Celebrating 50 years of Sakalkalavallabha Anantnag Cine Journey

ಸಕಲಕಲವಲ್ಲಭ ಅನಂತ್‍ನಾಗ್ ಸಿನಿ ಯಾನಕ್ಕೆ 50ರ ಸಂಭ್ರಮ - CineNewsKannada.com

ಸಕಲಕಲವಲ್ಲಭ ಅನಂತ್‍ನಾಗ್ ಸಿನಿ ಯಾನಕ್ಕೆ 50ರ ಸಂಭ್ರಮ

ಹಿರಿಯ ನಟ ಅನಂತ್ ನಾಗ್ ಅವರಿಗೆ ಇದೀಗ ಹೊಸ ದಾಖಲೆಯೊಂದು ಸೇರಿಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ 50 ವರ್ಷ ಪೂರ್ಣಗೊಳಿಸಿದ ಅಪರೂಪ ಹಾಗು ಕೆಲವೇ ಕೆಲವು ನಟರಲ್ಲಿ ತಾವು ಒಬ್ಬರು ಎನ್ನುವ ಹಿರಿಮೆ ತನ್ನದಾಗಿಸಿಕೊಂಡಿದ್ದಾರೆ.

1973ರಲ್ಲಿ ಸಂಕಲ್ಪ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿರಿಸಿದ ನಟ ಅನಂತ್ ನಾಗ್, ಕನ್ನಡ ಚಿತ್ರರಂಗ ಮಾತ್ರವಲ್ಲದೆ ಹಿಂದಿ, ತೆಲುಗು, ಮರಾಠಿ,ಮಲೆಯಾಳಂ ಮತ್ತು ಇಂಗ್ಲೀಷ್ ಭಾಷೆಯ ಚಿತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದವರು. ಜೊತೆ ಜೊತೆಗೆ ರಂಗಭೂಮಿಯಲ್ಲಿ ಸೈ ಎನಿಸಿಕೊಂಡ ತೊಡಗಿಸಿಕೊಂಡಿದ್ದ ಅಪ್ರತಿಮ ಕಲಾವಿದ.

ಬಣ್ಣದ ಬದುಕಿನಲ್ಲಿ ಸುವರ್ಣ ಮಹೋತ್ಸವದ ಆಚರಣೆ ಸಂಭ್ರಮದಲ್ಲಿರುವ ನಟ ಅನಂತ್ ನಾಗ್ ಅವರಿಗೆ ಹಿರಿಯ ನಟ ಶಿವರಾಜ್ ಕುಮಾರ್ , ಗೀತಾ ಶಿವರಾಜ್‍ಕುಮಾರ್, ಡಾಲಿ ಧನಂಜಯ,ನಟ ರಿಷಬ್ ಶೆಟ್ಟಿ, ಯುವ ನಟ ಧೀರೇನ್ ರಾಮ್ ಕುಮಾರ್ ಸೇರಿದಂತೆ ಅನೇಕ ಮಂದಿ ಶುಭಹಾರೈಸಿ ಹಿರಿಯ ನಟನಿಗೆ ಅಭಿಮಾನದ ಅಭಿನಂದನೆ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅನಂತ್‍ನಾಗ್ ಅವರಿಗೆ ಅಭಿನಂಧನೆಗಳ ಮಹಾಪೂರ ಹರಿದು ಬರುತ್ತಿದೆ. 50 ವರ್ಷಗಳ ಚಿತ್ರರಂಗದ ಅನುಭವದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಎಲ್ಲರ ಮೆಚ್ಚುಗೆ ಶಹಬ್ಬಾಸ್‍ಗಿರಿ ಪಡೆದ ಅಪರೂಪದ ಕಲಾವಿದರಲ್ಲಿ ಒಬ್ಬರು.

ಡಾ.ರಾಜ್ ಕುಮಾರ್, ಅಂಬರೀಷ್, ವಿಷ್ಣುವರ್ಧನ್, ಸಹೋದರ ಶಂಕರ್ನಾಗ್ ಸೇರಿದಂತೆ ಅನೇಕರ ಜೊತೆ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದವರು. ನಾಯಕನಾಗಿ ಹತ್ತಾರು ಯಶಸ್ವಿ ಚಿತ್ರ ನೀಡಿದ ಹೆಗ್ಗಳಿಕೆಯೂ ಅನಂತ ನಾಗ್ ಅವರಿಗೆ ಸಲ್ಲಲಿದೆ.

50 ವರ್ಷ ಬಣ್ಣದ ಬದುಕಿನಲ್ಲಿ ಪೂರ್ಣಗೊಳಿಸಿರುವ ಅನಂತ್ ನಾಗ್ ಅವರು ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯಯಾಗಿದ್ದಾರೆ. ಸಾಲು ಸಾಲು ಪೆÇೀಷಕ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಬರುತ್ತಿದ್ದಾರೆ.

ಚಿತ್ರದಲ್ಲಿ ನಾಯಕನಾಗಿ ಮಿಂಚಿ ಇದೀಗ ಪೆÇೀಷಕ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 50 ವರ್ಷದ ಚಿತ್ರರಂಗದ ಹಾದಿ ಸವೆಸಿದ ಕನ್ನಡದ ಕೆಲವೇ ಕೆಲವು ನಟರಲ್ಲಿ ಅನಂತ್ ನಾಗ್ ಕೂಡ ಒಬ್ಬರು ಎನ್ನುವುದು ಹೆಗ್ಗಳಿಕೆ ವಿಷಯ.

ಹಿರಿಯ ನಟ ಶಿವರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ 50 ವರ್ಷ ಪೂರ್ಣಗೊಳಿಸಿರುವ ಹಿರಿಯ ನಟ ಅನಂತ್ ನಾಗ್ ಅವರಿಗೆ ಅಭಿನಂಧನೆಗಳು. ನಿಮ್ಮ ಪ್ರತಿಭೆ ಮತ್ತು ವರ್ಚಸ್ಸು ತಲೆಮಾರುಗಳಿಗೆ ಪ್ರೇರಣೆ ಎಂದು ಶುಭಹಾರೈಸಿದ್ದಾರೆ.

ನಟ ನಿರ್ದೇಶಕ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದ ಮೇರು ನಟ ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಅವರು ಚಿತ್ರರಂಗದಲ್ಲಿ 50 ವಸಂತ ಪೂರೈಸಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಚಿತ್ರದ ಅನಂತ ಪದ್ಮನಾಭ ಅವರಿಗೆ ಶುಭಾಷಯಗಳು, ನಿಮ್ಮ ಪಯಣ ಸ್ಪೂರ್ತಿದಾಯಕ,ಶುಭವಾಗಲಿ ಎಂದಿದ್ದಾರೆ.

ನಟ, ನಿರ್ಮಾಪಕ ಡಾಲಿ ಧನಂಜಯ ಅವರು 50 ವಸಂತ ಪೂರೈಸಿದ ಅನಂತ್ ನಾಗ್ ಅವರಿಗೆ ಶುಭ ಹಾರೈಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin