ಫೆ.24 ಕ್ಕೆಅಸ್ಥಿರ ಚಿತ್ರ ಬಿಡುಗಡೆ
ಬಹುತೇಕ ಹೊಸಪ್ರತಿಭೆಗಳೇ ಸೇರಿಕೊಂಡು ನಿರ್ಮಿಸಿ ನಟಿಸಿರುವ ಅಸ್ಥಿರ ಚಿತ್ರ ಇದೇ 24 ರಂದು ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ. ತ್ರಿಕೋನ ಪ್ರೇಮಕಥೆಯ ಜೊತೆಗೆ ಲವ್ ,ಸಸ್ಪೆನ್ಸ್ ಸೇರಿದಂತೆ ಪ್ರೇಕ್ಷಕರಿಗೆ ಇಷ್ಟವಾಗುವ ಹೂರಣವನ್ನು ಚಿತ್ರವನ್ನು ಒಳಗೊಂಡಿದ್ದು ಆಟೋ ರಾಜ ಚಿತ್ರದ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ. ವಾರಕ್ಕೆ 8 ರಿಂದ 10 ಚಿತ್ರಗಳು ತೆರೆಗೆ ಬರುತ್ತಿರುವ ನಡುವೆ ಹೊಸಬರ ಚಿತ್ರಕ್ಕೆ ವಿತರಕ ರಾಜು ಚಿತ್ರಮಂದಿರಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ.
ಪ್ರೋತ್ಸಾಹಿಸಿ ;ಹರಿಣಿ ನಟರಾಜ್
ಗುಬ್ಬಿ ತಾಲ್ಲೂಕಿನ ವಡವನಘಟ್ಟ ನನ್ನೂರು. ಅಸ್ಥಿರ ಚಿತ್ರದಲ್ಲಿ ನಾಯಕಿಯ ಗೆಳತಿ ಪಾತ್ರ. ನಿರ್ದೇಶಕ ಪ್ರಮೋದ್ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರ ಫೆ.24 ಕ್ಕೆ ಬಿಡುಗಡೆಯಾಗುತ್ತಿದೆ ಎಲ್ಲರೂ ಚಿತ್ರಮಂದಿರಕ್ಕೆ ಬನ್ನಿ, ಹೊಸಬರನ್ನು ಪ್ರೋತ್ಸಾಹಿಸಿ, ಚಿತ್ರರಂಗದಲ್ಲಿ ಬೆಳೆಯುವ ಆಸೆಗೆ ನೀರೆರೆಯಿರಿ . ಅಪ್ಪ,ಅಮ್ಮ ಯಾರೂ ಕೂಡ ಚಿತ್ರರಂಗದಲ್ಲಿ ಇಲ್ಲ. ಕುಟುಂಬದಿಂದ ನಾನೇ ಚಿತ್ರರಂಗಕ್ಕೆ ಬಂದಿರುವುದು ಎನ್ನುವ ಮಾಹಿತಿ ನೀಡಿದರು ಎಂದರು ನಟಿ ಹರಿಣಿ ನಟರಾಜ್.
ನೆಲೆ ಕಂಡುಕೊಳ್ಳುವ ಆಸೆ : ಕಾವೇರಿ
ಮೂಲ ಹೂವಿನಹಡಗಲಿ, ಬೆಳೆದಿದ್ದು ಬೆಂಗಳೂರಿಲ್ಲಿ., ಕಾಲೇಜು ಹುಡುಗಿಯ ಪಾತ್ರ ಮಾಡಿದ್ದೇನೆ. ಅಸ್ಥಿರ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ 4 ಸಿಮಿಮಾಗಳಲ್ಲಿ ಅವಕಾಶ ಸಿಕ್ಕಿದೆ. ಚಿತ್ರದಲ್ಲಿ ನಾಯಕ ಲವ್ ಫೆಲ್ಯೂರ್ ಆಗುತ್ತಾರೆ. ಆ ಹುಡುಗಿಯ ಪಾತ್ರ ಮಾಡಿದ್ದೇನೆ. ಒಳ್ಳೆಯ ಅವಕಾಶ ಸಿಕ್ಕಿದೆ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಆಸೆ ಇದೆ ಎಂದರು ನಟಿ ಕಾವೇರಿ.
ರಾಧೆಯಾದ ಭುವನ
ನನ್ನ ಹೆಸರು ,ಭುವನ ,ಚಿತ್ರಕ್ಕಾಗಿ ರಾಧೆ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದೇನೆ. ಹಾಗಂತ ನ್ಯೂಮರಾಲಜಿಗೋಸ್ಕರ್ ಅಲ್ಲ. ಬದಲಾಗಿ ದೇವರ ಮೇಲಿನ ಭಕ್ತಿಯಿಂದ ಚಿತ್ರದಲ್ಲಿ,ನಟಿಯ ಗೆಳೆತಿ ಪಾತ್ರ ಮಾಡಿದ್ದೇನೆ. ಒಳ್ಳೆಯ ಅವಕಾಶ ಸಿಕ್ಕಿದೆ. ಧಾರಾವಾಹಿ, ವೆಬ್ ಸೀರೀಸ್ ನಲ್ಲಿ ನಟಿಸಿದ್ದರಿಂದ ಅನುಭವವಿದೆ.ದೊಡ್ಡ ಪರದೆಯ ಮೇಲೆ ಮೊದಲ ಅವಕಾಶ.ಉತ್ತರ ಕರ್ನಾಟಕ ಉಡಾಳ್ ವೆಬ್ ಸೀರೀಸ್ ನಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಟಿ ರಾಧೆ.
ನಾಲ್ಕನೇ ನಿರ್ದೇಶನದ ಚಿತ್ರ
ಅಸ್ಥಿರ ಚಿತ್ರಕ್ಕೂ ಮುನ್ನ ನಾಲ್ಕು ಚಿತ್ರಗಳಲ್ಲಿ ಆಕ್ಷನ್ ಕಟ್ ಹೇಳಿದ್ದೇನೆ. ಅಸ್ಥಿರ ಚಿತ್ರದಲ್ಲಿ ಪ್ರಮುಖ ಪಾತ್ರವನ್ನೂ ಮಾಡಿದ್ದೇನೆ. ಪ್ರೀತಿಯಲ್ಲಿ ಬಿದ್ದ ಹ ಹುಡುಗನ ಕಥೆ, ದಯವಿಟ್ಟು ಸಿನಿಮಾ ನೋಡಿ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ. ನಾಯಕ, ನಿರ್ಮಾಪಕರೂ ಆಗಿರುಚ ಅನಿಲ್ ಸಿ.ಆರ್ ಉತ್ತಮ ಕಥೆ ಬರೆದಿದ್ದಾರೆ ಅದಕ್ಕೆ ಇಡೀ ತಂಡ ಬೆಂಬಲವಾಗಿ ಕೆಲಸ ಮಾಡಿದೆ ಎಂದು ನಿರ್ದೇಶಕ ಪ್ರಮೋದ್.
ತ್ರಿಕೋನ ಪ್ರೇಮಕಥೆ: ಅನಿಲ್
ಅಸ್ಥಿರ ಚಿತ್ರಕ್ಕೆ ಕಥೆ ನನ್ನದೆ. ಒದೊಂದು ತ್ರಿಕೋನ ಪ್ರೇಮಕಥೆಯನ್ನು ಚಿತ್ರ ಒಳಗೊಂಡಿದೆ. ಪ್ರೀತಿಯಲ್ಲಿ ಪ್ರೇಮ ವೈಫಲ್ಯ ಕಂಡ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾಯಕಿಯರೂ ಸೇರಿದಂತೆ ಬಹುತೇಕ ಹೊಸಬರಾದರೂ ಚಿತ್ರದ ಕಥೆಗೆ ಪೂರಕವಾಗಿ ನಟಿಸಿದ್ದೇವೆ. ಫೆ.24 ರಂದು ಚಿತ್ರ ತೆರೆಗೆ ಬರಲಿದೆ ಎಲ್ಲರ ಪ್ರೀತಿ ವಿಶ್ವಾಸ ಮತ್ತು ಸಹಕಾರವಿರಲಿ ಎಂದು ಕೇಳಿಕೊಂಡರು ನಟ,ನಿರ್ಮಾಪಕ ಅನಿಲ್.