” ಭೀಮಾ ತೀರದ ಹಂತಕರು” ಮೂಲಕ ರಕ್ತ ಚರಿತ್ರೆಯ ತೆರೆಯ ಮೇಲೆ ತರುವ ಪ್ರಯತ್ನ
ತೊಂಭತ್ತರ ದಶಕದಲ್ಲಿ ಭೀಮಾತೀರದ ವಿಜಯಪುರ ಜಿಲ್ಲೆಯ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಘನಘೋರ ರಕ್ತಚರಿತ್ರೆಯನ್ನು ತೆರೆಯ ಮೇಲೆ ತರಲು ನಿರ್ದೇಶಕ ನರೇಂದ್ರಬಾಬು ಮುಂದಾಗಿದ್ದಾರೆ. ಇದಕ್ಕಾಗಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ” ಭೀಮ ತೀರದ ಹಂತಕರು”ಕೃತಿ ಚಿತ್ರಕ್ಕೆ ಆಧಾರ.
ಕಬಡ್ಡಿ ಬಾಬು ಎಂದೇ ಹೆಸರಾದ ನರೇಂದ್ರ ಬಾಬು ಸಂತೆಯಲ್ಲಿ ನಿಂತ ಕಬೀರ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಸೇರಿದಂತೆ ಹಲವು ಸದಭಿರುಚಿಯ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದೀಗ ಭೀಮ ತೀರದ ಹಂತಕರು ಚಿತ್ರವನ್ನು ಜನರ ಮುಂದೆ ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಭೀಮಾತೀರದ ಹಂತಕರು’ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು . ಭಾವನಾ ಬೆಳಗೆರೆ ಚಿತ್ರದಲ್ಲಿ ತಂದೆಯ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ.
ಶ್ರೀ ಗವಿ ರಂಗನಾಥಸ್ವಾಮಿ ಪಿಕ್ಚರ್ಸ್ ಹಾಗೂ ಆಂಜನೇಯ ಪ್ರೊಡಕ್ಷನ್ಸ್ ಮೂಲಕ ಶ್ರೀಮತಿ ಶೃತಿ ಅನಿಲ್ ಕುಮಾರ್ ಹಾಗೂ ಸುಮ ಚಿತ್ರ ನಿರ್ಮಿಸುತ್ತಿದ್ದಾರೆ.

ನಿರ್ದೇಶಕ ನರೇಂದ್ರಬಾಬು ಮಾತನಾಡಿ ಕ್ರಿಸ್ತ ಪೂರ್ವದಿಂದ ಈವರೆಗೂ ಭೀಮ ನದಿಯ ತಟದಲ್ಲಿ ಯುದ್ದ ನಡೆಯುತ್ತಲೇ ಇದೆ. ಒ ಸಣ್ಣ ಬದುವಿಗೋಸ್ಕರ ಚಂದಪ್ಪ ಹರಿಜನ ಹಾಗೂ ಕೇಶಪ್ಪ ತಾವರಖೇಡ ಕುಟುಂಬಗಳ ನಡುವೆ ಶುರುವಾಗುವ ಗಲಾಟೆ, ದೊಡ್ಡಮಟ್ಟದಲ್ಲಿ ಮುಂದುವರೆದುಕೊಂಡು ಹೋಗಿ ಘೋರ ಕೊಲೆಗಳೇ ನಡೆದು ಹೋಗುತ್ತವೆ ಎಂದು ಅಲ್ಲಿನ ರಕ್ತ ಚರಿತ್ರಯೆ ಮಾಹಿತಿ ಬಿಚ್ಚಿಟ್ಟರು
ಹಿರಿಯ ಪತ್ರಕರ್ತ ರವಿ ಬೆಳಗೆರೆ ಘಟನೆ ನಡೆದ ಸ್ಥಳಕ್ಕೇ ಹೋಗಿ ವಸ್ತುಸ್ಥಿತಿ ಅಧ್ಯಯನ ಮಾಡಿ ಬರೆದ ಕೃತಿಯನ್ನು ಯಥಾವತ್ತಾಗಿ ತೆರೆ ಮೇಲೆ ತರುತ್ತಿದ್ದೇವೆ. ಭಾವನಾ ಬೆಳಗೆರೆ ಸಾಥ್ ನೀಡುತ್ತಿದ್ದಾರೆ. ತುಂಬಾ ಕಂಟೆಂಟ್ ಇರೊದ್ರಿಂದ ಚಿತ್ರವನ್ನು ಎರಡು ಭಾಗದಲ್ಲಿ ಹೇಳುತ್ತಿದ್ದೇವೆ. ಮೊದಲ ಭಾಗದ ಸ್ಕ್ರಿಪ್ಟ್ ಈಗಾಗಲೇ ರೆಡಿ ಇದೆ. ಸಿದ್ದಪ್ಪ ಅವರ ಹತ್ಯೆಯಾಗುವವರೆಗೂ ನಡೆಯುವ ಘಟನೆಗಳನ್ನು ಇದರಲ್ಲಿ ದಾಖಲಿಸಿದ್ದೇನೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಹೋಗುತ್ತಿದ್ದೇವೆ ಎಂದರು.
ಭಾವನಾ ಬೆಳಗೆರೆ ಮಾತನಾಡಿ ಅಪ್ಪನ ಪಾತ್ರ ಮಾಡಲು ನನಗೆ ತುಂಬಾ ಖುಷಿಯಾಗ್ತಿದೆ. ಹಿಂದೆ ಬಂದಿದ್ದ ಚಿತ್ರಕ್ಕೂ ಈ ಚಿತ್ರಕ್ಕೂ ತುಂಬಾ ವ್ಯತ್ಯಾಸವಿರುತ್ತದೆ. ಒಂದು ಕಾಲದಲ್ಲಿ ಭೀಮಾ ನದಿಯ ತಟದಲ್ಲಿ ರಕ್ತದೋಕುಳಿಯೇ ಹರಿದಿತ್ತು. ಆ ಘಟನೆಯಲ್ಲಿ 60 ರಿಂದ 70 ತಲೆಗಳು ಉರುಳಿದ್ದವು. ಆ ಜಿದ್ದು ಈಗಲೂ ಇದೆ. ಒಂದು ಮರಕ್ಕೆ ಹುಟ್ಟಿಕೊಳ್ಳುವಂಥ ದ್ವೇಷವದು. ಅವರ ಮನೆಗೆ ಹೋಗಿ ಊಟ ಮಾಡಿದ್ದೇವೆ. ಅಪ್ಪ ಬರೆದ ಪುಸ್ತಕದಲ್ಲಿ ಹೇಗಿದೆಯೋ ಹಾಗೇ ಚಿತ್ರವೂ ಬರಬೇಕೆನ್ನುವುದು ನನ್ನ ಆಸೆ ಎಂದರು.
ಛಾಯಾಗ್ರಾಹಕ ಕೆ.ಎಸ್.ಚಂದ್ರಶೇಖರ್ ಮಾತನಾಡಿ ನೈಜ ಘಟನೆ ಆಧರಿಸಿದ ಚಿತ್ರ. ನೈಜವಾಗಿ ಚಿತ್ರೀಕರಿಸಿದರೆ ಅದಕ್ಕೊಂದು ತೂಕ ಬರಲಿದೆ ನನಗೂ ಮಾದರಿಯ ಚಿತ್ರೀಕರಣ ಹೊಸದು ಎಂದು ಹೇಳಿದರು

ಸಂಗೀತ ನಿರ್ದೇಶಕ ಲೋಕಿ ತವಸ್ಯ ಮಾತನಾಡಿ ಒಂದು ಪ್ಯಾಟ್ರನ್ ನಲ್ಲಿ ಇಡೀ ಸಿನಿಮಾ ಕಟ್ಟಿಕೊಡಬೇಕು ಎಂದು ಬಾಬು ಹೇಳಿದ್ದಾರೆ. ಗೋಪಾಲ ವಾಜಪೇಯಿ ಒಂದು ಹಾಡನ್ನು ಬಳಸಿಕೊಳ್ಳುತ್ತಿದ್ದೇವೆ ಎಂದರು.
ನಿರ್ಮಾಪಕಿಯರಾದ ಸುಮ ಹಾಗೂ ಶೃತಿ ಅನಿಲ್ ಕುಮಾರ್ ಮಾತನಾಡಿ ಮೊದಲು ಕಾದಂಬರಿ ಆಧಾರಿತ ಚಿತ್ರ ಮಾಡಿದ್ದೆವು. ಈಗಲೂ ಬೆಳಗೆರೆ ಅವರ ಕೃತಿ ಆಧರಿಸಿ ಮಾಡುತ್ತಿದ್ದೇವೆ ಮಾಡುತ್ತಿದ್ದೇವೆ ಎಂದು ಹೇಳಿದರುಎ
ಯುವನಟ ಲಿಖಿತ್ ಚಂದಪ್ಪ ಹರಿಜನ ಪಾತ್ರ ಮಾಡುತ್ತಿದ್ದಾರೆ. ಉಳಿದಂತೆ ಜಯವರ್ಧನ, ಸಯ್ಯಾಜಿ ಶಿಂಧೆ, ಶರತ್ ಲೋಹಿತಾಶ್ವ, ಸೋನು ಸೂದ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಹರೀಶ್ ಕೊಮ್ಮೆ ಸಂಕಲನ, ರವಿವರ್ಮ ಸಾಹಸ ಸಂಯೋಜನೆ, ಬಾಬುಖಾನ್ ಕಲಾ ನಿರ್ದೇಶನ ಚಿತ್ರಕ್ಕಿದೆ

