ಭೀಮನ ನಾಯಕಿ
ಅಶ್ವಿನಿ ಫಸ್ಟ್ ಲುಕ್ ಬಿಡುಗಡೆ

“ಸಲಗ” ಚಿತ್ರ ನಿರ್ದೇಶಿಸಿ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾದ ನಟ, ನಿದೇಶಕ ದುನಿಯಾ ವಿಜಯ್ ಎರಡನೇ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ “ ಭೀಮ”. ನಾಟಿ ಕೋಳಿ ಹಿಡಿದು ಬಂದ ನಾಯಕಿ ಅಶ್ವಿನಿ ಅಂಬರೀಷ್
ಭೀಮ ಚಿತ್ರದ ಸೆಟ್ಟೇರಿದಾಗಿನಿಂದ ಕುತೂಹಲ ಕೆರಳಿಸಿದ್ದು ಇದೀಗ ವಾಲೆಂಟೈನ್ಸ್ ಡೇಗೆ ಭೀಮನ ನಾಯಕಿಯ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.ದುನಿಯಾ ವಿಜಯ್ ಅವರೇ ನಾಯಕನಾಗಿರುವ ಚಿತ್ರದಲ್ಲಿ ಅಶ್ವಿನಿ ಅಂಬರೀಷ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಳ್ಳಿಯ ಹುಡುಗಿಯಾಗಿ ಲಂಗ ಧಾವಣಿಯಲ್ಲಿ ಅಶ್ವಿನಿ ಮಿಂಚಿದ್ದಾರೆ.

ಚಿತ್ರಕ್ಕೆ ಕೃರ್ಷ ಸಾರ್ಥಕ್ ಮತ್ತು ಜಗದೀಶ್ ಗೌಡ ಬಂಡವಾಳ ಹಾಕಿದ್ದಾರೆ. ಭೀಮ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಚಿತ್ರ ಒಳಗೊಂಡಿದೆ.ಭೀಮನಾಗಿ ದುನಿಯಾ ವಿಜಯ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ.

ನಾಟಿ ಕೋಳಿ ಹಿಡಿದು ಬಂದ ನಾಯಕಿ
ಸದ್ದು ಗದ್ದಲವಿಲ್ಲದೆ ಚಿತ್ರೀಕರಣದಲ್ಲಿ ನಿರತರಾಗಿದ್ದ ನಿರ್ದೇಶಕರೂ ಆಗಿರುವ ನಟ ದುನಿಯಾ ವಿಜಯ್ ಇದೀಗ ನಾಯಕಿ ಯಾರೆನ್ನುವ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.ಹಂತ ಹಂತವಾಗಿ ಚಿತ್ರದಲ್ಲಿ ಯಾರೆಲ್ಲಾ ಕಲಾವಿದರು ಇದ್ದಾರೆ ಎನ್ನುವ ಮಾಹಿತಿಯನ್ನು ಬಿಡುಗಡೆ ಮಾಡಲು ದುನಿಯಾ ವಿಜಯ್ ಮತ್ತು ಅವರ ತಂಡ ಮುಂದಾಗಿದೆ.
ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಲಗದ ಯಶಸ್ಸಿನಂತೆ ಭೀಮ ಕೂಡ ಪ್ರೇಕ್ಷಕರಿಗೆ ಮತ್ತು ದುನಿಯಾ ವಿಜಯ್ ಅವರ ಅಭಿಮಾನಿಗಳಿಗೆ ಮುದ ನೀಡಲಿದೆ ಎನ್ನುವ ವಿಶ್ವಾಸ ಚಿತ್ರತಂಡದ್ದು.