Baalu ​​Belagundi, who sang the song 'Gangi Gangi' from the movie 'Brat

” ಬ್ರಾಟ್” ಚಿತ್ರದ ‘ಗಂಗಿ ಗಂಗಿ’ ಹಾಡಿಗೆ ಧ್ವನಿಯಾದ ಬಾಳು ಬೆಳಗುಂದಿ - CineNewsKannada.com

” ಬ್ರಾಟ್” ಚಿತ್ರದ ‘ಗಂಗಿ ಗಂಗಿ’ ಹಾಡಿಗೆ ಧ್ವನಿಯಾದ ಬಾಳು ಬೆಳಗುಂದಿ

ಕುರಿಗಾಹಿ , ಜನಪದ ಗಾಯಕ , ಸರಿಗಮಪ , ಸ್ಪರ್ಧಿಯಾದ ಬಾಳು ಬೆಳಗುಂದಿ ಬ್ರಾಟ್ ಚಿತ್ರಕ್ಕಾಗಿ ಗಂಗಿ ಗಂಗಿ ಹಾಡು ಬರೆದು ಅವರೇ ಧ್ವನಿಯಾಗಿದ್ದಾರೆ. ಈ ಹಾಡು ವೈರಲ್ ಆಗಿದ್ಸು ಎಲ್ಲೆಡೆ ಮೆಚ್ಚುಗೆ ಪಡೆದಿದೆ. ನಾಯಕ ಡಾರ್ಲಿಂಗ್ ಕೃಷ್ಣ ಮತ್ತು ಬೆಡಗಿ ಅನೈರಾ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ

“ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಯಶಸ್ಡಿನ ನಂತರ ನಿರ್ದೇಶಕ ಶಶಾಂಕ್ ಮತ್ತು ನಾಯಕ ಡಾರ್ಲಿಂಗ್ ಕೃಷ್ಣ ಜೋಡಿಯ ಎರಡನೇ ಚಿತ್ರ ” ಬ್ರಾಟ್ ” ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಮನಿಶಾ ಕಂದಕೂರ್ ನಟಿಸಿದ್ದಾರೆ.

ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಗೊಂಡು ಭರ್ಜರಿಯಾಗಿ ಸದ್ದು ಮಾಡುತ್ತಿದೆ. “ಬ್ರ್ಯಾಟ್” ಚಿತ್ರವನ್ನು ಮಂಜುನಾಥ್ ಕಂದಕೂರ್ ನಿರ್ಮಿಸುತ್ತಿದ್ದು , ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲು ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಗಂಗಿ ಗಂಗಿ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಬಾಳು ಬೆಳಗುಂದಿ ತಾವೇ ರಚಿಸಿ ಹಾಡಿದ್ದಾರೆ. ಇವರೊಂದಿಗೆ ಗಾಯಕಿ ಇಂದು ನಾಗರಾಜ್ ಕೂಡ ಸಾಥ್ ನೀಡಿದ್ದಾರೆ. ಯಶಸ್ವಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಂಪೋಸ್ ಮಾಡಿದ್ದಾರೆ.

ನಿರ್ದೇಶಕ ಶಶಾಂಕ್ ಮಾತನಾಡಿ “ಬ್ರ್ಯಾಟ್” ಎಂದರೆ ತರ್ಲೆ ಹುಡುಗ , ಒಂದು ರೀತಿ ದಾರಿ ತಪ್ಪಿದ ಮಗ ಎಂದು ಹೇಳಬಹುದು. ಇದೊಂದು ಅಪ್ಪ-ಮಗನ ಕಥೆಯಾಗಿದ್ದು , ಭರ್ಜರಿ ಆಕ್ಷನ್ , ಥ್ರಿಲ್ಲರ್ ಜೊತೆಗೆ ಮನೋರಂಜನೆಯ ಅಂಶ ತುಂಬಿಕೊಂಡಿದೆ. ಇಡೀ ಚಿತ್ರ ಆರಂಭದಿಂದ ಕೊನೆಯವರೆಗೂ ಎಲ್ಲಿಯೂ ಬೇಸರವಾಗದೆ ಸಂಪೂರ್ಣ ಮನರಂಜನೆಯಿಂದ ಕೂಡಿದೆ ಎಂದು ತಿಳಿಸಿದ್ದಾರೆ

ಈಗಾಗಲೇ ಸಿದ್ ಶ್ರೀರಾಮ್ ಹಾಡಿರುವ “ನಾನೇ ನೀನಂತೆ” ಎಂಬ ಹಾಡು ಎಲ್ಲೆಡೆ ಬಾರಿ ವೈರಲ್ ಆಗಿದ್ದು , ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿ ಜನಪ್ರಿಯವಾಗಿದೆ. ಈಗ “ಗಂಗಿ ಗಂಗಿ” ಮಾಸ್ ಹಾಡನ್ನು ಗ್ರಾಮೀಣ ಪ್ರತಿಭೆ , ಜನಪದ ಗಾಯಕ ಬಾಳು ಬೆಳಗುಂದಿ ಹಾಗೂ ನಾಯಕಿ ಇಂದು ನಾಗರಾಜ್ ಅದ್ಭುತವಾಗಿ ಹಾಡಿದ್ದಾರೆ ಎಂದಿದ್ದಾರೆ.

ಚಿತ್ರದಲ್ಲಿ ಬಹಳಷ್ಟು ಹೈಲೈಟ್ ಗಳಿದ್ದು , ಅದರಲ್ಲಿ ಅರ್ಜುನ್ ಜನ್ಯ ಸಂಗೀತ ಕೂಡ ಅಷ್ಟೇ ಸೊಗಸಾಗಿ ಪ್ರತಿ ಹಾಡು ಮೂಡಿಬಂದಿದೆ..ಬ್ರ್ಯಾಟ್” ಚಿತ್ರವನ್ನು ನವೆಂಬರ್ 14 ರಂದು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ , ಆನಂದ್ ಆಡಿಯೋ ಮೂಲಕ “ಬ್ರ್ಯಾಟ್” ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ನೀವೆಲ್ಲರೂ ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದರು.

ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ ಚಿತ್ರದ ಕಥೆ ಬಹಳ ವಿಭಿನ್ನವಾಗಿದೆ. ಅದರಲ್ಲೂ ವಿಶೇಷವಾಗಿ ಲುಕ್ ಡಿಫ್ರೆಂಟ್ ಆಗಿದೆ. ಡ್ಯಾನ್ಸ್ ಮಾಡಿ ಸುಮಾರು ಮೂರು ನಾಲ್ಕು ವರ್ಷಗಳೇ ಕಳೆದಿತ್ತು , ಹಾಡಿಗೆ ಸ್ಟೆಪ್ಸ್ ಹಾಕಲು ಕಾರಣ ನಿರ್ದೇಶಕ ಶಶಾಂಕ್. ಈ ಹಾಡು ಇಷ್ಟು ಚೆನ್ನಾಗಿ ಬಂದಿದೆ ಎಂದರೆ ಅದರ ಎಲ್ಲಾ ಕ್ರೆಡಿಟ್ ನಮ್ಮ ನೃತ್ಯ ನಿರ್ದೇಶಕ ಹಾಗೂ ಡೈರೆಕ್ಟರ್ ಗೆ ಸಲ್ಲಬೇಕು. ಹಾಗೆಯೇ ಈ “ಗಂಗಿ ಗಂಗಿ” ಹಾಡು ಇಷ್ಟು ಜೋಶ್ ನಲ್ಲಿ ಬರಲು ಬಾಳು ಬೆಳಗುಂದಿ ಅವರ ಸಾಹಿತ್ಯ, ಗಾಯನ ಹಾಗೂ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಪ್ರಮುಖ ಕಾರಣ ಕಾರಣವಾಗಿದೆ. ಹಾಗೆಯೇ ಈ ಚಿತ್ರದ ನಿರ್ಮಾಪಕ ಮಂಜುನಾಥ್ ಕಂದಕೂರ್ ಎಂದು ತಿಳಿಸಿದರು

ನಟಿ ಮನಿಶಾ ಕಂದಕೂರ್ ಮಾತನಾಡಿ
ನಕೂಡ ಕನ್ನಡದವಳು , ಮೊದಲನೆಯ ಚಿತ್ರ. ಚಿತ್ರದಲ್ಲಿ ನನ್ನದು ಮಧ್ಯಮ ವರ್ಗದ ಹುಡುಗಿ ಪಾತ್ರ. ಸಿನಿಮಾ ಬಹಳ ಸೊಗಸಾಗಿ ಮೂಡಿ ಬಂದಿದೆ. ಪ್ರತಿಯೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದ್ದು , ಈಗ ಬಿಡುಗಡೆಯಾಗಿರುವ “ಗಂಗಿ ಗಂಗಿ” ಹಾಡು ಬಹಳ ಚೆನ್ನಾಗಿದೆ ಎಂದು ಹೇಳಿದರು.

ನಿರ್ಮಾಪಕ ಮಂಜುನಾಥ್ ಕಂದಕೂರ್ ಮಾತನಾಡಿ “ಫಸ್ಟ್ ರ‍್ಯಾಂಕ್ ರಾಜು” ಚಿತ್ರದ ನಂತರ ನಿರ್ಮಾಣ ಮಾಡುತ್ತಿರುವ ಎರಡನೇ ಚಿತ್ರ “ಬ್ರ್ಯಾಟ್”. ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯಿತು , ಹಾಗಾಗಿ ಸಿನಿಮಾ ಮಾಡಲು ನಿರ್ಧರಿಸಿದೆ. ಅಂದುಕೊಂಡಂತೆ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಹಾಗೆಯೇ ನಟ ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರ ಮತ್ತೊಂದು ಸೂಪರ್ ಹಿಟ್ ಆಗಲಿದೆ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಸೊಗಸಾಗಿದೆ , ಎಲ್ಲರೂ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ಎಂದರು.

ಬಾಳು ಬೆಳಗುಂದಿ ಮಾತನಾಡಿ ಕುರಿಗಾಹಿಯಾಗಿದ್ದ ತಮಗೆ ಬಹಳಷ್ಟು ಜನಪದ ಗೀತೆಗಳನ್ನು ಬರೆದು ಹಾಡುತ್ತಿದ್ದೆ. ಒಂದು ಉತ್ತಮ ವೇದಿಕೆಯಾಗಿ “ಸರಿಗಮಪ” ದಲ್ಲಿ ಅವಕಾಶ ಸಿಕ್ಕಿತು. ಆ ಕಾರ್ಯಕ್ರಮದ ಜಡ್ಜ್ ಆಗಿದ್ದ ಅರ್ಜುನ್ ಜನ್ಯ ಸರ್ ಅವರು ನನ್ನ ಹಾಡನ್ನು ಗಮನಿಸಿ ನನ್ನ ಸಂಗೀತದ ಸಿನಿಮಾದಲ್ಲಿ ನಿನಗೊಂದು ಅವಕಾಶ ಕೊಡುತ್ತೇನೆ ಎಂದಿದ್ದರು , ಅದರಂತೆ ಈ ಸಿನಿಮಾದಲ್ಲಿ ನನ್ನಿಂದ ಗೀತ ರಚನೆಯು ಬರೆಸಿ ಹಾಡಲು ಅವಕಾಶವನ್ನು ನೀಡಿದ್ದಾರೆ. ಅವರಿಗೆ ಸದಾ ಚಿರ‌ಋಣಿ ಎಂದು ಹೇಳಿದರು

ಚಿತ್ರದಲ್ಲಿ ನಟಿಸಿರುವ ಡ್ಯಾಗನ್ ಮಂಜು ಸೇರಿದಂತೆ ಕಿದ್ವಾಯ್ ಸಂಸ್ಥೆಯ ವೈದ್ಯ ರಾಮಚಂದ್ರ ಹಾಗೂ ಬದರಿನಾಥ್ ಸೇರಿದಂತೆ
ಮತ್ತಿತರರು ಮಾಹಿತಿ‌ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin