“ಸು ಫ್ರಮ್ ಸೋ” ಚಿತ್ರ ನೋಡಿ ಕೊಂಡಾಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್
ರಾಜ್ ಬಿ ಶೆಟ್ಟಿ ನಟನೆಯಲ್ಲಿ ಮೂಡಿಬಂದಿದ್ದ “ ಸು ಫ್ರಮ್ ಸೋ” ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಠಿ ಮಾಡಿದೆ, ಜೊತೆಗೆ ಗಲ್ಲಾ ಪೆಟ್ಟಿಗೆಯಲ್ಲಿ ಬಾರಿ ಸದ್ದು ಮಾಡಿದೆ.

ಬಾಲಿವುಡ್ ಚಿತ್ರರಂಗದಲ್ಲಿ ಕಿಲಾಡಿ ಎಂದೇ ಖ್ಯಾತಿ ಪಡೆದಿರುವ ನಟ ಅಕ್ಷಯ್ ಕುಮಾರ್ ಅವರನ್ನು “ಹೈವಾನ್” ಸಿನಿಮಾ ಸೆಟ್‍ನಲ್ಲಿ ನಟ, ರಾಜ್ ಬಿ ಶೆಟ್ಟಿ ಮತ್ತು ಕಾರ್ಯಕಾರಿ ನಿರ್ಮಾಪಕರಾದ ಬಾಲು ಕುಮಟ ಭೇಟಿ ಮಾಡಿ ಚರ್ಚೆ ನಡೆಸಿದ್ಧಾರೆ.
ಈ ವೇಳೆ “ಸು ಫ್ರಮ್ ಸೋ” ಚಿತ್ರ ನೋಡಿ ಕೊಂಡಾಡಿದ ಅಕ್ಷಯ್ ಕುಮಾರ್, ಕಥೆ ಇದ್ರೆ ಹೇಳಿ ಸಿನ್ಮಾ ಮಾಡೋಣ ಅಂತ ರಾಜ್ ಬಿ ಶೆಟ್ಟಿ ಅವರನ್ನು ನಟ ಅಕ್ಷಯ್ ಕುಮಾರ್ ಅವರನ್ನು ಕೇಳಿರುವುದು ಕನ್ನಡದ ಕನ್ನಡ ನಟರು, ಮತ್ತು ತಂತ್ರಜ್ಞರ ಶಕ್ತಿ ಏನು ಎನ್ನುವುದು ಮತ್ತೊಮ್ಮೆ ಅನಾವರಣವಾಗಿದೆ
ಊಟಿಯಲ್ಲಿ ಚಿತ್ರೀಕರಣವಾಗುತ್ತಿರುವ “ ಹೈವಾನ್” ಚಿತ್ರವನ್ನ ಕೆ.ವಿ.ಎನ್ ಸಂಸದಥೆ ನಿರ್ಮಾಣ ಮಾಡುತ್ತಿದ್ದು ಪ್ರಿಯದರ್ಶನ್ ನಿರ್ದೇಶನ ಮಾಡ್ತಿದ್ದಾರೆ. ಸು ಫ್ರಮ್ ಸೋ ಚಿತ್ರ ನೋಡಿ ನಟ ಅಕ್ಷಯ್ ಕುಮಾರ್ ಇಷ್ಟಪಟ್ಟಿರುವುದು ಕನ್ನಡಕ್ಕೆ ಅಕ್ಷಯ್ ಕುಮಾರ್ ಮತ್ತೆ ಬರ್ತಾರಾ ಎನ್ನುವ ಕುತೂಹಲ ಕೆರಳಿಸಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರು ಬಾಲು ಕುಮಟ ಅವರು, ಸು ಫ್ರಮ್ ಸೋ ಚಿತ್ರ ನೋಡಿ ಅಕ್ಷಯ್ ಕುಮಾರ್ ಮನಸಾರೆ ಇಷ್ಟಪಟ್ಟಿದ್ದರು, ಅವರನ್ನು ಭೇಟಿ ಮಾಡಿದ ವೇಳೆ ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ ಎಂದು ರಾಜ್ ಬಿ ಶೆಟ್ಟಿ ಅವರನ್ನು ಕೇಳಿದ್ದಾರೆ. ನೋಡೋಣ ಮುಂದೆ ಏನಾಗುತ್ತದೆ ಎನ್ನುವ ಮೂಲಕ ಕುತೂಹಲ ಹೆಚ್ಚು ಮಾಡಿದ್ದಾರೆ

