Annavru' birthday gift from granddaughter: 'Firefly' to be released on April 24th

ಅಣ್ಣಾವ್ರ ಜನ್ಮದಿನಕ್ಕೆ ಮೊಮ್ಮಗಳ ಉಡುಗೊರೆ: ಏಪ್ರಿಲ್ 24ಕ್ಕೆ ʼಫೈರ್ ಫ್ಲೈ‌ ಬಿಡುಗಡೆ - CineNewsKannada.com

ಅಣ್ಣಾವ್ರ ಜನ್ಮದಿನಕ್ಕೆ ಮೊಮ್ಮಗಳ ಉಡುಗೊರೆ: ಏಪ್ರಿಲ್ 24ಕ್ಕೆ ʼಫೈರ್ ಫ್ಲೈ‌ ಬಿಡುಗಡೆ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಒಡೆತನದ ಚೊಚ್ಚಲ ಚಲನಚಿತ್ರ “ಫೈರ್ ಫ್ಲೈ”. ಈಗಾಗಲೇ ಟೀಸರ್ ಮೂಲಕ ಜನರ ಮನಸನ್ನು ಗೆದ್ದಿದೆ. ಚಿತ್ರ ಏಪ್ರಿಲ್‌ 24, ವರನಟ ಡಾ. ರಾಜಕುಮಾರ್ ಅವರ ಜನ್ಮದಿನದಂದು ತೆರೆ ಮೇಲೆ ಬರುತ್ತಿದೆ

‘ಫೈರ್ ಫ್ಲೈ’ ಚಿತ್ರದಲ್ಲಿ ವಂಶಿ ಹೀರೋ ಆಗಿ ನಟಿಸಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಆಚ್ಯುತ್ ಕುಮಾರ್, ಸುಧಾರಾಣಿ, ರಚನಾ ಇಂದರ್, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಲಾ ಬಿರಾದರ್, ಮೂಗು ಸುರೇಶ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಸಿಕೊಂಡಿದ್ದಾರೆ.

ಡಾ. ಶಿವರಾಜ್ ಕುಮಾರ್ ಮಾತನಾಡಿ, ‘ಅಪ್ಪಾಜಿಯವರ ಹುಟ್ಟುಹಬ್ಬದಂದು ಮಗಳ ಮೊದಲ ಚಿತ್ರ ಬಿಡುಗಡೆಯಾಗುತ್ತಿರುವುದು ನನಗೆ ತುಂಬಾ ವಿಶೇಷವಾದ ಕ್ಷಣ. ನಮ್ಮ ಕುಟುಂಬದ ಮೇಲೆ ಜನರು ತೋರಿಸಿರುವ ಎಲ್ಲಾ ಪ್ರೀತಿ ಅಪ್ಪಾಜಿಯವರಿಂದ ಬಂದಿದೆ, ಮತ್ತು ಮುಂದಿನ ಪೀಳಿಗೆಯ ಮೇಲೆ ಎಲ್ಲರೂ ಅದೇ ಪ್ರೀತಿಯನ್ನು ತೋರಿಸುವುದನ್ನು ನೋಡುವುದು ತುಂಬಾ ಖುಷಿ ಕೊಟ್ಡಿದೆ ಎಂದಿದ್ದಾರೆ

ಅಭಿಮಾನಿಗಳು ಮತ್ತು ಕನ್ನಡ ಸಿನಿಮಾ ಪ್ರೇಮಿಗಳ ನಿರಂತರ ಬೆಂಬಲಕ್ಕೆ ಧನ್ಯವಾದಗಳು. ಫೈರ್‌ಫ್ಲೈ ಸಾವು, ನೋವು ಮತ್ತು ಜೀವು ಸ್ಪೂರ್ತಿಯ ಮರು ಚಿಗುರಿವಿಕೆ ಬಗ್ಗೆ ಮಾಡಿರುವ ಚಿತ್ರ. ಇಂತಹ ಗಾಢವಾದ ವಿಷಯವನ್ನು ಸರಳವಾಗಿ ಹಾಸ್ಯದ ಮೂಲಕ ಹೇಳುವುದು ನನಗೆ ತುಂಬಾ ಹತ್ತಿರವಾಯ್ತು ಎಲ್ಲರೂ ಅದನ್ನು ಮೆಚ್ಚುತ್ತಾರೆ ಎನ್ನುವ ನಂಬಿಕ ಇದೆ ಎಂದಿದ್ದಾರೆ.

ಚರಣ್ ರಾಜ್ ಅವರು ‘ಫೈರ್ ಫ್ಲೈ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳು ತುಂಬಾ ಸೊಗಸಾಗಿ ಮೂಡಿಬಂದಿದ್ದು. ಚಿತ್ರತಂಡ ಇದೇ ಯುಗಾದಿಗೆ ಈ ಚಿತ್ರದ ಮೊದಲ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಅಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.

ಜಯರಾಮ್ ಶ್ರೀನಿವಾಸ್ ಹಾಗೂ ಹ್ಯಾಪಿ ಹನುಮಂತ್ ಸಹ-ನಿರ್ದೇಶನ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಅವರ ಸಂಭಾಷಣೆ, ಸುರೇಶ್ ಆರ್ಮುಗಮ್ ಸಂಕಲನ, ವರದರಾಜ್ ಕಾಮತ್ ಅವರ ಕಲೆ, ಅರ್ಜುನ್ ರಾಜ್ ಸಾಹಸ, ರಾಹುಲ್ ಮಾಸ್ಟರ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.

ಚಿತ್ರ ತುಂಬಾ ಸೊಗಸಾಗಿ ಮೂಡಿಬಂದಿದೆ. ಇದೊಂದು ಕೌಟುಂಬಿಕ ಚಿತ್ರವಾಗಿದ್ದು ಎಲ್ಲಾ ವರ್ಗದ ಪ್ರೇಕ್ಷಕರು ಮನಸ್ಸು ಗೆಲ್ಲುವ ಚಿತ್ರವಾಗಿದೆ. ಈ ವರ್ಷದ ಕನ್ನಡ ಚಿತ್ರರಂಗದಲ್ಲಿ ತುಂಬಾ ಭರವಸೆ ಮೂಡಿಸಿರುವ ಚಿತ್ರಗಳಲ್ಲಿ “ಫೈರ್ ಫ್ಲೈ”. ಕೂಡ ಒಂದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin