Ayukta song released: The film will release soon

ಅಯುಕ್ತ ಹಾಡು ಬಿಡುಗಡೆ; ಚಿತ್ರ ಸದ್ಯದಲ್ಲಿಯೇ ತೆರೆಗೆ - CineNewsKannada.com

ಅಯುಕ್ತ ಹಾಡು ಬಿಡುಗಡೆ; ಚಿತ್ರ ಸದ್ಯದಲ್ಲಿಯೇ ತೆರೆಗೆ

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಅಯುಕ್ತ’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ರಚನೆ,ಚಿತ್ರಕಥೆ ಮತ್ತು ನಿರ್ದೇಶನ ಮಾಡಿರುವ ಕನಸು ರಮೇಶ್ ಹೇಳುವಂತೆ ಈ ಹಿಂದೆ ಸುಮಾರು 250 ನಾಟಕಗಳನ್ನು ನಿರ್ದೇಶಿಸಿದ ಅನುಭವವಿದೆ. ಚಿತ್ರತಂಡಕ್ಕೆ ಹಿರಿಯ ಕಲಾವಿದ ಗಣೇಶ್ ರಾವ್ ಕೇಸರ್ ಕರ್ ಬೆನ್ನಲುಬಾಗಿ ನಿಂತು ಅಗತ್ಯ ಸಹಕಾರ ನೀಡಿದ್ದಾರೆ.

ಅದೇ ಅನುಭವದ ಆಧಾರದ ಮೇಲೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಾಲಾಜಿ ಕ್ರಿಯೇಶನ್ಸ್ ಅಡಿಯಲ್ಲಿ ವಿಶ್ವಾಸ್.ಆರ್.ಗಂಗಡ್ಕರ್ ಬಂಡವಾಳ ಹೂಡಿದ್ದಾರೆ. ಮಹೇಶ್‍ಆಲದಹಳ್ಳಿ ಮತ್ತು ಗಿರಿರಾಜ್ ಕಲ್ಲೂರು ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ.

ಸಿನಿಮಾದ ಕುರಿತು ಹೇಳುವುದಾದರೆ ಸಂಪಾದನೆಗೋಸ್ಕರ ಪದವಿ ಮಾಡಬೇಡಿ. ಜ್ಞಾನಾರ್ಜನೆಗೋಸ್ಕರ ಡಿಗ್ರಿ ಮಾಡುವುದು ಒಳಿತು. ಪೆÇೀಷಕರು ತಮ್ಮ ಧೋರಣೆಯನ್ನು ನೋಡದೆ ಮಕ್ಕಳು ಇಷ್ಟಪಡುವಂತ ಕೆಲಸಕ್ಕೆ ಸ್ವಾತಂತ್ರ ಕೊಡಬೇಕು. ಅದನ್ನು ಅನುಸರಿಸದೆ ಬಲವಂತ ಮಾಡಿದಾಗ, ಮಕ್ಕಳು ಯಾವ ರೀತಿ ದಿಕ್ಕು ತಪ್ಪುತ್ತಾರೆ. ಮೂವರು ಕಾಲೇಜು ವಿದ್ಯಾರ್ಥಿಗಳು ಜೀವನದಲ್ಲಿ ಏನು ಮಾಡಿಕೊಂಡು ಹೋದರೂ, ಅನುಪಯುಕ್ತವಾಗುತ್ತದೆ.

ಅದು ಏತಕ್ಕೆ ಆಗುತ್ತದೆ. ಇವರುಗಳು ಯಾವ ತಪ್ಪು ಮಾಡಿದರು ಕೊನೆಗೆ ಏನಾಗುತ್ತಾರೆ ಎಂಬುದನ್ನು ಸೆಸ್ಪನ್ಸ್, ಥ್ರಿಲ್ಲರ್ ಹಾಗೂ ಪ್ರೀತಿಯೊಂದಿಗೆ ಹೇಳಲಾಗಿದೆ. ನೂರಾರು ತಿರುವುಗಳು ಇರಲಿದ್ದು, ಹಾಗೆಯೇ ಪೆÇೀಷಕ ಪಾತ್ರಗಳು ಒಂದೊಂದು ಕಥೆಯನ್ನು ಹೇಳಿಕೊಂಡು ಹೋಗುತ್ತದೆ. ಮಂಡ್ಯ, ಕಿರುಗಾವಲು. ಮಳವಳ್ಳಿ, ಬೆಳಕವಾಡಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ನಾಯಕರುಗಳಾಗಿ ಶ್ರೀನಿವಾಸಗೌಡ, ಅದ್ದೂರಿಬಸವ, ಫೈಯು ಸುಫಿಯಾನ್, ನಾಯಕಿಯರುಗಳಾಗಿ ಅಮೃತ, ಸೌಂದರ್ಯಗೌಡ, ಋತ್ವಿಕ ಉಳಿದಂತೆ ಗಣೇಶ್‍ರಾವ್ ಕೇಸರ್ ಕರ್, ಮಿಮಿಕ್ರಿಗೋಪಿ, ಚನ್ನಬಸವ, ಸಿದ್ದನಾಗ, ಚಾಮುಂಡಿನಾಯಕ, ಶಿವಮಾಧು, ನಿಶಿತ್‍ಪೂಜಾರಿ, ಜಾನ್ಸನ್, ರಮೇಶ್, ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ವಿಲಿಯಂದೃತ್, ಛಾಯಾಗ್ರಹಣ ಅರಸಿಕೆರೆ ದೀಪು, ಸಂಕಲನ ನಿಶಿತ್‍ಪೂಜಾರಿ ಅವರದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin