Another hero entered Kannada through Maar

ಮಾರ್ ಚಿತ್ರದ ಮೂಲಕ ಕನ್ನಡಕ್ಕೆ ಮತ್ತೊಬ್ಬ ನಾಯಕ ಪ್ರವೇಶ - CineNewsKannada.com

ಮಾರ್ ಚಿತ್ರದ ಮೂಲಕ ಕನ್ನಡಕ್ಕೆ ಮತ್ತೊಬ್ಬ ನಾಯಕ ಪ್ರವೇಶ

ಕನ್ನಡ ಚಿತ್ರರಂದಲ್ಲಿ ಇತ್ತೀಚೆಗೆ ಹೊಸ ಹೊಸ ನಾಯಕ ನಟರು ಅದೃಷ್ಠ ಕಂಡುಕೊಳ್ಳಲು ಮುಂದಾಗುತ್ತಿದ್ದಾರೆ. ಆ ಸಾಲಿಗೆ ಮತ್ತೊಬ್ಬ ಯುವ ಪ್ರತಿಭೆ ವಿಜಯ್ ವೆಂಕಟೇಶ್ ಪಾದಾರ್ಪಣೆ ಮಾಡಿದ್ದು ಕನ್ನಡ ಚಿತ್ರರಂಗದಲ್ಲಿ ಅದೃಷ್ಠ ಕಂಡುಕೊಳ್ಳಲು ಮುಂದಾಗಿದ್ದಾರೆ.

“ಮಾರ್” ಚಿತ್ರಕ್ಕೆ ಚೊಚ್ಚಲ ಬಾರಿಗೆ ನಾಯಕನಾಗುವ ಜೊತೆಗೆ ಚಿತ್ರಕ್ಕೆ ಬಂಡವಾಳವನ್ನೂ ಹಾಕಿದ್ದಾರೆ. ಈ ಮೂಲಕ ಗಾಂಧಿನಗರದಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ. ಮೊದಲ ಸಿನಿಮಾದಲ್ಲಿ ಭರವಸೆ ಮೂಡಿಸುವ ಪ್ರಯತ್ನ ಮಾಡಿದ್ಧಾರೆ.

“ಮಾರ್” ಎನ್ನುವ ಮಾಸ್ ಟೈಟಲ್ ಇಟ್ಟುಕೊಂಡು ವಿಜಯ್ ವೆಂಕಟೇಶ್ ಹೀರೊ ಆಗಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ನಾಯಕ ನಟನಾಗಿ ಮಿಂಚಬೇಕು ಎನ್ನುವ ಆಸೆ ಇಟ್ಟುಕೊಂಡಿರುವಂತ ವಿಜಯ್ ವೆಂಕಟೇಶ್ ತಮ್ಮ ಮೊದಲ ಸಿನಿಮಾದಲ್ಲಿಯೇ ವಿಭಿನ್ನ ಪ್ರಯತ್ನಕ್ಕೆ ಸಜ್ಜಾಗಿದ್ದಾರೆ.

ಸದ್ಯ ಸಿನಿಮಾ ತಂಡ ಹೀರೋ ಇಂಟ್ರೊಡಕ್ಷನ್ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಸಾಮಾನ್ಯವಾಗಿ ಸಿನಿಮಾತಂಡ ಮುಹೂರ್ತ ಮಾಡಿಕೊಂಡು ನಂತರ ಚಿತ್ರೀಕರಣದ ಅಖಾಡಕ್ಕೆ ಇಳಿಯುತ್ತದೆ. ಆದರೆ `ಮಾರ್’ ತಂಡ ಜಬರ್ದಸ್ತ್ ಹಾಡಿನ ಮೂಲಕ ಚಿತ್ರ ಪ್ರೇಮಿಗಳ ಮುಂದೆ ಬಂದಿದೆ. ಹೀರೋ ತೆರೆ ಮೇಲೆ ಹೇಗೆ ಕಾಣಿಸುತ್ತಾರೆ ಹಾಗೂ ಹೀರೋ ಕಾನ್ಫಿಡೆನ್ಸ್ ಹೇಗಿದೆ ಎಂದು ಚೆಕ್ ಮಾಡಲು ಈ ರೀತಿ ಪ್ರಯತ್ನಕ್ಕೆ ಮುಂದಾಗಿದೆ ಚಿತ್ರತಂಡ. ಮಾರ್ ಚಿತ್ರಕ್ಕೆ ಅನಿಲ್ ವೆಂಕಟರಾಜು ನಿರ್ದೇಶನ ಮಾಡುತ್ತಿದ್ದಾರೆ.

ಸದ್ಯ ಚಿತ್ರದಿಂದ ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಅದ್ದೂರಿ ಚಾಲನೆ ಸಿಕ್ಕಿದೆ. ವಿಜಯ್ ವೆಂಕಟೇಶ್ ಮೊದಲ ಪ್ರಯತ್ನಕ್ಕೆ ನಟ ಶ್ರೇಯಸ್ ಮಂಜು ಸಾಥ್ ನೀಡಿದ್ದಾರೆ. ಮೊದಲ ಹಾಡನ್ನು ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು ಶ್ರೇಯಸ್.

ಕೃಷ್ಣ ಸುಮೈರಾ ಅವರ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದ್ದು ನಿರ್ದೇಶಕ ಅನಿಲ್ ಅವರೇ ಸಾಹಿತ್ಯ ರಚಿಸಿದ್ದಾರೆ. ಸುಹಾಸ್ ಅವರ ಕ್ಯಾಮಾರಾ ವರ್ಕ್, ಪ್ರವೀಣ್ ಕೊರಿಯೋಗ್ರಫಿ ಈ ಹಾಡಿಗಿದೆ.

ನಟ ವಿಜಯ್ ವೆಂಕಟೇಶ್ ಹೀರೊ ಆಗಿ ಎಂಟ್ರಿಕೊಡುವ ಜೊತೆಗೆ ‘ಹಾರಿಕಾ’ ಪೆÇ್ರಡಕ್ಷನ್ ಹೌಸ್ ಕೂಡ ಲಾಂಚ್ ಮಾಡಿದ್ದಾರೆ. ನಟನೆ ಜೊತೆಗೆ ನಿರ್ಮಾಪಕನಾಗಿಯೂ ವಿಜಯ್ ಮೊದಲ ಹೆಜ್ಜೆ ಇಡುತ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಅನೇಕ ಯುವ ಪ್ರತಿಭೆಗಳಿಗೆ ಅವಕಾಶಕೊಡುವ ಪ್ಲಾನ್ ಇಟ್ಟುಕೊಂಡಿದ್ದಾರೆ ವಿಜಯ್.

ಮಾರ್ ಸಿನಿಮಾ ಕೂಡ ತಮ್ಮದೆ ಹಾರಿಕಾ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿದೆ. ಇನ್ನು ವಿಶೇಷ ಎಂದರೆ ಮಾರ್ ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆ ಆಗುತ್ತಿದ್ದು ಸದ್ಯ ರಿಲೀಸ್ ಆಗಿರುವ ಈ ಹಾಡು ಕೂಡ ಕನ್ನಡದ ಜೊತೆಗೆ ತೆಲುಗಿನಲ್ಲೂ ಬಿಡುಗಡೆಯಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin