ಆದ್ಯಾತ್ಮಿಕ ನಗರ ವಾರಣಸಿಯಲ್ಲಿ “ದೈಜಿ” : ವಿಶೇಷ ಪಾತ್ರದಲ್ಲಿ ಗುರುದೇಶಪಾಂಡೆ
ಈಗಾಗಲೇ ಟೀಸರ್ ನಿಂದ ಕುತೂಹಲ ಕೆರಳಿಸಿರುವ ಥ್ರಿಲ್ಲರ್ ಚಿತ್ರ ‘ದೈಜಿ’ ಸಿನೆಮಾ ತಂಡ ಅಧ್ಯಾತ್ಮಿಕ ನಗರ ವಾರಣಾಸಿಯಲ್ಲಿ ಚಿತ್ರೀಕರಣ ಮಾಡಿಕೊಂಡು ಬಂದಿದೆ.

ವಾರಾಣಸಿಯ, ಅಲೌಕಿಕತೆ, ಅಧ್ಯಾತ್ಮಿಕತೆ, ಅಲ್ಲಿನ ಘಾಟ್ ಗಳು, ಅಲ್ಲಿಯ ಕಾಲಾತೀತತೆಯಿಂದ ಕೂಡಿದ ಜೀವನ ಇವುಗಳು “ದೈಜಿ” ಸಿನೆಮಾದ ಮುಖ್ಯ ವಿಷಯವಾದ ಅಗೋಚರ, ಅತೀಂದ್ರಿಯ ಶಕ್ತಿ, ನಂಬಿಕೆ, ಮನುಷ್ಯನ ಕಾಡುವ ಈ ಶಕ್ತಿಗಳ ಬಗೆಗಿನ ಕಥೆಗೆ ಸರಿಯಾದ ಒಂದು ವಾತಾವರಣ ಒದಗಿಸಿ ಕೊಟ್ಟಿದೆ
ಶಿವಾಜಿ ಸೂರತ್ಕಲ್ 1 ಮತ್ತು 2 ಯಶಸ್ವಿ ಚಿತ್ರ ಕೊಟ್ಟ ನಿರ್ದೇಶಕ ಆಕಾಶ್ ಶ್ರೀವತ್ಸ ನಿರ್ದೇಶನ ಹಾಗೂ ನಿರ್ಮಾಪಕ ರವಿ ಕಶ್ಯಪ್ ಸಿನಿಮಾ ದೈಜಿ ನೈಜ ಘಟನೆ ಆಧಾರಿತ ಚಿತ್ರವಾಗಿದ್ದುಮನುಷ್ಯ ಹಾಗೂ ಅಲೌಕಿಕ, ಅತೀಂದ್ರಿಯ, ಅಗೋಚರ ಶಕ್ತಿಗಳ ನಡುವಿನ ಸಂಕೀರ್ಣ ಸಂಬಂಧಗಳ ಅನ್ವೇಷಣೆಯೇ ಇದರ ತಿರುಳು.
ಚಿತ್ರತಂಡ ಸತತವಾಗಿ ಮೂರು ದಿನಗಳ ಕಾಲ ರಾತ್ರಿಯಲ್ಲಿ ಚಿತ್ರೀಕರಣ ಮಾಡಿದ್ದು, ಇಲ್ಲಿಯ ಘಾಟ್ ಗಳು, ಸಣ್ಣ ಸಣ್ಣ ಓಣಿಗಳು, ಗಂಗಾ ಆರತಿ, ಅಧ್ಯಾತ್ಮಿಕತೆಯಿಂದ ಕೂಡಿದ ಭಕ್ತ ಸಮೂಹದ ಅನಿಯಂತ್ರಿತ ವಾತವರಣದಲ್ಲೇ, ಜನಜಂಗುಳಿಗಳ ಮಧ್ಯೆ ಸಿನಿಮಾದ ಮಹತ್ತರದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ
ದೈಜಿ ತಂಡಕ್ಕೆ ಮತ್ತೋರ್ವ ಕಲಾವಿದರಾದ, ಕನ್ನಡ ಸಿನೆಮಾದ ಹೆಸರಾಂತ ನಿರ್ದೇಶಕ ಗುರು ದೇಶಪಾಂಡೆ ಚಿತ್ರೀಕರಣದಲ್ಲಿ ಅತಿಥಿ ಪಾತ್ರದಲ್ಲಿ ಪಾಲ್ಗೊಂಡರು. ರಾಜಾ ಹುಲಿ, ರುದ್ರತಾಂಡವ ಅನೇಕ ಸಿನೆಮಾಗಳನ್ನು ನಿರ್ದೇಶಿಸಿರುವ ಗುರು ದೇಶಪಾಂಡೆ ಯವರು, ಈ ಚಿತ್ರದಲ್ಲಿ ಕಥಯ ಓಘಕ್ಕೆ ಹೊಂದುಕೊಂಡಂತೆ, ಅದಕ್ಕೆ ಮಹತ್ತರವಾದ ತಿರುವನ್ನು ತಂದುಕೊಡುವಂತಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರ ಅಗೋಚರ, ಅಲೌಕಿಕ ಶಕ್ತಿಗಳ ವಿವಿಧ ತಿರುಳುಗಳನ್ನು ಪರಿಚಯಿಸುವ, ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರುವ ಒಂದು ಪಾತ್ರವಾಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ.

ದೈಜಿ ಬರೀ ಚಾಣಾಕ್ಷ ಚಿತ್ರಕಥೆಯಷ್ಟೇ ಅಲ್ಲದೇ ಇದರ ಚಿತ್ರೀಕರಣ ಭಾರತದ ವಿವಿಧ ರಾಜ್ಯ, ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಯುನೈಟೆಡ್ ಕಿಂಗ್ಡಮ್ ಗಳಲ್ಲಿ ನಡೆದಿದ್ದು ಇದರ ಕಥೆಯು ಆಳ ಹಾಗೂ ವಿಸ್ತಾರತೆಯಿಂದ ಕೂಡಿದೆ ಎನ್ನುವುದು ಸ್ಪಷ್ಟ.ಈ ಸಿನೆಮಾದ ತಾರಾಗಣ ಕೂಡ ಕುತೂಹಲಕಾರಿಯಾಗಿದೆ.
ರಮೇಶ್ ಅರವಿಂದ್ ಹಾಗೂ ರಾಧಿಕಾ ನಾರಾಯಣ್ ಮನೋಜ್ಞ ನಟನೆಯು ಭಾವನಾತ್ಮಕ, ಸಸ್ಪೆನ್ಸ್, ರೋಮಾಂಚಕತೆಯ ಈ ಚಿತ್ರಕ್ಕೆ ಭದ್ರ ಬುನಾದಿಯಾಗಿದೆ. ತಾರಾಗಣದಲ್ಲಿ ದಿಗಂತ್ ಮಂಚಾಲೆ, ಅವಿನಾಶ್ ಯೆಳಂದೂರ್, ನಿಧಿ ಹೆಗ್ಡೆ, ಶ್ರೀಧರ್ ಕೊಣನೂರ್, ಬಿ.ಎಂ.ಗಿರಿರಾಜ್ ರವರು ಮುಖ್ಯ ಭೂಮಿಕೆಯಲ್ಲಿದ್ದರೆ, ಇನ್ನೂ ಹಾಲಿವುಡ್ ನಲ್ಲಿ ನಟಿಸಿರುವ ನಟರಾದ ಸ್ಯಾಂಡಿ ಹಿಗಿನ್ಸ್, ಸಾಲ್ ಯೂಸುಫ್, ಎಲ್ಲೆನ್ ಶಂಬರ್ಲಿಯನ್, ಫೆÇ್ಲೀರೆನ್ಶಿಯಾ ಮಾರ್ಟಿನೆಜû ಮುಖ್ಯ ಪಾತ್ರದಲ್ಲಿದ್ದಾರೆ, ಅಷ್ಟೇ ಅಲ್ಲದೇ ಮಿಸ್ ಐರ್ಲೆಂಡ್ ಅಲೆಕ್ಸಾಂಡ್ರಾ ಟೇಲರ್ ಈ ಚಿತ್ರದ ಅತೀ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು, ಈ ಸಿನೆಮಾದ ಕಥೆಯ ವಿಸ್ತಾರತೆ, ಅಂತರರಾಷ್ಟ್ರೀಯ ಮಟ್ಟದ ಮಹತ್ವಕ್ಕೆ ಸಾಕ್ಷಿಯಾಗಿದೆ ತೋರುತ್ತದೆ.
ಶ್ರೀಶ ಎಮ್. ಕುದುವಳ್ಳಿ À ಛಾಯಾಗ್ರಹಣವಿದ್ದು, ಜುಡಾ ಸ್ಯಾಂಡಿ ಹಿನ್ನೆಲೆ ಸಂಗೀತವಿದೆ. ಗಟ್ಟಿಯಾದ ಚಿತ್ರಕಥೆ, ಜಾಗತಿಕ ತಾರಾಗಣ, ಅದ್ಭುತ ಸನ್ನಿವೇಶಗಳಿಂದ ಕೂಡಿದ ದೈಜಿ ಚಿತ್ರ ಕನ್ನಡದ ಬಹುನಿರೀಕ್ಷಿತ ಚಿತ್ರವಾಗಿ ಹೊರಹೊಮ್ಮಿದೆ. ದೈಜಿ ಸಿನಿಮಾ ಎರಡು ದಿನಗಳ ಚಿತ್ರೀಕರಣ ಉಳಿದಿದ್ದು, ಈಗಾಗಲೇ ಪೆÇೀಸ್ಟ್ ಪೆÇ್ರಡಕ್ಷನ್ ಹಂತದ ಕೆಲಸಗಳು ಪ್ರಾರಂಭವಾಗಿದೆ.

