ಯುವ ನಿರ್ದೇಶಕ ಪವನ್ “ಫಸ್ಟ್ ಸ್ಯಾಲರಿ” ಪ್ರಯತ್ನಕ್ಕೆ ಗಣ್ಯರ ಶುಭ ಹಾರೈಕೆ
ಜೀವನದಲ್ಲಿ ಎಲ್ಲರಿಗೂ ಪ್ರಥಮಗಳಿಗೆ ಮಹತ್ವದ ಅನುಬಂಧವಿದೆ. ಮೊದಲ ಕೆಲಸ, ಮೊದಲ ಸಂಬಳ ಹೀಗೆ. ಹಲವು ಪ್ರಥಮಗಳು ಆ ವ್ಯಕ್ತಿಯ ಜೀವನಕ್ಕೆ ಮಹತ್ವದ ತಿರುವುದು ನೀಡುವ ವಿಷಯಗಳು, ಇದೀಗ “ಫಸ್ಟ್ ಸ್ಯಾಲರಿ”ಯ ಮೂಲಕ ಯುವ ನಿರ್ದೇಶಕ ಪವನ್ ವೆಂಕಟೇಶ್ ಭರವಸೆ ಮೂಡಿಸಿದ್ದಾರೆ.

“ಫಸ್ಟ್ ಸ್ಯಾಲಿರಿ”ಯ ಕಿರುಚಿತ್ರದ ಪ್ರದರ್ಶನ ಹಮ್ಮಿಕೊಳ್ಳುತ್ತಿದೆ. ನಿರ್ಮಾಪ ರಾಕ್ ಲೈನ್ ವೆಂಕಟೇಶ್, ಹಿರಿಯ ನಟಿ ಶೃತಿ ಸೇರಿದಂತೆ ಹಲವು ಗಣ್ಯರು ವೀಕ್ಷಿಸಿ ಪವನ್ ವೆಂಕಟೇಶ್ ಪ್ರಯತ್ನವನ್ನು ಮುಕ್ತ ಕಂಠದಿಂದ ಪ್ರಶಂಸಿದರು. ಕಿರುಚಿತ್ರವನ್ನು ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ನಿರ್ಮಾಣ ಮಾಡಿದ್ಧಾರೆ
ಈ ವೇಳೆ ಮಾತಿಗಿಳಿದ ರಾಕ್ ಲೈನ್ ವೆಂಕಟೇಶ್, ಡಿ.ವಿ.ಸುಧೀಂದ್ರ ಆತ್ಮೀಯರು ಪಿ.ಆರ್.ಓ ವೆಂಕಟೇಶ್ ಪುತ್ರ ಪವನ್ ವೆಂಕಟೇಶ್, “ಫಸ್ಟ್ ಸ್ಯಾಲರಿ” ಕಿರುಚಿತ್ರ ನಿರ್ದೇಶಿಸುವ ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದಾರೆ. ಕಿರುಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ಸಿಗಲಿ ಎಂದು ಹಾರೈಸಿದರು.
ಹಿರಿಯ ನಟಿ ಶೃತಿ ಮಾತನಾಡಿ ಡಿ.ವಿ.ಸುಧೀಂದ್ರ ನಿರ್ಮಾಣದ “ನಗುನಗುತಾ ನಲಿ” ಚಿತ್ರದಲ್ಲಿ ಅಭಿನಯಿಸಿದ್ದೆ. ಅವರ ಕುಟುಂಬದ ಪವನ್ ವೆಂಕಟೇಶ್ ಕಿರುಚಿತ್ರ ನಿರ್ಮಾಣ ಮಾಡಿದ್ದಾನೆ. ತಾಯಿ – ಮಗನ ಸೆಂಟಿಮೆಂಟ್ ಸನ್ನಿವೇಶಗಳು ಮನಸ್ಸಿಗೆ ಬಹಳ ಹತ್ತಿರವಾಯಿತು. ಕಣ್ಣಂಚಲಿ ನೀರು ತರಿಸಿತ್ತು.ತಾವು ಮೊದಲು “ಫಸ್ಟ್ ಸ್ಯಾಲರಿ” ಐನೂರು ರೂಪಾಯಿಗಳು ಪಡೆದಿದ್ದು ಮೊದಲ ಸ್ಯಾಲರಿ ಎಂದರು
ಸುಧೀಂದ್ರ ವೆಂಕಟೇಶ್ ಮಾತನಾಡಿ ಚಿಕ್ಕಪ್ಪ ಡಿ.ವಿ.ಸುಧೀಂದ್ರ ಪಾಲುದಾರಿಕೆಯಲ್ಲಿ ಆರು ಚಿತ್ರ ನಿರ್ಮಾಣ ಮಾಡಿದ್ದರು. ಮೊದಲ ಬಾರಿಗೆ ಕಿರುಚಿತ್ರ ನಿರ್ಮಾಣ ಮಾಡಿದ್ದೇನೆ. ಮಗ ಪವನ್ ಹಾಗೂ ಸ್ನೇಹಿತರು ಒಂದೊಳ್ಳೆ ಕಿರುಚಿತ್ರ ಮಾಡುತ್ತಿದ್ದೇವೆ ಎಂದು ಹೇಳಿದಾಗ ಜೊತೆಗೆ ನಿಂತೆ ಎಂದು ಹೇಳಿದರು

ನಿರ್ದೇಶಕ ಪವನ್ ವೆಂಕಟೇಶ್ ಮಾತನಾಡಿ ಗೆಳೆಯ ವಿಜಯ್ ಶಿವಕುಮಾರ್ ಬರೆದ ಕಥೆ. ಈ ಚಿತ್ರದಲ್ಲಿ ಅವರೆ ಮುಖ್ಯಪಾತ್ರದಲ್ಲೂ ಅಭಿನಯಿಸಿದ್ದಾರೆ. ಹರಿಣಿ ಶ್ರೀಕಾಂತ್, ಯತಿರಾಜ್, ತ್ರಿಶೂಲ್, ಸ್ನೇಹಶ್ರೀ, ರಕ್ಷಿತ್ ನಟಿಸಿದ್ದಾರೆ. ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ರಿಚರ್ಡ್ ಡ್ಯಾನಿಯಲ್ ಛಾಯಾಗ್ರಹಣ ಹಾಗೂ ಸಂಕಲನ ಮಾಡಿದ್ದಾರೆ. ಮನೋಜ್ ಕುಮಾರ್ ಮತ್ತು ರವಿ ಸಾಸನೂರು ಸಹ ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ. ನಿರ್ದೇಶಕನಾಗುವ ಕನಸನ್ನು ನನ್ನ ತಂದೆ ಸುಧೀಂದ್ರ ವೆಂಕಟೇಶ್ ಕಿರುಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ನನಸು ಮಾಡಿದ್ದಾರೆ ಎಂದರು
ನಟ ವಿಜಯ್ ಶಿವಕುಮಾರ್ ಮಾತನಾಡಿ ಕಣ್ಣಾರೆ ಕಂಡ ಅನೇಕ ಸನ್ನಿವೇಶಗಳೆ ಈ ಕಥೆಗೆ ಸ್ಪೂರ್ತಿ ಕಥೆ ಕೇಳಿದ ಪವನ್ ವೆಂಕಟೇಶ್ ಕಥೆ ಚೆನ್ನಾಗಿದೆ ನಾನೇ ನಿರ್ದೇಶನ ಮಾಡುತ್ತೇನೆ ಎಂದು ಹೇಳಿದರು

ಕಿರುಚಿತ್ರದಲ್ಲಿ ನಟಿಸಿರುವ ಹರಿಣಿ ಶ್ರೀಕಾಂತ್, ಯತಿರಾಜ್, ತ್ರಿಶೂಲ್ ಸಹ ನಿರ್ದೇಶಕರಾದ ಮನೋಜ್ ಕುಮಾರ್, ರವಿ ಸಾಸನೂರ್ ಹಾಗೂ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಮುಂತಾದವರು “ಫಸ್ಟ್ ಸ್ಯಾಲರಿ” ಬಗ್ಗೆ ಮಾತನಾಡಿದರು.


