ದ್ವಿಪಾತ್ರದಲ್ಲಿ ಪುತ್ರ ನಿಖಿಲ್ ಕುಮಾರ್ ಅಭಿನಯಸಿಬೇಕೆನ್ನುವ ಆಸೆ: ಎಚ್.ಡಿ ಕುಮಾರಸ್ವಾಮಿ
ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರ್ ಅವರಿಗಾಗಿ ಲೈಕಾ ಸಂಸ್ಥೆ ನಿರ್ಮಾಣ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣ ಮಾಡುತ್ತಿದೆ. ಅದರ ಮಹೂರ್ತ ನಡೆದಿದೆ.
ಪುತ್ರ ನಿಖಿಲ್ ಅವರಿಗಾಗಿ ನಿರ್ಮಾಪಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ದೊಡ್ಡದೊಂದು ಕನಸಿದೆ. ಅದನ್ನು ಎಲ್ಲರೆದು ಬಿಚ್ಚಿಟ್ಟಿದ್ದಾರೆ. ಅದುವೇ ಪುತ್ರ ದ್ವಿಪಾತ್ರದಲ್ಲಿ ನಟಿಸಬೇಕು ಎನ್ನುವುದು ಎಂದು ತಮ್ಮ ಮನದ ಇಂಗಿತ ಅನಾವರಣ ಮಾಡಿದ್ದಾರೆ.
ಕುಮಾರಸ್ವಾಮಿ ಅವರು ರಾಜಕಾರಣಕ್ಕೆ ಬರುವುದಕ್ಕಿಂತ ಮುಂಚೆ ಚಿತ್ರದ ವಿತರಕರಾಗಿ ಚಿತ್ರರಂಗ ಪ್ರವೇಶ ಮಾಡಿದವರು. ಅದರಲ್ಲಿ ಯಶಸ್ಸು ಕಂಡು ಒಂದರ ಹಿಂದೆ ಒಂದು ಯಶಸ್ವಿ ಚಿತ್ರ ನಿರ್ಮಾಣ ಮಾಡಿ ನಿರ್ಮಾಣದಲ್ಲಿಯೂ ಗೆಲುವು ಕಂಡವರು. ಅವರ ಮೂಲ ಉದ್ದೇಶ ಸಿನಿಮಾ ಮತ್ತು ಸಿನಿಮಾ ರಂಗದವರಿಗೆ ಒಳ್ಳೆಯದಾಗಬೇಕು ಎನ್ನುವುದೇ ಅವರ ಆಶಯವಾಗಿತ್ತು ಎನ್ನುವನ್ನು ಅನಾವರಣ ಮಾಡಿದ್ದಾರೆ.
ಲೈಕಾ ಸಂಸ್ಥೆಯ ಚಿತ್ರದ ಮುಹೂರ್ತ ಆರಂಭಕ್ಕೂ ಮುನ್ನ ಹಲವು ವರ್ಷಗಳ ಬಳಿಕ ಸಿನಿಮಾ ಪತ್ರಕರ್ತರ ಮುಂದೆ ಎದುರಾದ ಕುಮಾರಸ್ವಾಮಿ ಅವರು ಸಿನಿಮಾರಂಗದ ಒಡನಾಟವನ್ನು ಮೆಲುಕು ಹಾಕಿ, ವಿತರಕನಾಗಿ, ನಿರ್ಮಾಪಕನಾದ ದಿನಗಳು, ಆಗಿನ ಓಡಾಟ, ತಾವು ಎದರುಸಿದ ಸಮಸ್ಯೆ,ಟೀಕೆ ಹೀಗೆ ಹಲವು ವಿಷಯಗಳನ್ನು ಎಲ್ಲೆರೆದುರು ಬಚ್ಚಿಟ್ಟಿದ್ದಾರೆ.
ಕಾದಂಬರಿ ಆಧಾರಿತ “ಹೆಜ್ಜೆಗಳು” ಚಿತ್ರ ಮಾಡಬೇಕು ಎನ್ನುವುದು ಬಹುದಿನದ ಕನಸು. ನಿಖಿಲ್ ಒಪ್ಪಿದ್ದರೆ ಆರಂಭವಾಗಿ ಎರಡು ತಿಂಗಳು ಕಳೆಯುತ್ತಿತ್ತು. ಅದರ ಬಜೆಟ್ ಜಾಸ್ತಿ ಇರುವುದರಿಂದ ನಿಖಿಲ್ ಹಿಂದೇಟು ಹಾಕುತ್ತಿದ್ದಾರೆ. ಎಲ್ಲಿ ಸಾಲಗಾರನಾಗಿ ಬಿಡುತ್ತವೋ ಎನ್ನುವ ಆತಂಕ ಆತನದು. ಹೆಜ್ಜೆಗಳು ಚಿತ್ರದಲ್ಲಿ ದ್ವಿಪಾತ್ರದಲ್ಲಿ ಇರುವ ಕಥೆ. ಬಜೆಟ್ ಕಾರಣದಿಂದ ನಿಖಿಲ್ ಕುಮಾರ ಕಾಲ್ ಶೀಟ್ ಕೊಡುತ್ತಿಲ್ಲ. ಆತನನ್ನು ಹೇಗಾದರೂ ಮಾಡಿ ಮನವೊಲಿಸಿ ಮುಂದಿನ ವರ್ಷದ ವೇಳೆಗಾದರೂ ಈ ಸಿನಿಮಾ ಮಾಡುತ್ತೇನೆ .
ದ್ವಿಪಾತ್ರದಲ್ಲಿ ಕನ್ನಡದಲ್ಲಿ ಬಂದ ಯಾವುದೇ ಚಿತ್ರಗಳು ಸೋತಿಲ್ಲ. ಮಗ ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಈ ಕಾರಣಕ್ಕಾಗಿ ಮಗನಿಗೆ ಸಾಲಗಾರನ್ನಾಗಿ ಮಾಡುವುದಿಲ್ಲ ಒಪ್ಪಿಕೋ ಎಂದು ಮನವೊಲಿಸಿ ಚಿತ್ರ ಮಾಡಿಯೇ ಮಾಡುತ್ತೇನೆ. ಹೆಜ್ಜೆಗಳು ಸಿನಿಮಾ ಮಾಡುವುದು ನನ್ನ ಜೀವಮಾನದ ಆಸೆ. ಈ ಚಿತ್ರದಲ್ಲಿ ಮಗನನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳುವ ಆಸೆ ಇದೆ ಎಂದಿದ್ದಾರೆ.
ಆರಂಭದಲ್ಲಿ ವಿತರಕನಾಗಿದ್ದ ಅವಧಿಯಲ್ಲಿ ಕನ್ನಡ ಚಿತ್ರಗಳಿಗೆ 3 -4 ಲಕ್ಷ ಕೊಡುತ್ತಿದ್ದ ವೇಳೆ 10-15 ಲಕ್ಷ, ಅದಕ್ಕೂ ಹೆಚ್ಚು ಮೊತ್ತ ನೀಡಿ ಚಿತ್ರದ ಹಂಚಿಕೆ ಹಕ್ಕು ಪಡೆದು ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದೆ. ಅನೇಕ ವಿತರಕರು ನನ್ನನ್ನು ಪ್ರಶ್ನಿಸಿದ್ದೂ ಉಂಟು, ನಿಮಗೆ ದುಡ್ಡು ಹೆಚ್ಚಾಗಿ ಹೆಚ್ಚಾಗಿದ್ದರೆ ನಮಗೆ ಕೊಡಿ , ನಾವು ಸಿನಿಮಾ ವಿತರಣೆ ಪಡೆದು ಆನಂತರ ನಿಮಗೆ ನೀಡುತ್ತೇವೆ ಎಂದು ನನಗೆ ಹೇಳಿದ್ದೂ ಉಂಟು. ಕನ್ನಡ ಚಿತ್ರರಂಗ ಮತ್ತು ನಿರ್ಮಾಪಕರು, ನಿರ್ದೇಶಕರಿಗೆ ಒಳಿತಾಗಬೇಕು ಎನ್ನುವ ಹಿತದೃಷ್ಠಿಯಿಂದ ಅಗತ್ಯಕ್ಕಿಂತ ಹೆಚ್ಚಿನ ಮೊತ್ತ ನೀಡಿ ಹಂಚಿಕೆ ಹಕ್ಕು ಪಡೆಯುತ್ತಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿತರಣೆಯ ಮೊತ್ತವನ್ನು ಮೂರು ನಾಲ್ಕು ಪಟ್ಟು ಆಗಲೇ ಹೆಚ್ಚಳ ಮಾಡಿದ್ದೆ.
ಮೊದ ಮೊದಲು ಚಿತ್ರ ಹಂಚಿಕೆ ಹಕ್ಕು ಪಡೆದ ಸಂದರ್ಭದಲ್ಲಿ ಆಗತಾನೆ ಮದುವೆಯಾಗಿತ್ತು. ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲು ಮತ್ತು ಚಿತ್ರದ ಕಲೆಕ್ಷನ್ ಬಗ್ಗೆ ಮಾಹಿತಿ ಪಡೆಯಲು ರಾಜ್ಯಾದ್ಯಂತ ಸಂಚಾರ ಮಾಡುತ್ತಿದ್ದೆ. ಹೀಗೆ ಹಂತ ಹಂತವಾಗಿ ಒಂದೊಂದೇ ಚಿತ್ರಗಳ ಹಂಚಿಕೆ ಮಾಡಿ ದೊಡ್ಡ ಹೆಸರು ಆಗಲೇ ಮಾಡಿದ್ದೆ.
ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದೆ. ಇಲ್ಲದಿದ್ದರೆ ಇಷ್ಟೊತ್ತಿಗೆ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದೆ. ಕನಸಿನ ಚಿತ್ರಗಳನ್ನು ಮಾಡುವ ಉದ್ದೇಶವಿತ್ತು. ಅನೇಕ ಕಾದಂಬರಿಗಳನ್ನು ಚಿತ್ರ ಮಾಡುವ ಉದ್ದೇಶವಿತ್ತು. ರಾಜಕಾರಣಕ್ಕೆ ಬರದಿದ್ದರೆ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಸೂರ್ಯವಂಶ ನಿರ್ಮಾಣ ಮಾಡಿದಾಗ ಇದು ದೇವೇಗೌಡರ ಕುಟುಂಬದ ಕಥೆ ಎಂದು ಹಲವರು ಮಾತನಾಡಿಕೊಂಡರು. ಆದರೂ ಚಿತ್ರ ಸಕ್ಸಸ್ ಆಯ್ತು ಎಂದು ಹೇಳಿಕೊಂಡರು.
ವಿತರಕನಾದ ಆರಂಭದಲ್ಲಿ ದುಬಾರಿ ಹಣ ನೀಡಿ ಚಿತ್ರಗಳ ಹಂಚಿಕೆ ಹಕ್ಕು ಪಡೆಯುತ್ತಿದ್ದೆ. ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದೂ ಉಂಟು, ಟೈಗರ್ ಪ್ರಭಾಕರ್ ಅವರ ಚಿತ್ರಗಳಿಗೆ ಎರಡು ಮೂರು ಲಕ್ಷ ನೀಡುತ್ತಿರಲಿಲ್ಲ, ಅಂತಹುದರಲ್ಲಿ “ಕರುಳಿನ ಕೂಗು” ಚಿತ್ರಕ್ಕೆ 15 ಲಕ್ಷಕ್ಕೂ ಹೆಚ್ಚು ಮೊತ್ತ ನೀಡಿ ಹಕ್ಕು ಪಡೆದಿದ್ದೆ. ಈ ಚಿತ್ರ ಒಂದೂವರೆ ಕೋಟಿಗೂ ಹೆಚ್ಚು ಹಣ ಸಂಗ್ರಹಣೆ ಮಾಡಿತ್ತು.
ಅದೇ ರೀತಿ ಹಾಲುಂದ ತವರು ಚಿತ್ರವನ್ನೂ ಕೂಡ ಹೆಚ್ಚಿನ ಮೊತ್ತ ನೀಡಿ ವಿತರಣೆ ಹಕ್ಕು ಪಡೆದಿದ್ದೆ. ಅದೂ ಕೂಡ ಒಂದೂವರೆ ಕೋಟಿಗೂ ಹೆಚ್ಚು ಹಣ ಮಾಡಿತ್ತು. ಈ ಎರಡೂ ಚಿತ್ರಗಳನ್ನು ಡಿ ರಾಜೇಂದ್ರ ಬಾಬು ನಿರ್ದೇಶನ ಮಾಡಿದ್ದರು. ಕನ್ನಡ ಚಿತ್ರಗಳಿಗೆ ಒಳ್ಳೆಯದಾಗಬೇಕು ಎನ್ನುವ ಉದ್ದೇಶ ನನ್ನದಾಗಿತ್ತು ಎಂದರು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ.
ಚಿತ್ರರಂಗ ಮೊದಲ ಸ್ನೇಹಿತ ಅಂಬರೀಷ್:
ಚಿತ್ರರಂಗದಲ್ಲಿ ಅನೇಕ ಮಂದಿ ಸ್ನೇಹಿತರಿದ್ದಾರೆ. ಆದರೆ ರೆಬೆಲ್ ಸ್ಟಾರ್ ಅಂಬರೀಷ್ ಅವರ ಜೊತೆ ಹೆಚ್ಚು ಒಡನಾಟವಿದೆ. ಚಿತ್ರರಂಗದಲ್ಲಿ ಮೊದಲು ಪರಿಚಯವಾದವರೇ ಅಂಬರೀಷ್. ಅವರ ಅನೇಕ ಚಿತ್ರಗಳ ವಿತರಣೆ ಹಕ್ಕು ಪಡೆದಿದ್ದೇನೆ. ಚಿತ್ರಕ್ಕೆ ಹೆಚ್ಚಿನ ಮೊತ್ತ ನೀಡಿ ಖರೀದಿಸಿದಾಗ ಯಾಕೆ ಇಷ್ಟೊಂದು ಮೊತ್ತ ಕೊಡುತ್ತೀರಿ ಎಂದು ಕೇಳಿದ್ದೂ ಉಂಟು ಎಂದರು ಕುಮಾರಸಾಮಿ.
ಚಿತ್ರರಂಗದಲ್ಲಿ ಅಣ್ಣಾವ್ರ ದೊಡ್ಡ ಅಭಿಮಾನಿ ನಾನು. ಅವರ ಅನೇಕ ಚಿತ್ರಗಳನ್ನು ಸಾಕಷ್ಟು ಬಾರಿ ನೋಡಿದ್ದೇನೆ.ಅವರಿಗಾಗಿ ಸಿನಿಮಾ ನಿರ್ಮಾಣ ಮಾಡುವ ಆಶೆ ಕೈಗೂಡಲಿಲ್ಲ. ಮುಖ್ಯಮಂತ್ರಿ ಆದ ಮೇಲೆ ಅವರನ್ನು ಭೇಟಿ ಮಾಡಿ ಆಶೀರ್ವಚನ ಪಡೆದಿದ್ದೆ. ಒಳ್ಳೆಯ ಕೆಲಸ ಮಾಡಿ ಎಂದು ಹರಸಿದ್ದರು.
ನಾನು ಜನರಿಗೆ ಏನಾದರೂ ಒಳ್ಳದು ಮಾಡಿದ್ದರೆ ಅದಕ್ಕೆ ಡಾ. ರಾಜ್ ಕುಮಾರ್ ಕಾರಣ. ಅವರ ಚಿತ್ರಗಳು ಪ್ರೇರಣೆ. ಅವರಿಂದ ಜನ ಸೇವೆ ಮಾಡಲು ಪ್ರೇರಣೆ ಎಂದರು.
ಈಗಿನ ಸಿನಿಮಾ ಕಂಟೆಂಟ್ ಸರಿಯಿಲ್ಲ: ಎಚ್ ಡಿಕೆ ಬೇಸರ
ಈ ಹಿಂದೆ ಬರುತ್ತಿದ್ದ ಸಿನಿಮಾಗಳು ಕಥಾ ವಸ್ತುವಿನಿಂದ ಗಮನ ಸೆಳೆಯುತ್ತಿದ್ದವು. ಇತ್ತೀಚಗೆ ಬರುತ್ತಿರುವ ಸಿನಿಮಾಗಳಲ್ಲಿ ಕಂಟೆಂಟೇ ಇಲ್ಲ ಅವು ಜನರ ಮನಸ್ಸಿನಲ್ಲಿಯೂ ಉಳಿಯುವಿದಲ್ಲ ಎಂದರು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ
ತಲೆ ನೋವು ಬಂದರೆ, ಅಥವಾ ನಿದ್ದೆ ಬಾರದಿದ್ದರೆ ಹಳೆಯ ಹಾಡುಗಳನ್ನು ಹತ್ತು ನಿಮಿಷ ಕೇಳಿದರೆ ಸಾಕು, ನಿದ್ದೆಯೂ ಬರುತ್ತಿತ್ತು, ತಲೆ ನೋವು ಮಾಯವಾಗುತ್ತಿತ್ತು. ಈಗಿನ ಸಿನಿಮಾ ಹಾಡುಗಳು ಕ್ಲಿಕ್ ಆಗುತ್ತವೆ .ಆದರೆ ಜನರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಒಳ್ಳೆಯ ಸಿನಿಮಾ ಬಂದರೆ ಜನ ಕಂಡಿತಾ ನೋಡ್ತಾರೆ.
ಮಲ್ಟಿಫ್ಲೆಕ್ಸ್ ಮತ್ತು ಚಿತ್ರಮಂದಿರದಲ್ಲಿ ಏಕರೂಪದ ಬೆಲೆ ನಿಗಧಿ ಮಾಡಲು ಕೆಲ ನಿರ್ಮಾಪಕರು, ನಟರೇ ಅಡ್ಡಿಯಾಗಿದ್ದಾರೆ. ನಾವು ಹೆಚ್ಚು ಬಂಡವಾಳ ಹಾಕಿದ್ದೇವೆ. ಅದನ್ನು ವಾಪಸ್ ಪಡೆಯಬೇಕು ಎಂದು ಟಿಕೆಟ್ ದರ ಹೆಚ್ಚಿಸುತ್ತಾರೆ. ಈ ಕಾರಣಕ್ಕೆ ಒಮ್ಮತಕ್ಕೆ ಬರಲು ಸಾದ್ಯವಾಗಿಲ್ಲ, ನಾನು ಸಿನಿಮಾ ನೋಡುವುದೇ ಕಡಿಮೆ ಸಮಯ ಸಿಗಲ್ಲ, ಸಮಯ ಸಿಕ್ಕಾಗಲೆಲ್ಲ ಪುಸ್ತಕ ಓದುವ ಹವ್ಯಾಸವಿದೆ ಎಂದು ಮಾಹಿತಿ ಹಂಚಿಕೊಂಡರು.
ಮುಂದೆ ಕಾದಂಬರಿ ಆಧಾರಿತ ಚಿತ್ರ ಮಾಡುವ ಆಸೆ ಇದೆ. ಕೆಲವು ಕಾದಂಬರಿಗಳನ್ನು ಓದಿದ್ದೇನೆ. ಕೆಲವುಗಳ ಬಗ್ಗೆ ಚರ್ಚೆ ಆಗಿದೆ ಮುಂದೇ ನೋಡೋಣ ಎಂದು ಸುಧೀರ್ಘ ಒಂದು ಗಂಟೆಗೂ ಅಧಿಕ ಸಮಯದ ಮಾತುಕತೆಗೆ ವಿರಾಮ ಹಾಕಿದರು.