"Bheema" right for Diwali: Duniya Vijay outfit for the show

ದೀಪಾವಳಿಗೆ “ಭೀಮ” ಬಲ : ಪ್ರದರ್ಶನಕ್ಕೆ ದುನಿಯಾ ವಿಜಯ್ ಸಜ್ಜು - CineNewsKannada.com

ದೀಪಾವಳಿಗೆ “ಭೀಮ” ಬಲ : ಪ್ರದರ್ಶನಕ್ಕೆ ದುನಿಯಾ ವಿಜಯ್ ಸಜ್ಜು

“ಸಲಗ” ಚಿತ್ರದ ಬಳಿಕ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ನಿರ್ದೇಶಕರಾಗಿ ಆರಂಭದ ಪ್ರಯತ್ನದಲ್ಲಿ ಸಿಕ್ಸರ್ ಸಿಡಿಸಿದ್ದರು. ಇದೀಗ ಮತ್ತೆ ಎರಡನೇ ಪ್ರಯತ್ನವಾಗಿ “ಭೀಮ” ನಿರ್ದೇಶನ ಮಾಡಿದ್ದಾರೆ.ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

ಕಳೆದ ಹಲವು ದಿನಗಳಿಂದ ಸ್ಟಾರ್‍ಗಳ ಸಿನಿಮಾ ತೆರೆಗೆ ಬರದಿರುವ ಹಿನ್ನೆಲೆಯಲ್ಲಿ “ ಭೀಮ”ನ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದ್ದು ಚಿತ್ರ ಕುತೂಹಲ ಕೆರಳಿಸುವಂತೆ ಮಾಡಿದೆ.

ಕಳೆದ ಹಲವು ತಿಂಗಳಿನಿಂದ ಚಿತ್ರದ ಕೆಲಸ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ದುನಿಯಾ ವಿಜಯ್ ಚಿತ್ರದ ಬಹುತೇಕ ಎಲ್ಲಾ ಕೆಲಸ ಕಾರ್ಯ ಪೂರ್ಣಗೊಳಿಸಿ ಚಿತ್ರವನ್ನು ಬಿಡುಗಡೆಯ ಹಂತಕ್ಕೆ ತಂದಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ದೀಪಾವಳಿಗೆ “ಭೀಮ” ಬಲ ಪ್ರದರ್ಶನಕ್ಕೆ ದುನಿಯಾ ವಿಜಯ್ ಸಜ್ಜಾಗಿದ್ದಾರೆ. ದೀಪಾವಳಿಗೆ ತಪ್ಪಿದರೆ ನಂವಂಬರ್‍ನಲ್ಲಿ ತೆರೆಗೆ ಬರುವುದು ಪಕ್ಕಾ ಆಗಿದೆ.

ನಟ, ನಿರ್ದೇಶಕರೂ ಆಗಿರುವ ದುನಿಯಾ ವಿಜಯ್ ಅವರು ಶೀಘ್ರದಲ್ಲಿ ಚಿತ್ರದ ಬಿಡುಗಡೆಯ ದಿನಾಂಕ ಸೇರಿದಂತೆ ಚಿತ್ರದ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ಮುಂದಾಗಿದ್ದಾರೆ. ಈ ಸಂಬಂಧ ಮುಂದಿನವಾರ ಚಿತ್ರ ಬಿಡುಗಡೆಯ ಮುಹೂರ್ತ ನಿಗಧಿ ಮಾಡುವ ಜೊತೆಗೆ ಅಧಿಕೃತವಾಗಿ ಚಿತ್ರದ ಪ್ರಚಾರ ಕಾರ್ಯ ಆರಂಭಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.

ಚಿತ್ರದಲ್ಲಿ ದುನಿಯಾ ವಿಜಯ್,ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್,ಕಲ್ಯಾಣಿ,ಅಶ್ವಿನಿ ಮತ್ತು ಪ್ರಿಯಾ ಶಠಮರ್ಷಣ ಮುಖ್ಯ ಭೂಮಿಕೆಯಲ್ಲಿದ್ದು, ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ,ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ,ವಿನೋದ್,ಗೌತಮ್ ಸಾಹಸ,ಧನು ನೃತ್ಯ ಭೀಮನಿಗಿದೆ.

ಕೃಷ್ಣ ಸಾರ್ಥಕ್,ಜಗದೀಶ್ ಗೌಡ ನಿರ್ಮಾಣ ಮಾಡಿದ್ದು ಭೀಮ ಎಲ್ಲಾ ಆಂಗಲ್ ನಿಂದ್ಲೂ ಚಿತ್ರರಂಗದಲ್ಲಿ ದೊಡ್ಡ ನಿರಿಕ್ಷೆಯನ್ನ ಹುಟ್ಟಿಸಿದೆ.ಅಲ್ಲದೆ ಈ ವರ್ಷದ ಬಹು ನಿರೀಕ್ಷಿತ ಚಿತ್ರವಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin