ನಟ ಭುವನ್ ಪೊನ್ನಣ್ಣ ಜೊತೆ ಹಸೆ ಮಣೆ ಏರಿದ ನಟಿ ಹರ್ಷಿಕಾ ಪೂಣಚ್ಚ
ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಅವರ ವಿವಾಹ ಕೊಡವ ಶೈಲಿಯ ಅದ್ದೂರಿ ವಿವಾಹ ಸಮಾರಂಭ ಕೊಡಗಿನ ವಿರಾಜಪೇಟೆಯ ಅಮ್ಮಾತ್ತಿ ಕೊಡವ ಸಮಾಜದಲ್ಲಿ ನಡೆಯಿತು.
ಈ ಮೂಲಕ ಕಳೆದ 12 ವರ್ಷದ ಪ್ರೀತಿಗೆ ಮದುವೆಯ ಅಧಿಕೃತ ಮುದ್ರೆ ಒತ್ತಿದ್ದಾರೆ. ದಶಕದ ಪ್ರೀತಿ ಇನ್ನು ಮುಂದೆ ಸತಿ ಪತಿಗಳಾಗಿ ಚಿತ್ರರಂಗದಲ್ಲಿ ಹೊಸ ಇನ್ಸಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ಕೊಡವ ಸಂಪ್ರದಾಯದಂತೆ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಅವರು ಕುಟುಂಬದ ಸದಸ್ಯರು, ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಹೊಸ ಜೀವನ ಆರಂಭಿಸಿದ್ದಾರೆ.
ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ನಟಿ ಹರ್ಷಿಕಾ ಕಂಗೊಳಿಸುತ್ತಿದ್ದರು. ನಟಿ ಹರ್ಷಿಕಾ ಮತ್ತು ಭುವನ್ ಮದುವೆ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಕೊಡಗಿನ ಪದ್ದತಿಯಂತೆ ಸಂಪ್ರದಾಯ ಆರಂಭವಾಗಿದ್ದವ ಇಂದು ಬೆಳಗ್‍ಎ ಬಹುಕಾಲದ ಪ್ರೀತಿ, ಗೆಳೆತನಕ್ಕೆ ಮದುವೆ ಮುದ್ರೆ ಒತ್ತಿದ್ದಾರೆ.
ಮದುವೆ ವಿಶೇಷತೆ
ಮೊದಲ ದಿನ ಊರು ಕೂಡುವ ಶಾಸ್ತ್ರ ನಡೆಯಿತು. ಈ ವೇಳೆ ಊರು ಕೂಡುವ ಶಾಸ್ತ್ರದ ದಿವನೇ ತಾಯಿಯಿಂದ ಹರ್ಷಿಕಾಗೆ ಮಾಂಗಲ್ಯ ಧಾರಣೆ ಮಾಡಿದರು. ನಂತರ ಹುಡುಗ ಹುಡುಗಿ ಪರಸ್ಪರ ನೋಡುವ ಆಗಿಲ್ಲ ಇಬ್ಬರಿಗೂ ಹಿರಿಯರಿಂದ ಪ್ರತ್ಯೇಕವಾಗಿ ಮೆಹಂದಿ ಶಾಸ್ತ್ರ ನಡೆಸಲಾಯಿತು.
ಎರಡನೇ ದಿನ, ಬೆಳಗ್ಗೆ ಬಳೆ ಶಾಸ್ತ್ರ ನಂತರ ಹೊಂಬಣ್ಣ ಪೂಜೆ , ವರ ಪೂಜೆ ರೀತಿಯಲ್ಲಿ ಹುಡುಗ ಮಂಟಪಕ್ಕೆ ಬಂದುಹುಡುಗ ಬಾಳೆ ಕಟ್ ಮಾಡಲು ಹೊರಟು ಬಾಳೆ ಕಡೆದು ಬರ್ತಾರೆ ಅವನನ್ನ ಹುಡುಗಿ ಮನೆಯವರು ಕರೆದುಕೊಂಡು ಹೋಗುವ ಸಂಪ್ರದಾಯ ನಡೆಯಿತು
ನಂತರ ಹುಡುಗನಿಗೆ ಹುಡುಗಿ ಅಮ್ಮ ಹಾಲು ಬಾಳೆ ಹಣ್ಣು ಅನ್ನ ತಿನ್ನಿಸಿದ ನಂತರ ಹುಡುಗ ಹುಡುಗಿಯನ್ನ ವೇದಿಕೆ ಮೇಲೆ ಕೂರಿಸಿ ಮಹೂರ್ತ ಶುರು ಮಾಡ್ತರೆ ಬಂದವ್ರೆಲ್ಲ ಹುಡುಗ ಹುಡುಗಿಗೆ ಆಶೀರ್ವಾದ ಮಾಡಿ ಉಡುಗೊರೆ ಕೊಡುವುದು ಕೊಡಗಿನ ವಾಡಿಕೆ.
ಮದುವೆಯಲ್ಲಿ ಗಣ್ಯರು ಭಾಗಿ
ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮದುವೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಕಲಾವಿದರಾದ ದೊಡ್ಡಣ್ಣ, ಗಣೇಶ್, ಅನು ಪ್ರಭಾಕರ್, ತೇಜಸ್ವಿನಿ ಶರ್ಮಾ, ತಬಲ ನಾಣಿ ಭಾಗಿಯಾಗಿದ್ದರು.
ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ಜೋಡಿ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ನಕ್ಲೇಸ್ ನೀಡಿ ಹಾರೈಸಿದರು.
ಕೊಡಗಿನ ಅಡುಗೆ:
ಕೊಡವ ಜೋಡಿಯ ಮದುವೆಯಲ್ಲಿ ನಾನ್ ವೆಜ್, ವೆಜ್ ಎರಡು ಶೈಲಿಯ ಊಟದ ವ್ಯವಸ್ಥೆ ಎಲ್ಲರ ಗಮನ ಸೆಳೆಯಿತು.
ಕೊಡವ ಶೈಲಿಯ ,ನೂಪಟ್ಟು, ಪೋರ್ಕ್ ಪ್ರೈ, ಪೋರ್ಕ್ ಕರಿ, ಮಟನ್ ಬಿರ್ಯಾನಿ, ಮಟನ್ ಪ್ರೈ, ಚಿಕನ್ ಪ್ರೈ ಮಾಡಲಾಗಿತ್ತು. ಜೊತೆಗೆ ವೆಜ್ ನಲ್ಲೂ ಸಿದ್ದವಾಗಿದೆ ಬಗೆಬಗೆಯ ಭೋಜನಗಳಾದ ವೆಜಿಟೇಬಲ್ ಪಲಾವ್ ,ಆಲಸಂಡೆ ಪಲ್ಯ,ಬೆಂಡೆ ಪ್ರೈ, ಅನಾನಸ್ ಕರಿ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು ,ವೆಜ್ ಕುರ್ಮಾ ಎಲ್ಲರ ಬಾಯಲ್ಲಿ ನೀರು ತರಿಸಿತ್ತು.