಾಲನ್ ಮುಂತಾದವರು ನಟಿಸಿದ್ದು, ಚಿತ್ರವನ್ನು ಡಾ ವೈಶಾಖ್ ಜೆ ಗೌಡ ನಿರ್ಮಾಣ ಮಾಡಿರುತ್ತಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಹರಾಗಿ, ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ಸ್ ವಿನ್ಯಾಸ ಮಾಡಿದ್ದು, ಇಂಚರ ಸುರೇಶ್ ವಸ್ತ್ರ ವಿನ್ಯಾಸ ಮಾಡಿರುತ್ತಾರೆ.

Actress Aditi Balan

ಆಪರೇಷನ್ ಡ್ರೀಮ್ ಥಿಯೇಟರ್ 666 ಒಂದು ಆಕ್ಷನ್, ಡ್ರಾಮಾ ಮತ್ತು ಥ್ರಿಲ್ಲರ್ ನೂತನ ಪ್ರಯತ್ನವಾಗಿರುತ್ತದೆ. ಏಜೆಂಟ್‍ಗಳನ್ನು ಮುಖ್ಯ ಪಾತ್ರಗಳಲ್ಲಿ ಹೊಂದಿರುವ ಈ ಚಿತ್ರ ಒಂದು ವಿಭಿನ್ನವಾದ ಥ್ರಿಲ್ ಅನುಭವವನ್ನು ಪ್ರೇಕ್ಷಕರಿಗೆ ನೀಡಲಿದೆ. ಇದೇ ವರ್ಷದಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆ ಚಿತ್ರ ಬಿಡುಗಡೆ ಮಾಡಬೇಕೆಂಬುದು ಚಿತ್ರ ತಂಡದ ಗುರಿಯಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin