Agrasena film completes 50 days: The film team shared happiness

50 ದಿನ ಫೂರೈಸಿದ ಅಗ್ರಸೇನಾ ಚಿತ್ರ : ಸಂತಸ ಹಂಚಿಕೊಂಡ ಚಿತ್ರ ತಂಡ - CineNewsKannada.com

50 ದಿನ ಫೂರೈಸಿದ ಅಗ್ರಸೇನಾ ಚಿತ್ರ : ಸಂತಸ ಹಂಚಿಕೊಂಡ ಚಿತ್ರ ತಂಡ

ಇತ್ತೀಚಿನ ದಿನಗಳಲ್ಲಿ ಕನ್ನಡದ ಒಂದಷ್ಟು ಚಿತ್ರಗಳು ಯಶಸ್ವೀ ಪ್ರದರ್ಶನ‌ ಕಾಣುತ್ತಿವೆ. ಇತ್ತೀಚೆಗೆ ಮುಸ್ತಫಾ ೫೦ ದಿನ ಕಂಡಿತ್ತು. ನಂತರ ಇದೀಗ ಅಗ್ರಸೇನಾ ಚಲನಚಿತ್ರವು ಐವತ್ತು ದಿನಗಳನ್ನು ಪೂರೈಸಿ ಮುನ್ನಡೆದಿದೆ‌.

ವೈಷ್ಣವಿ ಮೂವೀಸ್ ಲಾಂಛನದಲ್ಲಿ ಮಮತಾ ಜಯರಾಮರೆಡ್ಡಿ ಅವರು ನಿರ್ಮಿಸಿರುವ ಈ ಚಿತ್ರದ ಐವತ್ತು ದಿನಗಳ ಸಂಭ್ರಮ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ನಿರ್ಮಾಕ ಜಯರಾಮರೆಡ್ಡಿ ಮಾತನಾಡಿ ಇವತ್ತಿನ ಸಂತಸಕ್ಕೆ ಕಾರಣರಾದ ಕನ್ನಡ ಪ್ರೇಕ್ಷಕರಿಗೆ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ. ಪರದೆಯ ಹಿಂದೆ ಮುಂದೆ ದುಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಚಿತ್ರದ ಮೇನ್ ವಿಲನ್ ಮನಮೋಹನ್ ರೈ ಅವರ ಅಭಿನಯ ನಿಜಕ್ಕೂ ಅದ್ಭುತ.ಲವರ್ ಬಾಯ್ ಆಗಿ ಅಮರ್, ದಸರಾಬೊಂಬೆ ರಚನಾ ದಶರಥ್ ಅವರ ಅದ್ಭುತ ಅಭಿನಯ ಜೊತೆಗೆ ನಮ್ಮ ಸಿನಿಮಾದ ಜೀವಾಳ ಎನಿಸಿಕೊಂಡಿರುವ ಸಂಗೀತ ನಿರ್ದೇಶಕ ತ್ಯಾಗರಾಜ್ ಅವರ ಕೆಲಸ ಚಿತ್ರದ ಗೆಲುವಿಗೆ ಕಾರಣವಾಗಿದೆ. ಚಿತ್ರದ ಮತ್ತೊಂದು ಹೈಲೈಟ್ ಕೃಷ್ಣಮೂರ್ತಿ ಬೆಳಗೆರೆ ಅವರ ಅದ್ಭುತ ಅಭಿನಯ ಎಂದು ಹೇಳಿದರು.

ನಂತರ ಮಾತನಾಡಿದ ನಿರ್ಮಾಪಕಿ ಮಮತಾ ಜಯರಾಮ ರೆಡ್ಡಿ, ನಮ್ಮ ಸಿನಿಮಾ ಯಶಸ್ಸು ಕಂಡಿದೆ. ಈ ವರ್ಷ ಬಿಡುಗಡೆಯಾದ ೧೫೦ ಸಿನಿಮಾಗಳಲ್ಲಿ ಹೊಸಬರ ಪ್ರಯತ್ನದ ಫಲವಾದ ನಮ್ಮ ಸಿನಿಮಾ ಐವತ್ತು ದಿನದ ಗೆಲುವನ್ನು ಕಂಡಿದೆ ಎಂದರು.


ನಟ ಅಗಸ್ತ್ಯ ಬೆಳಗೆರೆ ಮಾತನಾಡಿ, ನಮ್ಮ ಚಿತ್ರ ಜೂನ್ ೨೩ಕ್ಕೆ ಬಿಡುಗಡೆಯಾಗಿತ್ತು. ಚಿತ್ರದ ಯಶಸ್ಸಿಗೆ ಪ್ರತಿಯೊಬ್ಬರೂ ನೀಡಿದ ಸಹಕಾರವೇ ಕಾರಣ, ನಾಲ್ಕು ವರ್ಷ ತಪಸ್ಸು ಮಾಡಿ ಈ ಸಿನಿಮಾ ಮಾಡಿದ್ದೇನೆ.
ಸಂಗೀತ‌ ನಿರ್ದೇಶಕ, ಛಾಯಾಗ್ರಾಹಕ ಸೇರಿದಂತೆ ಪ್ರತಿಯೊಬ್ಬರ ಶ್ರಮ ಚಿತ್ರದ ಗೆಲುವಿಗೆ ಕಾರಣವಾಗಿದೆ. ನಿರ್ಮಾಪಕರು ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ. ನಮ್ಮನ್ನೆಲ್ಲ ಇಲ್ಲಿವರೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಹೇಳಿದರು

ಈ ಸಂದರ್ಭದಲ್ಲಿ ನಿರ್ಮಾಪಕ ಜಯರಾಮರೆಡ್ಡಿ, ಮಮತಾ ಜಯರಾಮರೆಡ್ಡಿ, ಚಿತ್ರದ ನಾಯಕ ಅಗಸ್ತ್ಯ ಬೆಳಗೆರೆ, ಮನಮೋಹನ ರೈ, ರಂಜಿತ್, ಶಶಿಧರ ಗೌಡ,ಮೀನಾಕ್ಷಿ, ಮುಂತಾದವರು ಮಾತನಾಡಿ ಯಶಸ್ಸಿನ ಸಂತಸವನ್ನು ಹಂಚಿಕೊಂಡರು.

ಕಾರಣಾಂತರಗಳಿಂದ ನಾಯಕ ಅಮರ್ ವಿರಾಜ್ ಬಂದಿರಲಿಲ್ಲ. ಅನಾರೋಗ್ಯದ ಕಾರಣ ನಿರ್ದೇಶಕ ಮುರುಗೇಶ್ ಕಣ್ಣಪ್ಪ ಕೂಡ ಬಂದಿರಲಿಲ್ಲ, ಆದರೆ ಅವರು ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ವೇದಿಕೆಮೇಲೆ ಚಿತ್ರದಲ್ಲಿ ದುಡಿದ ಕಲಾವಿದ, ತಂತ್ರಜ್ಞರಿಗೆ ಸ್ಮರಣ ಫಲಕಗಳನ್ನು ವಿತರಿಸಲಾಯಿತು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin