'Joteyaagi Hitavagi', a sweet love story, hits screens on September 19

ಮುದ್ದಾದ ಪ್ರೇಮಕಥೆ ಹೊಂದಿರುವ ‘ಜೊತೆಯಾಗಿ ಹಿತವಾಗಿ’ ಸೆಪ್ಟಂಬರ್ 19ಕ್ಕೆ ತೆರೆಗೆ - CineNewsKannada.com

ಮುದ್ದಾದ ಪ್ರೇಮಕಥೆ ಹೊಂದಿರುವ ‘ಜೊತೆಯಾಗಿ ಹಿತವಾಗಿ’ ಸೆಪ್ಟಂಬರ್ 19ಕ್ಕೆ ತೆರೆಗೆ

ಮುದ್ದಾದ ಪ್ರೇಮಕತೆ ಹೊಂದಿರುವ “ಜೊತೆಯಾಗಿ ಹಿತವಾಗಿ” ಚಿತ್ರ ಸೆಪ್ಟಂಬರ್ 19ಕ್ಕೆ ತೆರೆಗೆ ಬರಲಿ ಸಜ್ಜಾಇದೆ ಸಿನಿಮಾದಲ್ಲಿ ಅಪ್ಪ – ಮಗನ ಬಾಂಧವ್ಯವೇ ಹೈಲೈಟ್ ಕೂಡ

ಸಿನಿಮಾ ಬಿಡುಗಡೆಗೂ ಮುನ್ನ ಆಯೋಜಿಸಿದ್ದ ಪ್ರೀಮಿಯರ್ ಶೋ ನೋಡಿದ ಮಂದಿ ಮನಸ್ಪೂರ್ತಿಯಾಗಿ ಮೆಚ್ಚಿಕೊಂಡಿದ್ದಾರೆ. ಲವ್ ಸ್ಟೋರಿ, ಅಪ್ಪ ಮಗನ ಸೆಂಟಿಮೆಂಟ್ ಹಾಡಿ ಹೊಗಳಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಳವಾಗಿದೆ.

ಜೊತೆಯಾಗಿ ಹಿತವಾಗಿ ಸಿನಿಮಾದ ಟೈಟಲ್ ಶಿವಣ್ಣನ ಮೊದಲ ಆನಂದ್ ಸಿನಿಮಾದ ಹಾಡಿನಲ್ಲಿರುವ ಸಾಲಾಗಿದೆ. ಹಾಡಿನ ಸಾಲನ್ನೇ ಟೈಟಲ್ ಆಗಿ ಇಡುವುದಕ್ಕೂ ಒಂದು ಕಾರಣವಿದೆ, ಅದುವೇ ಈ ಸಿನಿಮಾದ ನಾಯಕ ಅಗಸ್ತ್ಯ ದೊಡ್ಮನೆಯ ಅಪ್ಪಟ ಅಭಿಮಾನಿ. ಲವ್ ಸಬ್ಜೆಕ್ಟ್ ಇರುವಂತ ಸಿನಿಮಾ. ಹೀಗಾಗಿಯೇ ಟೈಟಲ್ ಅನ್ನ ಸಿನಿಮಾಗೆ ಇಡಲಾಗಿದೆ. ಕಥೆ ಮಾಡಿಕೊಂಡಾಗ ಒಂದೇ ಒಂದು ಸಲ ಎಂಬ ಟೈಟಲ್ ಇಡಲಾಗಿತ್ತು. ಆದ್ರೆ ಆಮೇಲೆ ಕಥೆಗೆ ತಕ್ಕಂತೆ ಟೈಟಲ್ ಬದಲಾವಣೆ ಮಾಡಲಾಗಿತ್ತು. ಮನೆಯಲ್ಲಿ ತುಂಬಾ ಫ್ರೀಡಂ ಕೊಟ್ಟರೆ ಏನಾಗುತ್ತೆ, ತೀರಾ ರಿಸ್ಟ್ರಿಕ್ಷನ್ ಇದ್ದಾಗ ಏನಾಗಬಹುದು ಎಂಬುದನ್ನ ತೀರಾ ಅದ್ಭುತವಾಗಿ ಹೆಣೆಯಲಾಗಿದೆ.

ಜೊತೆಯಾಗಿ ಹಿತವಾಗಿ ಸಿನಿಮಾವನ್ನೇ ಶಾರ್ಟ್ ಮೂವಿ ಮಾಡಬೇಕು ಎಂದುಕೊಂಡಿದ್ದ ಟೀಂ, ಸಿನಿಮಾದ ಕಥೆ ಸಾಗುತ್ತಾ ಸಾಗುತ್ತಾ ಸಿನಿಮಾವನ್ನೇ ಮಾಡಿಬಿಟ್ಟರು. ಸಿನಿಮಾ ಚೆನ್ನಾಗಿ ಬರಬೇಕು, ಜನಕ್ಕೆ ತೋರಿಸುವಾಗ ಬಹಳ ಮುಖ್ಯವಾಗುತ್ತೆ ಎಂಬ ವಿಚಾರವನ್ನ ತಲೆಯಲ್ಲಿಟ್ಟುಕೊಂಡ ತಂಡ, ಎಷ್ಟೋ ಸೀನ್ ಗಳನ್ನ ರೀಶೂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಕಂಪ್ಲೀಟ್ ಬೆಳಗಾವಿಯನ್ನ ಮಲೆನಾಡಿನ ರೀತಿಯಲ್ಲಿ ತೋರಿಸಲಾಗಿದೆ.

ಅಗಸ್ತ್ಯ ನಾಯಕ ನಟನಾಗಿ ಕಾಣಿಸಿಕೊಂಡಿದ್ದು. ಮೂಲತಃ ಬೆಳಗಾವಿಯವರು. ಸ್ಕೂಲ್ ಸಮಯದಲ್ಲಿದ್ದಾಗಿನಿಂದಲೇ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಅವರಲ್ಲಿತ್ತು. ಸಿನಿಮಾಗೆ ಹೋಗೋದಕ್ಕೆ ಮನೆಯಲ್ಲಿ ಸಪೆÇೀರ್ಟ್ ಇರಲಿಲ್ಲ. ಆದ್ರೆ ಒಂದೇ ಒಂದು ಅವಕಾಶಕ್ಕೋಸ್ಕರ ಅಗಸ್ತ್ಯ ಅವರು ಸಿನಿಮಾದ ಟೆಕ್ನಿಕಲ್ ವಿಭಾಗದಲ್ಲಿ ಕಲಿಕೆ ಕಂಡುಕೊಂಡರು. ಎಲ್ಲಾ ಶ್ರಮದ ಫಲವಾಗಿ ಈಗ ಒಂದು ಸಿನಿಮಾದ ಹೀರೋ ಆಗಿದ್ದಾರೆ.

ಅಗಸ್ತ್ಯ ಹಾಗೂ ಸುವಾರ್ತಾ ನಾಯಕ ನಾಯಕಿಯಾಗಿದ್ದಾರೆ. ಸದ್ಯ ಫಸ್ಟ್ ಲುಕ್ ಪೆÇೀಸ್ಟರ್ ಬಿಡುಗಡೆಯಾಗಿದೆ.ಶ್ರೀ ರತ್ನ ಫಿಲಂ ಕಂಪನಿ ನಿರ್ಮಿಸಿರುವ ಈ ಚೊಚ್ಚಲ ಚಿತ್ರವನ್ನು ಎ ಆರ್ ಕೃಷ್ಣ ನಿರ್ದೇಶಿಸಿದ್ದಾರೆ. ಅಪ್ಪನ ಪಾತ್ರಕ್ಕೆ ಆನಂದ್ ನೀನಾಸಂ ಜೀವ ತುಂಬಿದ್ದು, ಇನ್ನುಳಿದಂತೆ ತಾರಾಗಣದಲ್ಲಿ ಚೇತನ್ ದುರ್ಗಾ, ಬಳ್ಳಾರಿ ಅರ್ಜುನ್, ಸಲೋಮಿ ಡಿಸೋಜ, ಭೂಮಿಕಾ ದೇಶಪಾಂಡೆ, ವಿನಾಯಕ್ ಮುಂತಾದವರು ಇದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin