ಕ್ಯಾಂಡಿಕ್ರಶ್ ಈಗ ಮುದ್ದು ರಾಕ್ಷಸಿ : ಮಾಜಿ ಪತ್ನಿಗೆ ಪ್ರೇಮ ನಿವೇದನೆ ಮಾಡಿದ ಚಂದನ್ ಶೆಟ್ಟಿ

ರಿಯಲ್ ಲೈಫ್ ಜೋಡಿಯಾಗಿದ್ದ ಚಂದನ್ ಶೆಟ್ಟಿ- ನಿವೇದಿತಾ ಗೌಡ ಮೊದಲಬಾರಿಗೆ ಜೊತೆಯಾಗಿ ಅಭಿನಯಿಸಿದ್ದ ಚಿತ್ರಕ್ಕೆ ಇಟ್ಟಿದ್ದ ಕ್ಯಾಂಡಿ ಕ್ರಷ್ ಟೈಟಲ್ ಇದೀಗ ಬದಲಾಗಿದೆ. ಪುನೀತ್ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಸೈಕೋಥ್ರಿಲ್ಲರ್ ಕಥಾಹಂದರ ಹೊಂದಿದ ಚಿತ್ರದ ತಾತ್ಕಾಲಿಕ ಟೈಟಲ್ ಆಗಿದ್ದ ಕ್ಯಾಂಡಿಕ್ರಷ್ ನ್ನು ಇದೀಗ ಮುದ್ದು ರಾಕ್ಷಸಿ ಎಂದು ಬದಲಾಯಿಸಲಾಗಿದೆ.

ಶ್ರೀ ಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ಈ ಚಿತ್ರವನ್ನು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಮೊದಲಬಾರಿಗೆ ಒಟ್ಟಿಗೇ ನಟಿಸಿದ್ದಾರೆ.
ಪುನೀತ್ ಶ್ರೀನಿವಾಸ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಬಹುತೇಕ ಶೂಟಿಂಗ್ ನಡೆಸಲಾಗಿದೆ.

ಮುದ್ದುರಾಕ್ಷಸಿ ಒಂದು ವಿಭಿನ್ನ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಸೈಕೋಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು ಚಿತ್ರದ ಈ ಶೀರ್ಷಿಕೆಯೇ ವಿಶೇಷವಾಗಿದೆ. ಮುದ್ದು ರಾಕ್ಷಸಿ ಚಿತ್ರದ ಹಾಡುಗಳಿಗೆ ಎಂ.ಎಸ್.ತ್ಯಾಗರಾಜ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ಎ.ಕರುಣಾಕರ್ ಅವರು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.