ಬೀಗ ಚಿತ್ರದ ಮೂಲಕ ನಾಯಕನಾದ ಆರ್ಮುಗ ರವಿಶಂಕರ್
ಆರ್ಮಗಂ ರವಿಶಂಕರ್ ಮತ್ತೊಮ್ಮೆ ಅಬ್ಬರಿ ಆರ್ಭಟಿಸಿರುವ ” ಬೀಗ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರವಿಶಂಕರ್ ಅವರು ಮೊಟ್ಟ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಖಡಲ್ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದು ಅವರರೊಂದಿಗೆ ಜೆ ಡಿ ಆಕಾಶ್, ಸ್ಸೈಯದ್ ಇರ್ಫಾನ್ ಮುಖ್ಯಭೂಮಿಕೆ ಯಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಟೀಸರ್ ಗೆ ಬಾರಿ ಬೇಡಿಕೆ ಹೆಚ್ಚಿದ್ದು ಅನುಭವಿ ಖಳನಟನ ಜೊತೆ ಹೊಸ ಹುಡುಗರಿಗೂ ಮೆಚ್ಚುಗೆ ವ್ಯಕ್ತವಾಗಿದೆ.ಕನ್ನಡದಲ್ಲಿ ಈಗಾಗಲೇ ಹತ್ತಾರು ಪೋಷಕ ಪಾತ್ರಗಳಲ್ಲಿ ನಟಿಸಿರುವ ಖಡಕ್ ಲುಕ್ ನ ರವಿಶಂಕರ್ ಇದೀಗ ” ಬೀಗ” ‘ ಚಿತ್ರದ ಮೂಲಕ ನಾಯಕನಾಗಿ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಅನ್ಯಾಯದ ವಿರುದ್ಧ ಖಡಕ್ ಹೀರೋ ಆಗಿ ರವಿಶಂಕರ್ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ಜೊತೆಗೆ ಜೆ ಡಿ ಆಕಾಶ್, ಸ್ಸೈಯದ್ ಇರ್ಫಾನ್ ಮುಖ್ಯಭೂಮಿಕೆ ಯಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್.ಎಂ.ಶ್ರೀನಂದನ್ ನಿರ್ದೇಶನ ಮಾಡಿರುವ `ಬೀಗ’ ಚಿತ್ರದ ಟೀಸರ್ ಗಾಂಧಿನಗರದಲ್ಲಿ ಬಾರಿ ಸದ್ದು ಮಾಡಿದೆ.
ಟೀಸರ್ ನಲ್ಲಿ ಪ್ರೀತಿ ಮಾಡಿ ಮೋಸ ಮಾಡುವ, ಮೋಹದ ಹಿಂದೆ ಓಡುವ ಜನರನ್ನು ಸದೆ ಬಡಿಯುವ ನಾಯಕನನ್ನು ತೋರಿಸಲಾಗಿದೆ. ರವಿಶಂಕರ್ ಅನ್ಯಾಯದ ವಿರುದ್ಧ ಹೋರಾಡುವ ಹೀರೋ ಆಗಿ ಕಾಣಿಸಿಕೊಂಡಿದ್ದು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ರಮೇಶ್ ಮುನಿರತ್ನಪ್ಪ ನಿರ್ಮಾಣ ಮಾಡುತ್ತಿದ್ದಾರೆ.ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ರವಿಶಂಕರ್, ಜೆ ಡಿ ಆಕಾಶ್ , ಸೈಯದ್ ಇರ್ಫಾನ್, ಶ್ರೀನಂದನ್, ಸಹಾರ್ ಅಫ್ಸಾ, ಸುಮಿತಾ ಬಜಾಜ್, ಸುಚೇಂದ್ರ ಕಾಣಿಸಿಕೊಂಡಿದ್ದಾರೆ
ಎಂ ಬಿ ಹಳ್ಳಿಕಟ್ಟೆ , ವಿನಾಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ, ಶ್ರೀಗುರು ಸಂಗೀತ ವೆಂಕಿ ಯುಡಿಯು ಸಂಕಲನ ಚಿತ್ರಕ್ಕಿದೆ.