``Big win for hostel hudugaru Bekagiddare : Removal of obstacles to release

`ಹಾಸ್ಟೆಲ್ ಹುಡುಗರಿಗೆ ಜಯ: ಬಿಡುಗಡೆಗೆ ಇದ್ದ ಅಡೆ ತಡೆ ನಿವಾರಣೆ - CineNewsKannada.com

`ಹಾಸ್ಟೆಲ್ ಹುಡುಗರಿಗೆ ಜಯ: ಬಿಡುಗಡೆಗೆ ಇದ್ದ ಅಡೆ ತಡೆ ನಿವಾರಣೆ

“ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ” ಸಿನಿಮಾ ತಂಡಕ್ಕೆ ಗೆಲುವು ಸಿಕ್ಕಿದೆ ಅನುಮತಿ ಇಲ್ಲದೆ ಸಿನಿಮಾಗಳಲ್ಲಿ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದ ಮೋಹಕತಾರೆ ರಮ್ಯಾಗೆ ಹಿನ್ನಡೆಯಾಗಿದೆ. ಹೀಗಾಗಿ ನಾಳೆ ನಿಗಧಿಯಂತೆ ಬಿಡುಗಡೆಗೆ ಇದ್ದ ಅಡೆ ತಡೆ ನಿವಾರಣೆಯಾಗಿದೆ.

ಚಿತ್ರ ಬಿಡುಗಡೆಗೆ ಎರಡು ದಿನ ಬಾಕಿ ಇರುವಾಗಲೇ ರಮ್ಯಾ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಯದಲ್ಲಿ ದೂರ ದಾಖಲಿಸಿದ್ದು ಚಿತ್ರತಂಡಕ್ಕೂ ಅಚ್ಚರಿ ಮೂಡಿಸಿತ್ತು. ಹೀಗಾಗಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ತಂಡ ಕೂಡ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯ ಚಿತ್ರ ತಂಡದ ಪರವಾಗಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಚಿತ್ರ ನಾಳೆ ತೆರೆಗೆ ಬರಲಿದೆ.

ಕಳೆದ ಎರಡು ದಿನಗಳಿಂದ ನಡೆದ ವಿಚಾರಣೆ ನಡೆಸಿದ 83ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯ ಚಿತ್ರತಂಡದ ಪರವಾಗಿ ತೀರ್ಪು ನೀಡಿದೆ. ಚಿತ್ರತಂಡದ ಪರವಾಗಿ ವಕೀಲ ವೇಲನ್ ವಾದ ಮಂಡಿಸಿದ್ದರು. ಚಿತ್ರತಂಡಕ್ಕೆ ಗೆಲುವು ಸಿಕ್ಕ ಹಿನ್ನೆಲೆಯಲ್ಲಿ ಚಿತ್ರತಂಡ ನರ್ತಕಿ ಚಿತ್ರಮಂದಿರದ ಎದುರು ಪಟಾಕಿ ಸಿಡಿಸಿ ಹಾಡು ಹೇಳಿ ಸಂಭ್ರಮಿಸಿದೆ.

ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಮಾತನಾಡಿ, ನಾಳೆ ಸಿನಿಮಾ ಚಿತ್ರ ಬಿಡುಗಡೆಯಾಗುವದಕ್ಕೆ ಇದ್ದ ತಡೆಯಾಜ್ಞೆ ತೆರವಾಗಿದೆ. ಬಿಡುಗಡೆಗೆ ಇದ್ದ ಅಡ್ಡಿ ಆತಂಕ ದೂರವಾಗಿದೆ. ಮೂರು ನಾಲ್ಕು ದಿನಗಳಿಂದ ಓಡಾಟ ಇದ್ದಿದ್ದರಿಂದ ಬುಕ್ಕಿಂಗ್ ಓಪನ್ ಆಗಿರಲಿಲ್ಲ. ಈಗ ಬುಕ್ಕಿಂಗ್ ಶುರುವಾಗಿದೆ. ದಯವಿಟ್ಟು ಬುಕ್ಕಿಂಗ್ ಮಾಡಿ ನಾಳೆ ಚಿತ್ರಮಂದಿರಕ್ಕೆ ಗೆ ಬನ್ನಿ ಮಾಡಿಕೊಂಡಿದ್ದಾರೆ.

ನಿರ್ಮಾಪಕ ವರುಣ್ ಗೌಡ ಮಾತನಾಡಿ, ಯಾವುದೋ ಒಂದು ಮಿಸ್ ಅಂಡಸ್ಟ್ರ್ಯಾಂಡಿಗ್ ನಿಂದ ಈ ರೀತಿ ಆಗಿದೆ. ಮನೆಯಲ್ಲಿ ಅಣ್ಣ ತಮ್ಮ ಗಲಾಟೆ ಮಾಡಿಕೊಂಡಾಗ ಏನಾಗುತ್ತದೆ. ಮನಸ್ತಾಪ ಉಂಟಾಗುತ್ತದೆ. ಆ ರೀತಿ ಒಂದು ಮನಸ್ತಾಪ ಅಷ್ಟೇ ಎಂದರು.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ಬಹುತೇಕ ಹೊಸಬರೇ ಸೇರಿ ಮಾಡಿದ್ದಾರೆ. ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಈಗಾಗಲೇ ಬಹಳ ಗಮನ ಸೆಳೆದಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ, ಲೂಸಿಯಾ ಪವನ್ ಕುಮಾರ್, ಶೈನ್ ಶೆಟ್ಟಿ ಮತ್ತು ನಟ ದಿಗಂತ್ ಅವರುಗಳು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.

ಯುವ ಪ್ರತಿಭೆ ನಿತಿನ್ ಕೃಷ್ಣಮೂರ್ತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಝೀ ಸ್ಟುಡಿಯೊಸ್ ವಿತರಣೆ ಮಾಡುತ್ತಿದ್ದು, ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಪ್ರೆಸೆಂಟ್ ಮಾಡುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin