ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮದುವೆಯಲ್ಲಿ ಮಿಂಚಿದ ನಟಿ ತೇಜಸ್ವಿನಿ ಶರ್ಮಾ
ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮದುವೆಯಲ್ಲಿ ಕೊಡಗಿನ ಮತ್ತೊಬ್ಬ ಸುಂದರಿ ,ನಟಿ ಸ್ನೇಹಿತೆ ತೇಜಸ್ವಿನಿ ಶರ್ಮಾ ಮಿಂಚಿದ್ದಾರೆ.
ಕೊಡಗಿನ ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆಯಲಿರುವ ಮದುವೆ ಕೊಡವ ಸಂಪ್ರದಾಯದಂತೆ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಅವರು ಕುಟುಂಬದ ಸದಸ್ಯರು, ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಹೊಸ ಜೀವನ ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ನಟಿ ತೇಜಸ್ವಿನಿ ಶರ್ಮಾ ಕೊಡಗಿನ ಸಾಂಪ್ರದಾಯಿಕ ದಿರಿಸಿನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು
ಮದುವೆಯಲ್ಲಿ ಏನೆಲ್ಲಾ ವಿಶೇಷತೆ
ವಿರಾಜಪಟೇಯಲ್ಲಿ ನಡೆದ ನಟಿ ಹರ್ಷಿಕಾ ನಟ ಭುವನ್ ಗೆ ಮದುವೆ ಸಂಭ್ರಮದಲ್ಲಿ ಕೊಡವ ಜೋಡಿಯ ಮದುವೆಯಲಿ ಬಗೆ ಬಗೆಯ ಭೋಜನ ಮದುವೆಗೆ ಆಗಮಿಸಿದ್ದ ಜನರಿಗೆ ಸಂತೃಪ್ತಿ ತರಿಸಿದೆ.
ನಾನ್ ವೆಜ್, ವೆಜ್ ಎರಡು ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೊಡವ ಶೈಲಿಯ ,ನೂಪಟ್ಟು, ಪೋರ್ಕ್ ಪ್ರೈ, ಪೋರ್ಕ್ ಕರಿ, ಮಟನ್ ಬಿರ್ಯಾನಿ, ಮಟನ್ ಪ್ರೈ, ಚಿಕನ್ ಪ್ರೈ ಜೊತೆಗೆ ವೆಜ್ ನಲ್ಲೂ ಸಿದ್ದವಾಗಿದೆ ಬಗೆಬಗೆಯ ಭೋಜನ ಸಿದ್ದವಾಗಿತ್ತು.
ವೆಜಿಟೇಬಲ್ ಪಲಾವ್ ,ಆಲಸಂಡೆ ಪಲ್ಯ,ಬೆಂಡೆ ಪ್ರೈ, ಅನಾನಸ್ ಕರಿ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು ,ವೆಜ್ ಕುರ್ಮಾ ಸೇರಿದಂತೆ ಕೊಡಗಿನ ಊಟ ಇಲ್ಲಿಯ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿತ್ತು.