Arjun Sarja's daughter Aishcharya who is married to Umapati Ramaiah
ಉಮಾಪತಿ ರಾಮಯ್ಯ ಅವರೊಂದಿಗೆ ಸಪ್ತಪದಿ ತುಳಿದ ಅರ್ಜುನ್ ಸರ್ಜಾ ಪುತ್ರಿ ಐಶ್ಚರ್ಯ

ಹೆಸರಾಂತ ನಟ ಅರ್ಜುನ್ ಸರ್ಜಾ ಹಾಗೂ ನಿವೇದಿತಾ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ಅವರ ವಿವಾಹ ಮಹೋತ್ಸವ ಉಮಾಪತಿ ರಾಮಯ್ಯ ಅವರೊಂದಿಗೆ ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ದೇವಸ್ಥಾನದಲ್ಲಿ ಅದ್ದೂರಿಯಾಗಿ ಜರುಗಿತು
ಶಾಂತಿ ರಾಮಯ್ಯ ಹಾಗೂ ತಂಬಿ ರಾಮಯ್ಯ ಅವರ ಪುತ್ರ ರಾಗಿರುವ ಉಮಾಪತಿ ರಾಮಯ್ಯ ಅವರೊಂದಿಗೆ ಐಶ್ಚರ್ಯ ಸರ್ಜಾ ಹೊಸ ಇನ್ಸಿಂಗ್ಸ್ ಆರಂಭಿಸಿದ್ದಾರೆ

ಜೂನ್ ಏಳರಂದು ಅರಿಶಿನ ಶಾಸ್ತ್ರದೊಂದಿಗೆ ಮದುವೆ ಕಾರ್ಯಕ್ರಮಗಳು ಆರಂಭವಾದವು. ಆನಂತರ ಸಂಗೀತ್ ಹಾಗೂ ವರಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಸಂಗೀತ್ ಸಮಾರಂಭಕ್ಕೆ ಹೆಸರಾಂತ ಕಲಾ ನಿರ್ದೇಶಕ ಮೋಹನ್ ಅವರು ಅದ್ದೂರಿ ಸೆಟ್ ಹಾಕಿದ್ದರು. ಎರಡು ಕಟುಂಬದ ಬಂಧುಗಳು ಹಾಗೂ ಹತ್ತಿರದ ಮಿತ್ರರು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಜೂನ್ 14ರಂದು ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ನಡೆದ ಆರತಕ್ಷತೆ ಸಮಾರಂಭದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು ಆಪ್ತರು ಭಾಗಿಯಾಗಿ ವಧು ವರರನ್ನು ಆಶೀರ್ವದಿಸಿದರು.
