ಮಾತು ಬಾರದ ಅಮಾಯಕನ ಸೇಡಿನ ಗತ್ತು : “ಟೋಬಿ” ತಾಕತ್ತು
ಚಿತ್ರ: ಟೋಬಿ
ನಿರ್ದೇಶನ: ಬಾಸಿಲ್ ಅಲ್‍ಚಲ್ಕಲ್
ನಿರ್ಮಾಣ : ರವಿ ರೈ ಕಳಸ, ಕಾಫಿ ಗ್ಯಾಂಗ್ ಸ್ಟುಡಿಯೋ , ಬಾಲು ಅರವಣಕರ್
ತಾರಾಗಣ: ರಾಜ್ ಬಿ ಶೆಟ್ಟಿ, ಚೈತ್ರಾ ಆಚಾರ್, ಸಂಯುಕ್ತ ಹೊರನಾಡು, ರಾಜ್ ದೀಪಕ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ ಮತ್ತಿತರರು
ರೇಟಿಂಗ್: **** 4/5
ಟೋಬಿ ಅಮಾಯಕ, ಜೊತೆಗೆ ಮೂಗ. ಯಾವುದೇ ಕೆಲಸ ಹೇಳಿದರೂ ಅದನ್ನು ಮಾಡಿ ಮುಗಿಸುವುದು ನೀರು ಕುಡಿದಷ್ಟು ಸಲೀಸು. ಇಂತಹ ಟೋಬಿ ಹರಕೆಯ ಕುರಿಯೂ ಹೌದು, ತಿರುಗಿ ಬಿದ್ದರೆ ಮಾರಿಯೂ ಹೌದು.
ಆಕೆ ಸಾವಿತ್ರಿ ಬದುಕು ಸಾಗಿಲು ಮೈ ಮಾರಿಕೊಂಡು ಜೀವನ ಸಾಗಿಸುವಾಕೆ. ಇಂತವಳಿಗೆ ಮದುವೆ ಆಫರ್ ಬಂದರೂ ತಿರಸ್ಕರಿಸಿ ಸ್ನೇಹಿತರಾಗಿರೋಣ ಎನ್ನುವ ಜಾಯಮಾನದವಳು.
ಮತ್ತೊಬ್ಬಳು ಜೆನ್ನಿ, ಕಾಡಿನಲ್ಲಿ ಸಿಕ್ಕ ಅಸುಳೆ. ಆಕೆಯನ್ನು ಸಾಕಿ ಸಲುಹಿ ಮಗಳೆನ್ನುವಂತೆ ಪೋಷಿಸಿ, ಅನಾಥನ ಬಾಳಿಗೆ ದೇವತೆಯಾಗಿ ಬಂದವಳು.
ಊರಿನಲ್ಲಿ ಮಾಂಸ ಮಾರಾಟ ಮಾಡಲು ಹಿಂಜರಿಯುವ ಆತ ಟೋಬಿಯ ಸಹಾಯಿಂದ ಬೆಳೆದು ತನ್ನೂರನ್ನೇ ಆಳುವ ಮಟ್ಟಕ್ಕೆ ಬೆಳೆದು ನಿಲ್ಲುವ ಕಥೆ.
ಈ ನಾಲ್ಕು ಸನ್ನಿವೇಶಗಳು “ಟೋಬಿ” ಜೊತೆ ಥಳುಕು ಹಾಕಿಕೊಂಡಿವೆ. ಮೂಗನ ಸೇಡು, ಟೋಬಿಯ ಗತ್ತು ಗಮ್ಮತ್ತು ಹೆಚ್ಚುವಂತೆ ಮಾಡಿದೆ. ತಂದೆ ಮಗಳ ಬಾಂಧವ್ಯ, ಹೊಡೆದಾಟ, ಬಡಿದಾಟ ಆಕ್ರೋಶದ ಕಥನ ಚಿತ್ರದಲ್ಲಿದೆ.
ಅಮಾಯಕ ಟೋಬಿ ಚಿಕ್ಕ ವಯಸ್ಸಿನಲ್ಲಿ ಮಾಡಿದ ತಪ್ಪಿಗೆ ರಿಮೇಂಡ್ ಹೋಮ್‍ನಲ್ಲಿ ಕಾಲ ಕಳೆದವನು. ಚರ್ಚ್‍ನ ಫಾದರ್ ಹುಡುಗ ಉದ್ದಾರ ಆಗಲಿ ಎಂದು ಟೋಬಿಯಾ ,ಟೋಬಿ ಹೆಸರಿಲ್ಲದವನಿಗೆ ಹೆಸರಿಟ್ಟು ಪೆÇೀಷಿಸುತ್ತಾರೆ. ಟೋಬಿಯಾ ಅಂದರೆ ಹಿಬ್ರೂ ಭಾಷೆಯಲ್ಲಿ “ದೇವರು ಒಳ್ಳೆಯವನು ಎಂದರ್ಥವಂತೆ” ಇಂತಹ ಟೋಬಿ ಜೈಲಿನಿಂದ ಜೈಲಿಗೆ ಸ್ಥಳಾಂತರವಾಗುತ್ತಾನೆ.
ಟೋಬಿಯ ಬಗ್ಗೆ ಮಾಹಿತಿ ಕೆಲಹಾಕಲು ಬಂದ ಇನ್ಸ್ ಪೆಕ್ಟರ್ ಮೂಲಕ ಫಾದರ್, ಶವಾಗಾರದಲ್ಲಿ ಕೆಲಸ ಮಾಡುವುದ ವ್ಯಕ್ತಿ, ಮೈ ಮಾರಿಕೊಂಡು ಬದುಕು ಸಾಗಿಸುವ ಮಹಿಳೆ, ನೆರೆ ಮನೆ ಮಹಿಳೆಯ ಮೂಲಕ ಇಡೀ ಚಿತ್ರದ ಕಥೆ ಅನಾವರಣವಾಗುತ್ತದೆ.
ಜೈಲಿನಲ್ಲಿ ಬಿಡುಗಡೆಯಾಗ ಬಂದ ಟೋಬಿಗೆ ಕಾಡಿನಲ್ಲಿ ಅನಿರೀಕ್ಷಿತವಾಗಿ ಹಸುಳೆ ಸಿಗುತ್ತದೆ. ಅದಕ್ಕೆ ಜೆನ್ನಿ ( ಚೈತ್ರಾ ಆಚಾರ್) ಎಂದು ಹೆಸರು ನಾಮಕರಣ ಮಾಡಿಸಿ ಪೋಷಿಸುತ್ತಾನೆ. ಈ ನಡುವೆ ಸಾವಿತ್ರಿ (ಸಂಯುಕ್ತ ಹೊರನಾಡು) ಬದುಕಿಗಾಗಿ ಮೈ ಮಾರಿಕೊಂಡು ಜೀವನ ನಡೆಸುವಾಕೆ, ಆಗಾಗ ಜೈಲಿಗೆ ಹೋಗಿ ಬರುವುದನ್ನೇ ಕಾಯಕ ಮಾಡಿಕೊಂಡ ಟೋಬಿ, ಕೊನೆಗೊಮ್ಮೆ ಜೈಲಿನಿಂದ ಬಿಡುಗಡೆ ಮಾಡಿಸಲು ಮಾಡಬಾರದ ತಪ್ಪು ಮಾಡಿ ಬಿಡ್ತಾಳೆ. ಟೋಬಿ ಯಾರ ಬೆಳವಣಿಗೆಗೆ ಕಾರಣನಾಗಿದ್ದನೋ ಆತನನ್ನು ನಿರ್ಧಹಿಯಾಗಿ ತೆಲೆ ಚೆಂಡಾಡುತ್ತಾನೆ. ಯಾಕೆ ಎನು ಎನ್ನುವುದು ಚಿತ್ರದ ತಿರುಳು
ನಾಯಕ ರಾಜ್.ಬಿ ಶೆಟ್ಟಿ ಮೂಗನಾಗಿ ಹಾವ ಭಾವದಲ್ಲಿ ಗಮನ ಸೆಳೆದಿದ್ದಾರೆ. ಕೆಲವೆಡೆ ಭಾವುಕರಾಗಿ ಪ್ರೇಕ್ಷಕರ ಕಣ್ಣು ಒದ್ದೆಯಾಗಿಸಿ ಬಿಟ್ಟಿದ್ದಾರೆ. ಅಲ್ಲಲ್ಲಿ ಮಾತಿಲ್ಲದೆ ನಡೆಯಿಂದಲೇ ನಗಿಸಿದ್ದಾರೆ.ಚಿತ್ರ ನೋಡುತ್ತಿದ್ದರೆ ತಮಿಳು ಚಿತ್ರದ ಛಾಯೆ ಆವರಿಸಿದಂತೆ ಭಾಸವಾಗುತ್ತದೆ.
ನಟಿ ಚೈತ್ರಾ ಆಚಾರ್ ಸಹಜ ಅಭಿನಯದಿಂದ ಗಮನ ಸೆಳಿದಿದ್ದಾರೆ. ಅದರಲ್ಲಿಯೂ ಡಿ ಗ್ಲಾಮರ್ ಮೂಲಕ, ಸಂಭಾಷಣೆ ಹೇಳುವ ರೀತಿ ಸೇರಿ ಪಾತ್ರವನ್ನು ತನ್ನೊಳಗೆ ಪರಕಾಯ ಪ್ರವೇಶ ಮಾಡಿಕೊಂಡಂತೆ ನಟಿಸಿದ್ದಾರೆ.
ಗೋಪಾಲಕೃಷ್ಣ ದೇಶಪಾಂಡೆ,ಸಂಯುಕ್ತ ಹೆಗಡೆ ಸಿಕ್ಕ ಪಾತ್ರಗಳು ಜೀವ ತುಂಬುವ ಕೆಲಸ ಮಾಡಿದ್ದಾರೆ.
ಟೋಬಿ ಅಲ್ಲಲ್ಲಿ ಜಾಳು ಜಾಳು ನಿರೂಪಣೆಯಿಂದ ಸೊರಗಿದೆ. ಕೆಲವು ಕಡೆ ಕತ್ತರಿ ಪ್ರಯೋಗ ಮಾಡಿದ್ದರೆ ಟೋಬಿ ಇನ್ನಷ್ಟು ಇಷ್ಟವಾಗುತ್ತಿತ್ತು. ಹಾಗಂತ ಚಿತ್ರ ಮೋಸ ಮಾಡುವುದಿಲ್ಲ. ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.